ಪಿಲಿಕುಳ ಮೃಗಾಲಯದಲ್ಲಿ ಕಾಳಿಂಗ ಸರ್ಪಗಳಿಗೆ ಮೈಕ್ರೋ ಚಿಪ್ ಅಳವಡಿಕೆ

KannadaprabhaNewsNetwork |  
Published : Jul 28, 2024, 02:03 AM IST
ಕಾಳಿಂಗ ಸರ್ಪಗಳಿಗೆ ಮೈಕ್ರೋ ಚಿಪ್‌ ಅಳ‍ವಡಿಸುತ್ತಿರುವುದು | Kannada Prabha

ಸಾರಾಂಶ

ಮೈಕ್ರೋ ಚಿಪ್‌ಗಳನ್ನು ಪ್ರಾಣಿಗಳ ಚರ್ಮದ ಒಳಗೆ ಅಳವಡಿಸಲಾಗುತ್ತದೆ. ಚಿಪ್‌ಗಳಲ್ಲಿ ನಮೂದಿಸಲಾದ ಕ್ರಮ ಸಂಖ್ಯೆಗಳನ್ನು ಬಾಹ್ಯವಾಗಿ ಸೆನ್ಸಿಂಗ್ ರೀಡರ್‌ನಿಂದ ಪಡೆಯಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉರಗಗಳು ಸಾಮಾನ್ಯವಾಗಿ ಒಂದೇ ತರವಾಗಿರುವುದರಿಂದ ಅವುಗಳನ್ನು ಮೇಲ್ನೋಟಕ್ಕೆ ಪ್ರತ್ಯೇಕವಾಗಿ ಗುರುತಿಸಲು ಕಷ್ಟವಾಗುತ್ತದೆ. ಪಿಲಿಕುಳವು ಕಾಳಿಂಗ ಸರ್ಪಗಳ ಸಂತನಾಭಿವೃದ್ಧಿ ಮತ್ತು ಸಂರಕ್ಷಣಾ ಕೇಂದ್ರವಾಗಿರುವುದರಿಂದ ಕಾಳಿಂಗ ಸರ್ಪಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದೆ. ಸಂತನಾಭಿವೃದ್ಧಿಯ ಸಮಯದಲ್ಲಿ ಅವುಗಳು ಅಂತರ್ ಸಂಬಂಧ ಮತ್ತು ಉತ್ತಮ ಪೀಳಿಗೆಯನ್ನು ಹೊಂದುವಂತೆ ಮಾಡಲು ಅನುಕೂಲವಾಗುತ್ತದೆ.ಉರಗಗಳನ್ನು ಬಾಹ್ಯ ನೋಟದಿಂದ ಗಂಡು ಹೆಣ್ಣು ಎಂದು ಗುರುತಿಸಲು ಕಷ್ಟವಾಗುತ್ತದೆ. ವೈಜ್ಞಾನಿಕವಾಗಿ ಅವುಗಳ ಲಿಂಗ ಬೇಧವನ್ನು ಪತ್ತೆ ಹಚ್ಚಲು ಶೋಧ ಉಪಕರಣ (ಮೈಕ್ರೋ ಚಿಪ್‌)ಗಳನ್ನು ಉಪಯೋಗಿಸಲಾಗುತ್ತದೆ. ಅವುಗಳ ತೂಕ, ಉದ್ದ ಅಳತೆಗಳನ್ನು ನಿಖರವಾಗಿ ದಾಖಲಿಸಲಾಗುತ್ತದೆ.

ಪಿಲಿಕುಳ ಮೃಗಾಲಯದ ದೊಡ್ಡ ಬೆಕ್ಕುಗಳ ಜಾತಿಗೆ ಸೇರಿದ ಹುಲಿ, ಸಿಂಹ, ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಪರೂಪದ ಜಾತಿಯ ಪ್ರಾಣಿಗಳಾದ ಹೈನಾ, ತೋಳ, ಕಾಡು ನಾಯಿ, ಕರಡಿಗಳು ಅಲ್ಲದೆ ನೈಲ್, ಘರಿಯಾಲ್ ಲಿಂಗ ಪರೀಕ್ಷೆ ಮತ್ತು ಗುರುತಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಮೈಕ್ರೋ ಚಿಪ್‌ಗಳನ್ನು ಪ್ರಾಣಿಗಳ ಚರ್ಮದ ಒಳಗೆ ಅಳವಡಿಸಲಾಗುತ್ತದೆ. ಚಿಪ್‌ಗಳಲ್ಲಿ ನಮೂದಿಸಲಾದ ಕ್ರಮ ಸಂಖ್ಯೆಗಳನ್ನು ಬಾಹ್ಯವಾಗಿ ಸೆನ್ಸಿಂಗ್ ರೀಡರ್‌ನಿಂದ ಪಡೆಯಬಹುದಾಗಿದೆ.

ಪಕ್ಷಿಗಳ ಲಿಂಗ ಗುರುತಿಸುವಿಕೆಗೆ ಡಿಎನ್‌ಎ ಪರೀಕ್ಷೆಯನ್ನು ಮಾಡಲಾಗುವುದು. ಇಲ್ಲಿ ಅಮದು ಮಾಡಿದ ಮೈಕ್ರೋ ಚಿಪ್ ಮತ್ತು ಉಪಕರಣಗಳನ್ನು ಉಪಯೋಗಿಸಲಾಗಿದೆ. ಮೈಕ್ರೋ ಚಿಪ್‌ಗಳು ಪ್ರಾಣಿಗಳಿಗೆ ಯಾವುದೇ ಅಡ್ಡ ಪರಿಣಾಮವನ್ನು ಬಿರುವುದಿಲ್ಲ. ಅದನ್ನು ಬದಲಿಸಬೇಕಾದ ಅವಶ್ಯಕತೆ ಕೂಡ ಇಲ್ಲ ಹಾಗೂ ಪ್ರಾಣಿಗಳ ಜೀವವಾಧಿಯವರೆಗೆ ಇದು ದೇಹದಲ್ಲಿ ಇರುತ್ತದೆ ಎಂದು ಪಿಲಿಕುಳ ನಿಸರ್ಗಧಾಮ ಜೈವಿಕ ಉದ್ಯಾನವನ ನಿರ್ದೇಶಕ ಡಾ.ಎಚ್‌.ಜೆ.ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!