ಕನ್ನಡಪ್ರಭ ವಾರ್ತೆ ಮಡಿಕೇರಿ
ಮೇರಿಯಂಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ತಲಾ 3 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 8-7 ಗೋಲುಗಳ ಅಂತರದಲ್ಲಿ ಮೇರಿಯಂಡ ಗೆಲುವು ಸಾಧಿಸಿತು.
ಬೊವ್ವೇರಿಯಂಡ ಮತ್ತು ಅಜ್ಜಿನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬೊವ್ವೇರಿಯಂಡ ಜಯ ಸಾಧಿಸಿತು. ಬೊವ್ವೇರಿಯಂಡ ಪರ ನಿತೀನ್ ಅಪ್ಪಯ್ಯ ಹ್ಯಾಟ್ರೀಕ್ ಗೋಲು ಬಾರಿಸಿದರೆ, ಜಿತನ್ 2 ಗೋಲು ದಾಖಲಿಸಿದರು. ಅಜ್ಜಿನಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ನೆರವಂಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ಮಂಡೇಡ ಮತ್ತು ಚೆರುಮಾಡಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಚೆರುಮಾಡಂಡ ತಂಡ ಜಯ ಸಾಧಿಸಿತು.
ಕುಮ್ಮಂಡ ಮತ್ತು ತಂಬುಕುತ್ತೀರ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಕುಮ್ಮಂಡ ತಂಡ ಗೆಲುವು ಸಾಧಿಸಿತು. ಚೀರಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಗೆಲುವು ಸಾಧಿಸಿತು. ಪುದಿಯೊಕ್ಕಡ ಪರ ಮಿಥುನ್ ಪೊನ್ನಪ್ಪ, ಸುಮನ್ ಮುತ್ತಣ್ಣ, ಬಾಗೇಶ್ ಹಾಗೂ ಪ್ರಧಾನ್ ಸೋಮಣ್ಣ ತಲಾ 1 ಗೋಲು ದಾಖಲಿಸಿದರು.
ಮೇವಡ ಮತ್ತು ಕರ್ತಮಾಡ ನಡುವಿನ ಪಂದ್ಯದಲ್ಲಿ ಕರ್ತಮಾಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕರ್ತಮಾಡ ಪರ ಲವರಾಜ್, ಅಯ್ಯಪ್ಪ, ಲಿತೇಶ್ ಹಾಗೂ ಬೆಳ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮೇವಡ ಜಶಾಂತ್ ತಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಳವಂಡ ಮತ್ತು ಅರೆಯಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮಳವಂಡ ತಂಡ ಜಯ ಸಾಧಿಸಿತು. ಮಳವಂಡ ಪರ ತಕ್ಷಕ್ ಬಿದ್ದಪ್ಪ ಹಾಗೂ ಅದೀತ್ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಅರೆಯಡ ಶರವಣ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.