ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಇಂದು ಮನವಿ

KannadaprabhaNewsNetwork |  
Published : Sep 04, 2026, 03:15 AM IST
ಫೋಟೋ- ತೇಲ್ಕೂರ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿಉತ್ತರ ಕರ್ನಾಟಕದ ಜನರಿಗೆ ಆಡಳಿತಾತ್ಮಕ ಅನುಕೂಲ ಕಲ್ಪಿಸಲು 2ನೇ ರಾಜಧಾನಿ ಘೋಷಣೆಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಹಾಗೂ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಉತ್ತರ ಕರ್ನಾಟಕದ ಜನರಿಗೆ ಆಡಳಿತಾತ್ಮಕ ಅನುಕೂಲ ಕಲ್ಪಿಸಲು 2ನೇ ರಾಜಧಾನಿ ಘೋಷಣೆಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಹಾಗೂ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೃಷ್ಣಾ ನದಿಯ ನೀರನ್ನು ದಕ್ಷಿಣ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಯಾವುದೇ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಬಾರದು. ಉತ್ತರ ಕರ್ನಾಟಕದ ಕೃಷ್ಣಾ ನೀರಿನ ಹಕ್ಕನ್ನು ರಕ್ಷಿಸಬೇಕು.

ರಾಜ್ಯದ ಪಾಲಿನ 130 ಟಿಎಂಸಿ ನೀರನ್ನು UKP-3 ಅಡಿಯಲ್ಲಿ ಬಳಕೆ ಮಾಡಲು ಕೇಂದ್ರ ಸರ್ಕಾರ ತಕ್ಷಣ ಗೆಜೆಟ್ ಅಧಿಸೂಚನೆ ಹೊರಡಿಸಿ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸರ್ಕಾರಿ ಯೋಜನೆಗಳ ಭೂಸ್ವಾಧೀನದಲ್ಲಿ ಎಲ್ಲರಿಗೂ ಸಮಾನ ಪರಿಹಾರ ನೀಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಿಡದಿ ಟೌನ್‌ಗೆ ಆಗಿರುವ ತಾರತಮ್ಯವನ್ನು ಮರುಪರಿಶೀಲಿಸಿ ನ್ಯಾಯ ಒದಗಿಸಬೇಕು.

ಮುಂಗಾರು ಮಳೆ ಕೊರತೆಯಿಂದ ಬಾಗಲಕೋಟೆ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು. ವಿಕೋಪ ನಿರ್ವಹಣಾ ನಿಯಮಗಳ ನೆಪವೊಡ್ಡದೆ ಪರಿಹಾರ ಒದಗಿಸಬೇಕು.

ಕಬ್ಬು ಹಂಗಾಮು ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ರೈತರಿಗೆ ನ್ಯಾಯಯುತ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಎಂದು ಸೆ.4ರಂದು ಬಾಗಲಕೋಟೆಗೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕೃಷ್ಣಾರತಿಗೆ ರೈತರಿಂದ ಸಕಲ ಸಿದ್ಧತೆ
ಶರಣರ ವಚನಗಳಲ್ಲಿ ಸಮಾಜ ಸುಧಾರಣೆಯ ಶಕ್ತಿ