ಕನ್ನಡಪ್ರಭ ವಾರ್ತೆ ಮಡಿಕೇರಿ
ಹಾಕಿ ಇಂಡಿಯಾ ಸಂಸ್ಥೆಗೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಮರ್ಕೇರಾ ಡೌನ್ಸ್ ಗಾಲ್ಪ್ ಕ್ಲಬ್ ನಿಂದ ವಿಶಿಷ್ಯವಾಗಿ ಈ ಸಂಭ್ರಮವನ್ನು ಆಚರಿಸಲಾಯಿತು. ಭಾರತೀಯ ಹಾಕಿ ರಂಗದ ದಿಗ್ಗಜ ಆಟಗಾರರನ್ನು ಗಾಲ್ಪ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್ ಗಳ ಸಂಯುಕ್ತಾಶ್ರಯದಲ್ಲಿ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ವಿಶಿಷ್ಟ ಕಾರ್ಯಕ್ರಮ ಆಯೋಜಿತವಾಗಿತ್ತು.
ಭಾರತೀಯ ಹಾಕಿ ಕ್ರೀಡೆಗೆ ಶತಮಾನೋತ್ಸವದ ಸಂಭ್ರಮವನ್ನು ಹಾಕಿ ದಿಗ್ಗಜರಿಗೆ ಸನ್ಮಾನದ ಗೌರವಾರ್ಪಣೆ ಮೂಲಕ ಆಚರಿಸಲಾಯಿತು. ಮಾಳೆಯಂ ಮುತ್ತಪ್ಪ, ಅಂಜಪರವಂಡ ಡಾ. ಬಿ. ಸುಬ್ಬಯ್ಯ. ಮುಕ್ಕಾಟೀರ ತಿಮ್ಮಯ್ಯ ಅಪ್ಪಯ್ಯ. ಬಾಳೆಯಡ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ಮುಕ್ಕಾಟೀರ ವಿನೋದ್ ಚಿಣ್ಣಪ್ಪ, ಕೂತಂಡ ಪೂಣಚ್ಚ, ಪೈಕೇರ ಕಾಳಯ್ಯ, ಮನೆಯಪಂಡ ಸೋಮಯ್ಯ, ಸಿ.ಎಸ್. ಪೂಣಚ್ಚ, ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ. ಸುಬ್ರಹ್ಮಣಿ, ಬಿ.ಪಿ. ಗೋವಿಂದ, ಮೊಹಮ್ಮದ್ ರಿಯಾಜ್, ಮತ್ತು ಪದ್ಮಶ್ರೀ ವಾಸುದೇವನ್ ಭಾಸ್ಕರನ್ ಅವರನ್ನು ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಐಚೇಟ್ಟೀರ ಅನಿಲ್, ಗೌರವ ಕಾರ್ಯದರ್ಶಿ ಕೊಂಗೆಟೀರ ಹರೀಶ್ ಅಪ್ಪಣ್ಣ, ಮದ್ರಾಸ್ ಕ್ರಿಕೆಟ್ ಕ್ಲಬ್ ನ ಗೌರವ ಕಾರ್ಯದರ್ಶಿ ನಿರಂಜನ್ ಮುದಲಿಯಾರ್, ಕ್ರಿಕೆಟ್ ಕ್ಲಬ್ ನ ಹಾಕಿ ಕ್ರೀಡಾ ಸಮಿತಿ ಅಧ್ಯಕ್ಷ ರಾಜೀವ್ ರೆಡ್ಡಿ ಹಾಜರಿದ್ದರು.ಸನ್ಮಾನಿತರ ಪರವಾಗಿ ಮಾತನಾಡಿದ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ. ಸುಬ್ರಹ್ಮಣಿ , ಭಾರತ ಹಾಕಿಗೆ ಚಿನ್ನದ ಪದಕ ದೊರಕದೇ 50 ವರ್ಷಗಳೇ ಆಗಿವೆ. ಯುವಕ್ರೀಡಾಪಟುಗಳು ಮತ್ತಷ್ಟು ಚೈತನ್ಯದೊಂದಿಗೆ ಭಾರತಕ್ಕೆ ಸ್ವರ್ಣ ಪದಕ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಐಚೆಟ್ಟೀರ ರೋಹಿತ್ ನಿರೂಪಿಸಿದರು. ಮರ್ಕೇರಾ ಡೌನ್ಸ್ ಗಾಲ್ಪ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೇ ಮಡಿಕೇರಿಯ ಸಾಯಿ ಕ್ರೀಡಾನಿಲಯದ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಪ್ರದರ್ಶನ ಹಾಕಿ ಪಂದ್ಯಾಟ ನಡೆಯಿತು.