ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರಿಗೆ ತಟ್ಟಿದೆ. ಅಡುಗೆ ಅನಿಲ ಸಿಗದೆ ನೂರಾರು ಮೀನುಗಾರಿಕಾ ಬೋಟುಗಳು ಸಮುದ್ರಕ್ಕೆ ಇಳಿಯದೆ ಬಂದರಿನಲ್ಲಿ ಲಂಗರು ಹಾಕಿವೆ.
ಮಲ್ಪೆ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರಿಗೆ ತಟ್ಟಿದೆ. ಅಡುಗೆ ಅನಿಲ ಸಿಗದೆ ನೂರಾರು ಮೀನುಗಾರಿಕಾ ಬೋಟುಗಳು ಸಮುದ್ರಕ್ಕೆ ಇಳಿಯದೆ ಬಂದರಿನಲ್ಲಿ ಲಂಗರು ಹಾಕಿವೆ.
ಆಳ ಸಮುದ್ರ ಮೀನಗಾರಿಕೆ ನಡೆಸುವ ಬೋಟುಗಳಲ್ಲಿ 10ರಿಂದ 30 ಮಂದಿ ಮೀನುಗಾರರಿರುತ್ತಾರೆ, ಅವರು 7-12 ದಿನಗಳ ಕಾಲ ಸಮುದ್ರದಲ್ಲಿದ್ದು, ಮೀನು ಹಿಡಿಯುತ್ತಾರೆ, ಅಷ್ಟುದಿನಗಳ ಕಾಲ ಬೆಳಿಗ್ಗೆ ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಬೇಕಾದಷ್ಟು ಆಹಾರ ಸಾಮಗ್ರಿಗಳನ್ನು ಮತ್ತು ಅವುಗಳನ್ನು ಬೇಯಿಸಲು ಬೇಕಾದ ಎಲ್‌ಪಿಜಿ ಸಿಲಿಂಡರ್ ಸ್ಟೌಗಳನ್ನು ತೆಗೆದುಕೊಂಡು ಹೋಗುತ್ತಾರೆ.ಆದರೇ ಈಗ ವಾಣಿಜ್ಯ ಬಳಕೆಯ ಎಲ್‌ಪಿಜಿಯೇ ಪೂರೈಕೆಯಾಗದಿರುವುದರಿಂದ ಬೋಟುಗಳಲ್ಲಿ ಆಹಾರ ತಯಾರಿಸುವುದಕ್ಕೆ ಸಾಧ್ಯವಾಗದಿರುವುದರಿಂದ ಬೋಟುಗಳು ಸಮುದ್ರಕ್ಕೆ ತೆರಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೆಲವು ಬೋಟು ಮಾಲೀಕರು ಎಲ್‌ಪಿಜಿ ಬದಲು ಸ್ವಲ್ಪ ಅಪಾಯಕಾರಿಯಾದರೂ, ಪುರಾತನ ಕಾಲದಂತೆ ಸೀಮೆಎಣ್ಣೆಯ ಸ್ಟೌಗಳನ್ನು ಬಳಸುತಿದ್ದಾರೆ. ಆದರೇ ಸಾಕಷ್ಟು ಪ್ರಮಾಣದಲ್ಲಿ ಸೀಮೆಎಣ್ಣೆ ಕೂಡ ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು.ಪ್ರಸ್ತುತ ಸಮುದ್ರದಲ್ಲಿ ಮೀನು ಇಳುವರಿ ಚೆನ್ನಾಗಿದೆ, ಒಳ್ಳೆಯ ಮೀನುಗಳು ಸಿಗುತ್ತಿದ್ದು, ಮೀನುಗಾರರು ಲಾಭ ಗಳಿಸುತಿದ್ದರು. ಆದರೇ ಇದೇ ಹೊತ್ತಿನಲ್ಲಿ ಎಲ್‌ಪಿಜಿ ಪೂರೈಕೆ ಇಲ್ಲದೆ ಸಂಪಾದನೆಗೂ ಹೊಡೆತ ಬಿದ್ದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.