ಮಾನಸಿಕ ಕಾಯಿಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ : ಸಿ.ಟಿ.ರವಿ

KannadaprabhaNewsNetwork |  
Published : Sep 13, 2025, 02:04 AM IST
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮಾನಸಿಕ ಆರೋಗ್ಯ ಅರಿವು ಜಾಥಾ ಕಾರ್ಯಕ್ರಮವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮನುಷ್ಯನಿಗೆ ಇಂದು ದೈಹಿಕ ಕಾಯಿಲೆಗಿಂತ ಮಾನಸಿಕ ಕಾಯಿಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

- ಮಾನಸಿಕ ಆರೋಗ್ಯ ಅರಿವು ಜಾಥಾ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮನುಷ್ಯನಿಗೆ ಇಂದು ದೈಹಿಕ ಕಾಯಿಲೆಗಿಂತ ಮಾನಸಿಕ ಕಾಯಿಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಭಾರತೀಯ ಮನೋ ವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಮಾನಸಿಕ ಆರೋಗ್ಯ ಅರಿವು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒತ್ತಡದ ಜೀವನ, ಅತಿಯಾದ ನಿರೀಕ್ಷೆ, ಹಂಚಿಕೊಳ್ಳುವಂತಹ ಸ್ನೇಹ ಸಂಬಂಧ ಕಡಿಮೆ ಮಾಡಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. ಸಮಾಜದೊಂದಿಗೆ ಸಂಪರ್ಕ ಆಗದಿದ್ದರೆ ವ್ಯಕ್ತಿಗತವಾಗಿ ಮಾನಸಿಕ ಒತ್ತಡ ರೂಪುಗೊಳ್ಳುತ್ತದೆ ಎಂದು ಹೇಳಿದರು.

ಈಗಿನ ಜೀವನ ಶೈಲಿ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದು, ಇದೊಂದು ದೊಡ್ಡ ಪಿಡುಗಾಗಿ ಪರಿವರ್ತನೆಯಾಗಿದೆ. ಮಾದಕ ದ್ರವ್ಯಗಳು ಇದಕ್ಕೆ ಬೆಂಬಲವಾಗಿ ನಿಂತಿದೆ. ಇದರಿಂದ ಹೊರಬರಲು ಏನು ಮಾಡಬೇಕೆಂಬ ಬಗ್ಗೆ ಅರಿವು ಮೂಡಿಸುವುದೇ ಈ ಜಾಥಾದ ಪ್ರಮುಖ ಉದ್ದೇಶ ಎಂದರು.

ಒತ್ತಡದಿಂದ ಮುಕ್ತವಾಗಲು ಪೂರ್ವಿಕರ ಜ್ಞಾನ ಬಳಸಿಕೊಂಡು ಪರಿಪೂರ್ಣ ಪ್ರಯತ್ನ ಮಾಡಿದಾಗ ಮಾನಸಿಕತೆಯಿಂದ ಹೊರ ಬರಲು ಸಾಧ್ಯ ಎಂದು ಹೇಳಿದರು.

ಆಸೆಗಳನ್ನು ತ್ಯಜಿಸುವುದೂ ಸಹ ಆಂತರಿಕ ನೆಮ್ಮದಿಗೆ ಪೂರಕ. ಪರಿಸರ ಮತ್ತು ಸಮಾಜಕ್ಕೆ ಹಿತಕಾರಿ ಎಂದು ಶ್ರೀಗಳು ಹೇಳಿರುವುದನ್ನು ಸರ್ವರೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುವ ಅಗತ್ಯ ಇದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ಮಾನಸಿಕ ಒತ್ತಡ ಇಂದು ದೇಹದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಆರೋಗ್ಯವಂತರ ನ್ನಾಗಿ ಕರೆಯುತ್ತೇವೆ ಎಂದು ಹೇಳಿದರು.

ಮಾನಸಿಕ ಆರೋಗ್ಯದಿಂದ ವೇದನೆ ಅನುಭವಿಸುತ್ತಿರುವವರಿಗೆ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತವಾಗಿ ಅರಿವು ಮೂಡಿಸಿ ನೆರವು ನೀಡುವ ಬಹುದೊಡ್ಡ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತವಾಗಿ ಉಚಿತ ಆರೋಗ್ಯ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ನಿರಂತರ ನಡೆಯುತ್ತಿದೆ ಎಂದು ಹೇಳಿದರು.

ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬ ಬುದ್ದರ ಸಂದೇಶವನ್ನು ಎಲ್ಲರೂ ಪಾಲಿಸಿದಾಗ ಇಂತಹ ಮಾನಸಿಕ ವೇದನೆ ಯಿಂದ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಜಾಥಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಭಾರತೀಯ ಮನೋವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲಜಾಕ್ಷಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಡಾ. ನಾರಾಯಣ್ ಮುತಾಲಿಕ್, ಡಾ. ವೆಂಕಟೇಶ್, ಡಾ. ಲೋಕೇಶ್ ಬಾಬು, ಡಾ. ಕೃಷ್ಣೇಗೌಡ, ಡಾ. ಚಂದ್ರಶೇಖರ್, ಡಾ. ವೀಣಾ, ಡಾ. ಗೀತಾ ವೆಂಕಟೇಶ್ ಇದ್ದರು.

ಪ್ರಧಾನಿಯನ್ನ ಕೊಲ್ಬೇಕು ಎಂದವರ ಮೇಲೆ ಸುಮೋಟೋ ಕೇಸ್ ದಾಖಲಾಗಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು: ಪ್ರಧಾನಿಯನ್ನ ಕೊಲ್ಬೇಕು ಎಂದವರ ಮೇಲೆ ಸುಮೋಟೋ ಕೇಸ್ ದಾಖಲಾಗಲ್ಲ. ಆದರೆ, ಆ್ಯಕ್ಷನ್‍ಗೆ ರಿಯಾಕ್ಷನ್ ಆಗುತ್ತೆ ಅಂದ್ರೆ ಎಫ್‌ಐಆರ್‌ ಆಗುತ್ತೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.ಮದ್ದೂರಿಗೆ ಭೇಟಿ ನೀಡಿದ್ದ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಸುಮೋಟೋ ಕೇಸ್‌ ದಾಖಲಿಸಿರುವುದಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ಹಿಂದೂ ದೇವರ ನಿರಾಕರಿಸಿ, ಪಾಕಿಸ್ತಾನ ಜಿಂದಾಬಾಂದ್ ಹೇಳಿ, ಕಲ್ಲು ಹೊಡೆದ್ರು ಸಹಿಸಿಕೊಳ್ಳಬೇಕು. ಸಹನೆಗೂ ಒಂದು ಮಿತಿ ಇದೆ ಅಲ್ವಾ, ಎಷ್ಟು ದಿನ ಅಂತ ಸಹಿಸಿಕೊಳ್ಳೋದು ಗಣಪತಿ ನೋಡಿದ ಕೂಡಲೇ ಉಗಿಯಬೇಕು ಅನ್ಸತ್ತೆ ಅಂದ್ರೆ ಆ ಪ್ರಚೋದನೆ ಎಲ್ಲಿಂದ ಬಂತು. ಅಪ್ಪ ಅಮ್ಮ ಹೇಳಿಕೊಟ್ರಾ, ಮದರಸಾಗಳು ಹೇಳಿಕೊಟ್ವಾ ಅಥವ ಹುಟ್ಟುವಾಗ್ಲೆ ಭಯೋತ್ಪಾ ದಕರ ಬ್ಲಡ್ ಬೆರಕೆಯಾಗಿ ಹುಟ್ಟಿವೆಯೋ ಎಂದು ಪ್ರಶ್ನೆ ಮಾಡಿದರು.ಕಲ್ಲು ಹೊಡೆದವರ ಒಪ್ಪಿಕೊಂಡ್ರು ನಮ್ಮಿಂದ ತಪ್ಪಾಗಿದೆ ಅಂತ ಅವರಿಗೆ ಮಾತ್ರ ಕೇಸ್ ಹಾಕಿದ್ರೆ ಬೇಜಾರಾಗ್ತಾರೆ ಅಂತ ನನ್ನ, ಯತ್ನಾಳ್ ಮೇಲೆ ಕೇಸ್ ಹಾಕಿದ್ದಾರೆ, ಉದಯಗಿರಿ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡ್ದೋರ ಕೇಸ್ ಹಿಂಪಡೆಯಲು ಶಿಫಾರಸ್ಸು ಮಾಡಿದ್ದೀರಾ, ಕೇಸ್ ಹಾಕೋಕೆ ನಿಮಗ್ಯಾವ ನೈತಿಕತೆ ಇದೆ. ಸತ್ಯ ಹೇಳಿದರೆ ಕೇಸ್ ಹಾಕ್ತಾರೆ, ಇಲ್ಲ ಸಿಎಂ ಹೇಳಿದಂತೆ ಸುಳ್ಳು ಹೇಳಬೇಕು ಎಂದರು.

ಇಸ್ಲಾಂ ಅಂದ್ರೆ ಶಾಂತಿ, ಶಾಂತಿ ಇರೋ ಇಸ್ಲಾಂ ಜಗತ್ತಿನ ಭಯೋತ್ಪಾದನೆಗೆ ಬೀಜ, ಗೊಬ್ಬರ, ನೀರು ಹಾಕ್ತಿರೋದು, ಸುಳ್ಳು ಹೇಳಿದ್ರೆ ಹೇ... ಹಮಾರಾ ಹೈ... ಹಮಾರಾ ಹೈ ಅಂತಾರೆ, ಸತ್ಯ ಹೇಳಿದ್ರೆ ಕೇಸ್ ಹಾಕ್ತಾರೆ ಎಂದು ಹೇಳಿದರು. 12 ಕೆಸಿಕೆಎಂ 2ಚಿಕ್ಕಮಗಳೂರಿನಲ್ಲಿ ಶುಕ್ರವಾರ ನಡೆದ ಮಾನಸಿಕ ಆರೋಗ್ಯ ಅರಿವು ಜಾಥಾವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ