ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೂಕ್ಷ್ಮಜೀವವಿಜ್ಞಾನ ವಿಭಾಗವು ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ''''''''ಮೈಕ್ರೋಸ್ಪಾರ್ಕ್'''''''' (ಕಾಣದಜಗತ್ತನ್ನು ಅನ್ವೇಷಿಸಿ) ಉದ್ಘಾಟಿಸಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಿನ್ನೆಯ ಆಧಾರದಲ್ಲಿ ಇಂದಿನ ಮಕ್ಕಳನ್ನು ತರಬೇತುಗೊಳಿಸಿದರೆ, ನಾಳೆ ಅವರು ವೃತ್ತಿಗೆ ಬಂದಾಗ ಏನೂ ತಿಳಿಯದಾಗುತ್ತಾರೆ. ಕಾಲದ ಸ್ಪಂದನೆ ಅವಶ್ಯ ಎಂದರು. ಸೂಕ್ಷ್ಮಜೀವವಿಜ್ಞಾನದ ಮೇಲೆ ಜಗತ್ತು ನಿಂತಿದೆ. ಸೂಕ್ಷ್ಮಜೀವವಿಜ್ಞಾನ ಸಣ್ಣಕ್ಷೇತ್ರವಾದರೂ ಜಗತ್ತಿನ ಬಹುದೊಡ್ಡ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ಇದು ವೈದ್ಯಕೀಯ ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತನ್ಮಯತೆ ಬಹುಮುಖ್ಯ ಎಂದವರು ಹೇಳಿದರು.ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿದರು.ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಇದ್ದರು. ವಿದ್ಯಾರ್ಥಿ ಸಂಯೋಜಕರಾದ ಕೃತಿಮಾ ಭಟ್ ಸ್ವಾಗತಿಸಿದರು. ಸುಹಾಸ್ ವಂದಿಸಿದರು. ಮೇಘಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.