ರಾಮನಾಥಪುರದ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಮಧ್ಯಾಹ್ನದ ಊಟ ಆರಂಭ

KannadaprabhaNewsNetwork |  
Published : Aug 29, 2026, 01:15 AM IST
28ಎಚ್ಎಸ್ಎನ್16 : ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ  ಊಟ ಮಾಡುತ್ತಿರುವ  ಭಕ್ತರು. | Kannada Prabha

ಸಾರಾಂಶ

ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಮಧ್ಯಾಹ್ನ ಮಹಾ ಪೂಜೆಯ ನಂತರ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳವರು, ದೇವಾಲಯದ ದಿವಾನರಾದ ಭಾಬಣ್ಣನವರು ಹಾಗೂ ದೇವಾಲಯದ ಅಡಳಿತ ಮಂಡಳಿಯವರಿಗೆ ಕ್ಷೇತ್ರದ ಶಾಸಕರು ಎ. ಮಂಜು, ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿಯ ಗೌರವಧ್ಯಕ್ಷರು ಆರ್. ಎಸ್. ನರಸಿಂಹಮೂರ್ತಿ, ಸಮಿತಿಯ ಅಧ್ಯಕ್ಷರು ಎಂ. ಎನ್. ಕುಮಾರಸ್ವಾಮಿ ಇಲ್ಲಿಗೆ ಬರುವ ಭಕ್ತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆ ಪ್ರಾರಂಭವಾಗಿದೆ. ಇದರಿಂದ ಬಹಳ ದಿನಗಳ ಕನಸು ನನಸಾಗಿದೆ ಎಂದು ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿಯವರು, ಭಕ್ತರು ಹಾಗೂ ಗ್ರಾಮಸ್ಥರು ಮೆಚ್ವುಗೆ ವ್ಯಕ್ತಪಡಿಸಿದರು. ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಉತ್ಸವ ಹಾಗೂ ಮಹಾ ಮಂಗಳಾರತಿ ನಂತರ ಒಂದು ವಾರದಿಂದ ಪ್ರತಿನಿತ್ಯ ಊಟದ ವ್ಯವಸ್ಥೆ ಪ್ರಾರಂಭವಾಗಿದೆ. ಇಲ್ಲಿಯ ದೇವಾಲಯದಲ್ಲಿ ಹತ್ತಾರು ವರ್ಷಗಳಿಂದ ದೇವಾಲಯದಲ್ಲಿ ಪೂಜೆ ಮಾಡಿದವರಿಗೆ ಮಾತ್ರ ದಾಸೋಹವಿತ್ತು. ಆದರೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಮಹಾ ಪೂಜೆ ನಂತರ 12 ಗಂಟೆಯಿಂದ ದೇವಾಲಯಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೂ 2 ಗಂಟೆಯ ತನಕ‌ ಅನ್ನ ದಾಸೋಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಭಿನಂದನೆ:

ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಮಧ್ಯಾಹ್ನ ಮಹಾ ಪೂಜೆಯ ನಂತರ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳವರು, ದೇವಾಲಯದ ದಿವಾನರಾದ ಭಾಬಣ್ಣನವರು ಹಾಗೂ ದೇವಾಲಯದ ಅಡಳಿತ ಮಂಡಳಿಯವರಿಗೆ ಕ್ಷೇತ್ರದ ಶಾಸಕರು ಎ. ಮಂಜು, ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿಯ ಗೌರವಧ್ಯಕ್ಷರು ಆರ್. ಎಸ್. ನರಸಿಂಹಮೂರ್ತಿ, ಸಮಿತಿಯ ಅಧ್ಯಕ್ಷರು ಎಂ. ಎನ್. ಕುಮಾರಸ್ವಾಮಿ ಇಲ್ಲಿಗೆ ಬರುವ ಭಕ್ತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.ದೇವಾಲಯದಲ್ಲಿ ನಡೆಯುವ ವಿಶೇಷ ಪೂಜಾ ಸೇವಾ ಕಾರ್ಯಗಳು ಹಾಗೂ ದಾಸೋಹದ ವ್ಯವಸ್ಥೆಗೆ ಹೆಚ್ಚಿನ ಮಾಹಿತಿಗಾಗಿ ರಾಮನಾಥಪುರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಮ್ಯಾನೇಜರ್, ವೇ. ಸೋಮಶೇಖರ್ ಅವರ ಪೋನ್ ನಂ. 9964546947 ಆಥವಾ 8660436527 ಮತ್ತು ಅಸಿಟ್ಟೆಂಟ್ ಮ್ಯಾನೇಜರ್ ವೇ. ಆಭಿಷೇಕ್ ಮೋ. ನಂ 9482033754 ಇವರನ್ನು ಸಂಪರ್ಕಿಸಲು ಎಲ್ಲ ಭಕ್ತರಲ್ಲಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳ್ಳಂಬೆಳಗ್ಗೆ ಮದ್ದೂರು ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ
ಬೀದಿ ಬದಿ ಅಂಗಡಿಗಳಲ್ಲಿ ಆಹಾರ ಪರಿಶೀಲಿಸಿದ ಉಪಲೋಕಾಯುಕ್ತರು