ಭೂ ದಾಖಲೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ

KannadaprabhaNewsNetwork |  
Published : Jan 31, 2025, 12:50 AM IST
ಶಿರ್ಷಿಕೆ-30ಕೆ.ಎಂ.ಎಲ್‌.ಅರ್.3-ಮಾಲೂರಿನ ಕರವೇ ಕಾರ್ಯಕರ್ತರು ತಹಸೀಲ್ದಾರ್‌ ಕಚೇರಿ ಮುಂಭಾಗ ಪ್ರತಿಭಟನೆ ನಡಿಸಿ ಭೂದಾಖಲೆ ಕೋಣೆಯಲ್ಲಿ ನಡೆಯುತ್ತಿರುವ ಭ್ರಷಾಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಬೆಂಗಳೂರು ಸಮೀಪ ಇರುವ ಮಾಲೂರಿನಲ್ಲಿ ನೂರಾರು ಬಹೃತ್‌ ಕೈಗಾರಿಕೆಗಳ ಬಂದಿದ್ದು ,ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಭೂಮಿಯ ದಾಖಲೆ ತೆಗೆಸಲು ಸರ್ಕಾರಕ್ಕೆ ಚಲನ್‌ ಕಟ್ಟಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಕಚೇರಿಯಲ್ಲಿ ದಾಖಲೆ ಇಲ್ಲ ಎಂದು ಎಂಡಾರ್ಸ್ಮೆಂಟ್‌ ನೀಡಿ ಕೈತೊಳೆದುಕೂಳ್ಳುತಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದ ತಾಲೂಕು ಕಚೇರಿಯ ಭೂ ಸರ್ವೆ ದಾಖಲೆಗಳ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಶಿವಾರ ನಾಣಿ, ಬೆಂಗಳೂರು ಸಮೀಪ ಇರುವ ಮಾಲೂರಿನಲ್ಲಿ ನೂರಾರು ಬಹೃತ್‌ ಕೈಗಾರಿಕೆಗಳ ಬಂದಿದ್ದು ,ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ.ಒಂದು ಚದರ ಭೂಮಿಗೆ ಲಕ್ಷಾಂತರ ರು.ಗಳಾಗಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಭೂಮಿಯ ದಾಖಲೆ ತೆಗೆಸಲು ಸರ್ಕಾರಕ್ಕೆ ಚಲನ್‌ ಕಟ್ಟಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಕಚೇರಿಯಲ್ಲಿ ದಾಖಲೆ ಇಲ್ಲ ಎಂದು ಎಂಡಾರ್ಸ್ಮೆಂಟ್‌ ನೀಡಿ ಕೈತೊಳೆದುಕೂಳ್ಳುತಿದ್ದಾರೆ ಎಂದು ಆರೋಪಿಸಿದರು.

ಮಧ್ಯವರ್ತಿಗಳ ಹಾವಳಿ

ಆದರೆ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸದರೆ ಕೇವಲ 3 ದಿನಗಳಲ್ಲಿ ದಾಖಲಾತಿಗಳು ಸಿಗುತ್ತಿವೆ. ಈ ಬಗ್ಗೆ ನೀಡಿದ ದೂರನ್ನು ಪರಿಗಣಿಸಿ ಹಿಂದಿನ ಜಿಲ್ಲಾಧಿಕಾರಿ ಅಕ್ರಂಪಾಷ, ದಾಖಲೆಗಳ ಕಚೇರಿಯಲ್ಲಿ ಅಕ್ರಮವಾಗಿ ಸೇವೆ ಸಲ್ಲಿಸುತ್ತಿದ್ದ ಅರೆಕಾಲಿಕ ಸಿಬ್ಬಂದಿಯನ್ನು ತೆಗೆದುಹಾಕಿದ್ದರು. ಈಗ ಮತ್ತೇ ಅರೆಕಾಲಿಕ ಸಿಬ್ಬಂದಿ ಬಂದು ಕೆಲಸ ಮಾಡುತ್ತಿದ್ದಾರೆ ಎಂದ ದೂರಿದರು.

ಮಧ್ಯವರ್ತಿ ಮೂಲಕ ಜಮೀನಿನ ಮಾಹಿತಿಯನ್ನು ಪಡೆದರೆ ಒಂದು ದಾಖಲೆಗೆ 10 ಸಾವಿರದಿಂದ 20 ಸಾವಿರದವರೆಗೆ ಹಣ ಪಡೆಯುತ್ತಾರೆ. ಆದರೆ ರೈತರೇ ನೇರವಾಗಿ ಅರ್ಜಿ ಸಲ್ಲಿಸಿದರೆ ದಾಖಲೆಯೇ ಇಲ್ಲ ಎನ್ನುತ್ತಾರೆ. ಇದರಿಂದ ರೈತರು ಬಹಳ ತೊಂದರೆ ಅನುಭವಿಸುತ್ತಿದ್ದು, ಈ ಕೊಡಲೇ ತಹಸೀಲ್ದಾರ್‌ ಅವರು ಕಾಯಂ ಸಿಬ್ಬಂದಿ ನೇಮಕ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಕ್ರಮ ಕೈಗೊಳ್ಳುವ ಭರವಸೆ

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್‌ ರೂಪ ಅವರು ಇಂದಿನಿಂದಲೇ ಸರ್ಕಾರಿ ಕಚೇರಿ ವೇಳೆ ಮುಗಿದ ತಕ್ಷಣ ತಾವೇ ಭೂದಾಖಲೆ ಕೊಠಡಿಗೆ ಬೀಗ ಹಾಕಿ ಎಲ್ಲ ವಹಿವಾಟುಗಳನ್ನು ತಮ್ಮ ಕಣ್ಗಾವಲಿನಲ್ಲಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆಂಪನಹಳ್ಳಿ ರವಿ, ಮಣಿಗಂಡನ್‌, ಟಿ.ಕೆ. ರಮೇಶ್‌, ಸಿ.ಡಿ.ನಾಗರಾಜ್‌, ಮಿಥನ್‌, ಶಿವಕುಮಾರ್‌, ಸುಧಾಕರ್‌, ಜವಳಿ ಮಂಜುನಾಥ್‌, ಸುರೇಶ್‌ ರೆಡ್ಡಿ, ಚಿರಂಜೀವಿ, ಅಮರಾವತಿ, ದ್ರಾಕ್ಷೀಯಿಣಿ, ಕೊಪ್ಪಚಂದ್ರ, ರಾಮೇನಹಳ್ಳಿ ಹರೀಶ್‌, ನಂದಾ ರೆಡ್ಡಿ ಇನ್ನಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ