ಕಲ್ಯಾಣಪುರ: ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಸಿರಿ ಸಂಭ್ರಮ ೨೦೨೫’ ಹಾಗೂ ಯುವ ಚೇತನ ಪರೀಕ್ಷಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಸಲಾಯಿತು.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪೂರ್ಣಿಮಾ ಜಿ.ಎ. ಅವರು ರಾಜ್ಯೋತ್ಸವ ಸಂದೇಶದಲ್ಲಿ ಕನ್ನಡ ಭಾಷೆಯಲ್ಲಿ ಅಡಕಗೊಂಡಿರುವ ವೈಶಿಷ್ಟ್ಯವಾದ, ಭಿನ್ನಭಿನ್ನ ಸಂದರ್ಭಗಳಲ್ಲಿ ವಿಭಿನ್ನವಾದ ಅರ್ಥಗಳೊಂದಿಗೆ ಬಳಸಿಕೊಳ್ಳುವ ಸಾಮರ್ಥ್ಯ ಈ ಭಾಷೆಯ ಪದಗಳಿಗಿವೆ. ಭಾಷೆ ಹಾಗೂ ಸಂಸ್ಕೃತಿ ಜೊತೆಯಲ್ಲೇ ಬೆಳೆಯುತ್ತವೆ. ಕನ್ನಡ ಸಂಸ್ಕೃತಿ ಮೈಗೂಡಿಸಿಕೊಂಡು ಭಾಷೆ ಹಾಗೂ ಸಾಹಿತ್ಯವನ್ನು ಬೆಳೆಸುವ ಕೆಲಸಗಳು ಇಂದಿನ ಯುವಶಕ್ತಿಗಳಿಂದ ಆಗಬೇಕಾಗಿದೆ. ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ಸೌಹಾರ್ದತೆ ಬೆಳೆಯಬೇಕು ಎಂದು ಕರೆ ನೀಡಿದರು.
ವಿವೇಕಾನಂದ ಕೇಂದ್ರ, ಮೈಸೂರು ಸಂಸ್ಥೆಯವರು ನಡೆಸಿದ ‘ಯುವ ಚೇತನ’ ಪರೀಕ್ಷಾ ಪ್ರಮಾಣಪತ್ರ ವಿತರಣೆಯನ್ನು ಆಂಗ್ಲ ಭಾಷಾ ಉಪನ್ಯಾಸಕಿ ಕು. ಚೈತ್ರಾ ನೆರವೇರಿಸಿದರು.
ಉಪಪ್ರಾಂಶುಪಾಲ ಪ್ರೊ. ಸೋಫಿಯಾ ಡಯಾಸ್, ಐಕ್ಯೂಎಸಿ ಸಂಯೋಜಕ ಪ್ರೊ. ಶಾಲೆಟ್ ಮಥಾಯಸ್, ವಿದ್ಯಾರ್ಥಿ ಪ್ರತಿನಿಧಿಗಳಾದ ನೀಲೋಫರ್ ಹಾಗೂ ಲೈನಲ್ ಉಪಸ್ಥಿತರಿದ್ದರು.