ಕುರುಗೋಡು: ತಾಲೂಕಿನ ಸಿಂಧಿಗೇರಿ ಗ್ರಾಮದ ಮಹಿಳೆಯರು ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್ ನೇತೃತ್ವದಲ್ಲಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಬರೆದ ಮನವಿ ಸೋಮವಾರ ತಹಸೀಲ್ದಾರ್‌ಗೆ ಸಲ್ಲಿಸಿದರು.
ಭೂರಹಿತರಿಗೆ ಭೂಮಿ, ನಿವೇಶನ ರಹಿತರಿಗೆ ನಿವೇಶನ, ಅಂಗವಿಕಲ, ಸಂಧ್ಯಾಸುರಕ್ಷ, ವೃದ್ಧಾಪ್ಯ, ವಿಧವಾ ವೇತನಗಳ ಹಣ ಹೆಚ್ಚಳ ಮಾಡಬೇಕು ಮತ್ತು ಕೃಷಿ ಕಾರ್ಮಿಕರು ಜಮೀನುಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮೃತಪಟ್ಟರೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ನರಸಪ್ಪ ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆ ನೀಡಿದರು. ಶಿವರಾಜ್, ಹುಲಿಗೆಮ್ಮ, ರೇಣಮ್ಮ, ಕೆಂಚಮ್ಮ, ಹುಲುಗಪ್ಪ, ಕೆಂಚಮಾಳಪ್ಪ, ಮಾಳಮ್ಮ, ಗಾಯಿತ್ರಿ ಮತ್ತು ವೆಂಕಮ್ಮ ಇದ್ದರು.ಕುರುಗೋಡು ತಾಲೂಕಿನ ಸಿಂಧಿಗೇರಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ನರಸಪ್ಪಗೆ ಮನವಿ ಸಲ್ಲಿಸಿದರು.