ಯೋಗದಿಂದ ಮಾನಸಿಕ, ದೈಹಿಕ ಸಾಮರ್ಥ್ಯ ಸದೃಢ: ಧನಂಜಯ

KannadaprabhaNewsNetwork |  
Published : Jun 22, 2024, 01:33 AM ISTUpdated : Jun 22, 2024, 07:10 AM IST
ಗೊರವಿನಕಲ್ಲು ರಸ್ತೆಯ ಶ್ರೀ ದುರ್ಗಾ ಐಟಿಐ ಕಾಲೇಜಿನಲ್ಲಿ 10 ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಭ್ಯಾಸ ಮಾಡಿಸಲಾಯಿತು. | Kannada Prabha

ಸಾರಾಂಶ

ಶಾಲಾ - ಕಾಲೇಜು ಹಂತದಲ್ಲಿ ಮಕ್ಕಳಿಗೆ ನಿತ್ಯ ಯೋಗ ಮಾಡಿಸುವುದರಿಂದ ಮಾನಸಿಕ ಮತ್ತು ದೈಹಿಕ ಸದೃಢಗೊಳ್ಳಬಲ್ಲರು ಎಂದು ದುರ್ಗಾ ಐಟಿಐ ಉಪನ್ಯಾಸಕ ಧನಂಜಯ ತಿಳಿಸಿದರು. 

 ಹೊಸದುರ್ಗ : ಶಾಲಾ - ಕಾಲೇಜು ಹಂತದಲ್ಲಿ ಮಕ್ಕಳಿಗೆ ನಿತ್ಯ ಯೋಗ ಮಾಡಿಸುವುದರಿಂದ ಮಾನಸಿಕ ಮತ್ತು ದೈಹಿಕ ಸದೃಢಗೊಳ್ಳಬಲ್ಲರು ಎಂದು ದುರ್ಗಾ ಐಟಿಐ ಉಪನ್ಯಾಸಕ ಧನಂಜಯ ತಿಳಿಸಿದರು. ನಗರದ ಗೊರವಿನಕಲ್ಲು ರಸ್ತೆ ಶ್ರೀ ದುರ್ಗಾ ಐಟಿಐ ಕಾಲೇಜಿನಲ್ಲಿ ನಡೆದ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಕೃತಿ ತವರಾದ ಭಾರತದ ಪ್ರಮುಖ ಕ್ರೀಡೆಗಳಲ್ಲಿ ಯೋಗವೂ ಒಂದು. ಯೋಗ ಪಿತಾಮಹ ಪತಂಜಲಿ ಮಹರ್ಷಿ ಮನುಕುಲಕ್ಕೆ ಯೋಗ ದೈವದತ್ತ ಆಚರಣೆಯಾಗಿ ಕೊಟ್ಟು ಹೋಗಿದ್ದಾರೆ ಎಂದು ಅವರುಋ ಬಣ್ಣಿಸಿದರು.

ನಾವು ಪ್ರತಿನಿತ್ಯ ತಿನ್ನುತ್ತಿರುವ ಆಹಾರ ವಿಷಪೂರಿತವಾಗಿದೆ. ಸಿರಿಧಾನ್ಯ ಮತ್ತು ಸಾವಯವ ಪದಾರ್ಥ ಬಳಕೆ ಮಾಡಿಕೊಂಡು ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಯೋಗ ಮಾಡಿದ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದೆ ಬಂದು ಅಗಾಧ ಸಾಧನೆ ಮಾಡಬಲ್ಲರು. ಯೋಗ ಮಾಡುವವರು ಯೋಗಿಗಳು, ಸಾಧಕರು ಮತ್ತು ತ್ಯಾಗಿಗಳೂ ಆಗಬಲ್ಲರು. ಯೋಗ ಮಾಡಲು ವಯಸ್ಸು ಅಡ್ಡಬರುವುದಿಲ್ಲ. ಎಲ್ಲಾ ವಯಸ್ಸಿನವರೂ ಯೋಗ ಮಾಡಬಹುದು. ಯೋಗದಿಂದ ದೀರ್ಘಾಯುಷಿಯಾಗಬಹುದು. ಇದರಿಂದ ಸಮಾಜವನ್ನು ವ್ಯಸನಮುಕ್ತ ಮಾಡಬಹುದು ಎಂದು ಅವರು ಹೇಳಿದರು.

ನಂತರ ಉಪನ್ಯಾಸಕ ಡಿ.ಎಂ ಕುಮಾರ್ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು. ಕಾರ್ಯಕ್ರಮದಲ್ಲಿ ದುರ್ಗಾ ಐಟಿಐ ಪ್ರಾಚಾರ್ಯ ಪುನೀತ್, ವೈ. ಕುಮಾರಸ್ವಾಮಿ, ರಮೇಶ್, ಕೆ ಎಸ್. ನಟರಾಜ್, ಮಹೇಶ್, ಹರೀಶ್, ರಾಜು , ಬಸವರಾಜ್, ಮೂಡ್ಲಪ್ಪ ಹಾಗೂ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ