ಮೀಟರ್‌ ಬಡ್ಡಿ ದಂಧೆಕೋರ ಸೆರೆ: ಹಲವು ದಾಖಲೆಗಳು ವಶ

KannadaprabhaNewsNetwork | Published : Mar 19, 2025 12:34 AM

ಸಾರಾಂಶ

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಪಟ್ಟಣ ಠಾಣಾ ಪೊಲೀಸರು ಬಂಧಿತನಿಂದ 18 ಖಾಲಿ ಚಕ್, 10 ವಾಹನಗಳ ಮೂಲ ದಾಖಲಾತಿ ಪತ್ರ, 3 ನಿವೇಶನ ದಾಖಲಾತಿಗಳು, 5 ಗ್ರಾಂ ಚಿನ್ನ, ಸಾಲ ಹಾಗೂ ಅಧಿಕ ಬಡ್ಡಿಯ ಬಗ್ಗೆ ನಮೂದಿರುವ 7 ರಿಜಿಸ್ಟರ್ ಪ್ರತಿ, 3 ಡೈರಿ ಸೇರಿದಂತೆ ಇನ್ನಿತರ ದಾಖಲೆ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಪಟ್ಟಣ ಠಾಣಾ ಪೊಲೀಸರು ಬಂಧಿತನಿಂದ 18 ಖಾಲಿ ಚಕ್, 10 ವಾಹನಗಳ ಮೂಲ ದಾಖಲಾತಿ ಪತ್ರ, 3 ನಿವೇಶನ ದಾಖಲಾತಿಗಳು, 5 ಗ್ರಾಂ ಚಿನ್ನ, ಸಾಲ ಹಾಗೂ ಅಧಿಕ ಬಡ್ಡಿಯ ಬಗ್ಗೆ ನಮೂದಿರುವ 7 ರಿಜಿಸ್ಟರ್ ಪ್ರತಿ, 3 ಡೈರಿ ಸೇರಿದಂತೆ ಇನ್ನಿತರ ದಾಖಲೆ ವಶಪಡಿಸಿಕೊಂಡಿದ್ದಾರೆ.

ಮಾರಿಪುಟ್ಟ ಬಿನ್ ಲೇಟ್ ಮೂಗೂರು ಮಹದೇವ (50) ಎಂಬಾತ ಅಧಿಕ ಬಡ್ಡಿ ದಂಧೆ ನಡೆಸುತ್ತಿದ್ದು ದಾಖಲೆ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ. ಈತ ದೊಡ್ಡ ನಾಯಕರ ಬೀದಿವಾಸಿಯಾಗಿದ್ದು ಪೂಜಾ ಎಂಬ ಹೆಸರಿನ ಮಾಂಸದ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ. ಈತ ಬಡ್ಡಿಗಾಗಿ ಸಾರ್ವಜನಿಕರಿಗೆ ಹಣ ನೀಡಿ ದುಪ್ಪಟ್ಟು ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ದೂರಿನ ಹಿನ್ನೆಲೆ ಆತನನ್ನು ಪಿಎಸ್ಸೈ ವರ್ಷ, ಎಸ್ಪಿ ಡ್ಯೂಟಿ ವಿರೇಂದ್ರ, ಇನ್ನಿತರರು ಕಾರ್ಯಾಚರಣೆ ನಡೆಸಿ ದಾಖಲೆ ಸಮೇತ ಆರೋಪಿಯನ್ನು ಬಂಧಿಸಲಾಗಿದೆ.

ನೊಂದ ಆಟೋ ಚಾಲಕರು, ಕೂಲಿ ಕಾರ್ಮಿಕರು ಪಟ್ಟಣ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಬಂಧಿತ ಆರೋಪಿ 26 ಜನರಿಗೆ ಹಣವನ್ನು ಸಾಲದ ರೂಪದಲ್ಲಿ ನೀಡಿ ಅವರಿಂದ 18 ಸಹಿ ಇರುವ ಖಾಲಿ ಚೆಕ್‌ಗಳನ್ನು ಪಡೆದಿದ್ದು ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. 35 ಸಾವಿರ ಮೌಲ್ಯದ 5 ಗ್ರಾಂ ತೂಕದ ಚಿನ್ನ ಸಹಾ ವ್ಯಕ್ತಿಯೋರ್ವನಿಂದ ಗಿರವಿ ಇಟ್ಟುಕೊಂಡಿದ್ದ, 10 ಮಂದಿಯಿಂದ ಫಾರಂ ನಮೂನೆ 29 ಇದಕ್ಕೆ ಸಹಿ ಪಡೆದಿರುವ ಅಸಲು ಆರ್‌ಸಿ ಕಾರ್ಡ್ ಹಾಗೂ ವಾಹನ ದಾಖಲಾತಿಗಳು ಮತ್ತು 3 ಜನರಿಂದ ನಿವೇಶನ ದಾಖಲಾತಿಗಳನ್ನು ಆಧಾರವಾಗಿಟ್ಟುಕೊಂಡಿರುವ ಆಧಾರಪತ್ರ ಹಾಗೂ ಇವುಗಳನ್ನು ಪಡೆದು ಸಾಲ ವಾಪಸ್ಸು ನೀಡದ ಪಕ್ಷದಲ್ಲಿ ಅವುಗಳನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳುವ ದಾಖಲಾತಿಗಳನ್ನು ಹೊಂದಿದ್ದ ಎನ್ನಲಾಗಿದೆ. ಅಲ್ಲದೆ ಜನರಿಗೆ ಸಾಲ ನೀಡಿ ಬಡ್ಡಿ ಸಂಗ್ರಹಿಸಿರುವ ಬಗ್ಗೆ ನಮೂದಿರುವ 7 ರಿಜಿಸ್ಟರ್‌ಗಳು ಮತ್ತು 3 ಡೈರಿಗಳು ಇದ್ದು ಅವುಗಳಲ್ಲಿ ಕಂತುಗಳ ರೂಪದಲ್ಲಿ ಬಡ್ಡಿ-ಅಸಲು ಸಂಗ್ರಹಿರುವ ಬಗ್ಗೆ ನಮೂದಾಗಿರುವುದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

Share this article