ಸಂಗೀತಗಾರರು ಹೃದಯ ಸಾಮ್ರಾಟರು, ಒಮ್ಮೆ ಜನರ ಮನಸ್ಸು ಗೆದ್ದರೆ ಶಾಶ್ವತವಾಗಿ ಉಳಿಯುತ್ತಾರೆ.
ಕೊಪ್ಪಳ: ಪರಿಶುದ್ಧ ಸಂಗೀತ ಮತ್ತು ಸಾಹಿತ್ಯಾಭಿರುಚಿಯಿಂದ ಮಾನಸಿಕ ನೆಮ್ಮದಿ ಮತ್ತು ಸಾಮಾಜಿಕ ಸ್ವಾಸ್ಥ್ಯ ಎಂದು ಹಿರಿಯ ಪತ್ರಕರ್ತರ ಸೋಮರಡ್ಡಿ ಅಳವಂಡಿ ಹೇಳಿದ್ದಾರೆ.
ಸಮೀಪದ ಭಾಗ್ಯನಗರದ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪಪಂ ಬಯಲು ರಂಗಮಂದಿರದಲ್ಲಿ ಪಂಡಿತ ದಿವಂಗತ ಗೋವಿಂದರಾಜ ಬೊಮ್ಮಲಾಪುರ ಹಾಗೂ ಅಂಬಣ್ಣ ಕೊಪ್ಪರರವರ 6ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಸ್ವರ ಸಾಧನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತಗಾರರು ಹೃದಯ ಸಾಮ್ರಾಟರು, ಒಮ್ಮೆ ಜನರ ಮನಸ್ಸು ಗೆದ್ದರೆ ಶಾಶ್ವತವಾಗಿ ಉಳಿಯುತ್ತಾರೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಮೂಲ ಸಂಗೀತ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ವಿಷಾದಿಸಿದರು.
ಪಪಂ ಅಧ್ಯಕ್ಷ ರಮೇಶ್ ಹ್ಯಾಟಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಯುವಕರನ್ನು ಒಳ್ಳೆಯ ದಾರಿಗೆ ಕೊಂಡೊಯ್ಯುತ್ತವೆ. ಸದೃಢ ಸಮಾಜ ನಿರ್ಮಾಣಕ್ಕೆ ಇವು ಅಗತ್ಯವೆಂದರು.
ಸಹಾಯಕ ನಿರ್ದೇಶಕ ಕರ್ಣಕುಮಾರ್,ಇಲಾಖೆ ನೀಡುವ ಧನಸಹಾಯವನ್ನು ಸಮರ್ಪಕವಾಗಿ ಬಳಸಿಕೊಂಡು ವಿವಿಧ ಕಲಾ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವೀರಪ್ಪ ಶ್ಯಾವಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಹೇಮಾವತಿ ಅಂಬಣ್ಣ, ರುಕ್ಮಣ್ಣ ಶ್ಯಾವಿ, ಕನಕರಾಜ ರೂಢಿಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತ ಪ್ರಮೋದ ಕುಲಕರ್ಣಿಗೆ ಪತ್ರಿಕಾ ಸೌರಭ ಸಿರಿ ಪ್ರಶಸ್ತಿ ಹಾಗೂ ಜಂಪ್ ರೋಪ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅಬ್ದುಲ್ ರಜಾಕ್ ಟೈಲರ್ ಗೆ ಕ್ರೀಡಾ ಸೌರಭ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ನೃತ್ಯ ಪ್ರದರ್ಶನ ಆಕರ್ಷಕವಾಗಿ ಮೂಡಿ ಬಂದವು. ರವೀಂದ್ರ ಸೋರಗಾವಿ ಭಾವಗೀತೆಗಳು ಜನಮನಸೂರೆಗೊಂಡವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.