ಲಂಬಾಣಿ ತಾಂಡಾಗಳಲ್ಲಿ ಮೇರಾ, ದವಾಳಿ ಸಂಭ್ರಮ

KannadaprabhaNewsNetwork |  
Published : Nov 14, 2026, 02:00 AM IST
ಲಂಬಾಣಿ ತಾಂಡಗಳಲ್ಲಿ ಮೇರಾ-ದವಾಳಿ ಸಂಭ್ರಮ | Kannada Prabha

ಸಾರಾಂಶ

ಜಿಪಂ ಚುನಾವಣೆ ಸ್ಪರ್ಧಾ ಆಕಾಂಕ್ಷಿಯಾಗಿರುವ ಎಂಎನ್‌ಜೆ ಮಂಜು ಅವರಿಗೆ ತಾಲೂಕಿನ ಜನತೆಯ ಆಶಿರ್ವಾದ ಇರಲಿದೆ. ಮಂಜು ಅವರು ಈಗಾಗಲೇ ಕೊರಟಗೆರೆ ಕ್ಷೇತ್ರದಲ್ಲಿ ೧೦ವರ್ಷದಿಂದ ಸಮಾಜಸೇವೆ ಮಾಡಿದ್ದಾರೆ. ಬಡವರ ಪರವಾದ ಸಮಾಜ ಸೇವೆಯೆ ಚುನಾವಣೆಯಲ್ಲಿ ಅವರಿಗೆ ಶ್ರೀರಕ್ಷೆ ಆಗಲಿದೆ .

ಕನ್ನಡಪ್ರಭ ವಾರ್ತೆ ಕೊರಟಗೆರೆ

ಲಂಬಾಣಿ ಸಮುದಾಯದ ದೀಪಾವಳಿ (ದವಾಳಿ) ಹಬ್ಬದಲ್ಲಿ ಹಿರಿಯರಿಗೆ ವಿಶೇಷ ಗೌರವ ನೀಡುವುದು ವಿಶೇಷ. ಮಹಿಳೆಯರು ದೇವಾಲಯದಿಂದ ಪ್ರತಿಯೊಂದು ಮನೆಮನೆಗೆ ಹೋಗಿ ಬೆಳಗುವ ಮೇರಾ (ದೀಪಾ) ಕಾರ್ಯಕ್ರಮವು ನನಗೆ ತುಂಬಾ ಅಚ್ಚುಮೆಚ್ಚು ಎಂದು ಕೊರಟಗೆರೆ ಸಮಾಜ ಸೇವಕ ಎಂಎನ್‌ಜೆ ಮಂಜುನಾಥ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಮತ್ತು ಬಿ.ಡಿ.ಪುರ ಗ್ರಾಪಂನ ಮಾದೇನಹಳ್ಳಿ, ಅರಸಾಪುರ ಮತ್ತು ಔದಾರನಹಳ್ಳಿ ಲಂಬಾಣಿ ತಾಂಡಾಗಳಲ್ಲಿ ನಡೆದ ದೀಪಾವಳಿಯ ಮೇರಾ-ದವಾಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಲಂಬಾಣಿ ಸಮುದಾಯದ ಮೇರಾ ಕಾರ್ಯಕ್ರಮವು ನಮ್ಮ ದೇಶದ ಹಿರಿಯರಿಗೆ ವಿಶೇಷ ಗೌರವದ ಸಂಕೇತವಾಗಿದೆ. ಲಂಬಾಣಿ ತಾಂಡಾದ ಪ್ರತಿಮನೆಯ ಮಹಿಳೆಯರು ವಿಶೇಷ ಉಡುಗೆಗಳನ್ನು ತೊಟ್ಟು ಕುಣಿಯುವ ಆಚರಣೆಯು ಗ್ರಾಮದ ಒಗ್ಗಟ್ಟು ತೊರಿಸುತ್ತದೆ. ಬಂಜಾರ ಜನಾಂಗದ ಅತಿದೊಡ್ಡ ಹಬ್ಬವು ಇನ್ನಷ್ಟು ಸುಂದರವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಮಾದೇನಹಳ್ಳಿ ತಾಂಡಾದ ಗುತ್ತಿಗೆದಾರ-ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಜಿಪಂ ಚುನಾವಣೆ ಸ್ಪರ್ಧಾ ಆಕಾಂಕ್ಷಿಯಾಗಿರುವ ಎಂಎನ್‌ಜೆ ಮಂಜು ಅವರಿಗೆ ತಾಲೂಕಿನ ಜನತೆಯ ಆಶಿರ್ವಾದ ಇರಲಿದೆ. ಮಂಜು ಅವರು ಈಗಾಗಲೇ ಕೊರಟಗೆರೆ ಕ್ಷೇತ್ರದಲ್ಲಿ ೧೦ವರ್ಷದಿಂದ ಸಮಾಜಸೇವೆ ಮಾಡಿದ್ದಾರೆ. ಬಡವರ ಪರವಾದ ಸಮಾಜ ಸೇವೆಯೆ ಚುನಾವಣೆಯಲ್ಲಿ ಅವರಿಗೆ ಶ್ರೀರಕ್ಷೆ ಆಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯ ಗಂಗಾಧರಯ್ಯ, ವೆಂಕಟರೆಡ್ಡಿ, ಮಂಜುನಾಥ, ಮುಖಂಡರಾದ ಕೃಷ್ಣಮೂರ್ತಿ, ರಾಮಕೃಷ್ಣನಾಯ್ಕ, ಜಯಣ್ಣ, ಸಿದ್ದಪ್ಪ, ರಾಯವಾರ ರಾಮಕೃಷ್ಣ, ವಿಜಯ್‌ಶಂಕರ್, ರಾಮಸ್ವಾಮಿ, ಗಂಗಾಧರ, ಚಂದ್ರುನಾಯ್ಕ, ಗೋಪಾಲನಾಯ್ಕ, ಜಯರಾಮ, ಗಂಗಾನಾಯ್ಕ, ಸುರೇಶನಾಯ್ಕ, ವೆಂಕಟೇಶನಾಯ್ಕ ವಸಂತನಾಯ್ಕ ಸೇರಿದಂತೆ ಇತರರು ಇದ್ದರು.

-----ಬಾಕ್ಸ.------

ಲಂಬಾಣಿ ಮೇರಾ ಸಂಭ್ರಮ..

ಅಮಾವಾಸ್ಯೆಯ ದಿನ ಹೆಣ್ಣುಮಕ್ಕಳು ಲಂಬಾಣಿ ಸಾಂಪ್ರದಾಯಿಕ ಉಡುಗೆತೊಟ್ಟು, ಕೈಯಲ್ಲಿ ಹಣತೆ ಹಿಡಿದು ತಾಂಡದ ಪ್ರತಿಮನೆಗೆ ಭೇಟಿನೀಡಿ ಹಿರಿಯನ್ನು ನೆನೆದರು. ದೇವಾಲಯದ ಮುಂದೆ ಪ್ರತಿಮನೆಯ ಮಹಿಳೆಯರು ಲಂಬಾಣಿ ಜಾನಪದ ನೃತ್ಯ ಹಾಡಿದರು. ದೀಪಾವಳಿ ಪಾಡ್ಯದ ದಿನ ಹಿರಿಯರು, ಜಾನುವಾರುಗಳ ನೆನೆದು ಗಾಳಿ, ಬೆಳಕು, ಚಂದ್ರ, ಸೂರ್ಯ ಮತ್ತು ಪ್ರಕೃತಿಗೆ ಸಲ್ಲಿಸುವ ಲಂಬಾಣಿ ಸಮುದಾಯದ ಪೂಜೆಯು ವಿಶೇಷದಿಂದ ಕೂಡಿತ್ತು.

---

ದೀಪಾವಳಿ ಹಬ್ಬವು ಲಂಬಾಣಿ ತಾಂಡಾಗಳ ಅತಿದೊಡ್ಡ ಹಬ್ಬ. ಹಬ್ಬಕ್ಕೆ ೮ದಿನ ಮುಂಚೆ ತಾಂಡದ ನಾಯಕ, ಕಾರಭಾರಿ, ಡಾವ್, ಸಾಣ್ ಮತ್ತು ಪ್ರಮುಖರು ಸಭೆಸೇರಿ ಹಬ್ಬದ ಸಡಗರದ ಚರ್ಚೆ ಆಗುತ್ತೇ. ೩ದಿನದ ಕಾರ್ಯಕ್ರಮದಲ್ಲಿ ಕಾಳಿಮಾಸ್, ಮೇರಾ ಸಂಭ್ರಮ ಮತ್ತು ಧಬುಕಾರ್ ನಡೆಯುತ್ತೇ. ಪ್ರಕೃತಿ ದೇವತೆಗೆ ವಿಶೇಷಪೂಜೆ ಸಲ್ಲಿಸುವುದು ವಾಡಿಕೆ. ಎಂಎನ್‌ಜೆ ಮಂಜು ಅವರಿಗೆ ಶುಭವಾಗಲಿ.

ತಾವರನಾಯ್ಕ. ಹಿರಿಯ ನಾಯಕ. ಮಾದೇನಹಳ್ಳಿ ತಾಂಡಾ.

------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ