ತಾಯ್ನಾಡಿನ ಋಣ ತೀರಿಸಲು ಸೈನಿಕ ವೃತ್ತಿ ಶ್ರೇಷ್ಠ : ನ್ಯಾ. ಹನುಮಂತಪ್ಪ

KannadaprabhaNewsNetwork |  
Published : Jul 27, 2025, 01:50 AM IST
ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಶನಿವಾರ ಏರ್ಪಡಿಸಿದ್ಧ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ನ್ಯಾ. ವಿ. ಹನುಮಂತಪ್ಪ ಅವರು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಭೂಮಿಯಲ್ಲಿ ಜನಿಸಿದ ಮನುಜ ಕೊನೆಗೊಂದು ದಿನ ದೇಹವನ್ನು ತ್ಯಜಿಸಲೇಬೇಕು. ಈ ಮಧ್ಯೆದಲ್ಲಿ ತಾಯ್ನಾಡಿನ ಋಣ ತೀರಿಸಲು ಹಾಗೂ ಭಾರತವನ್ನು ಗಟ್ಟಿಗೊಳಿಸಲು ಸೈನಿಕ ವೃತ್ತಿ ಅತ್ಯಂತ ಶ್ರೇಷ್ಠ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು.

ನಗರದ ತಾಪಂನಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ನಡೆದ ಕಾರ್ಗಿಲ್ ವಿಜಯೋತ್ಸವ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭೂಮಿಯಲ್ಲಿ ಜನಿಸಿದ ಮನುಜ ಕೊನೆಗೊಂದು ದಿನ ದೇಹವನ್ನು ತ್ಯಜಿಸಲೇಬೇಕು. ಈ ಮಧ್ಯೆದಲ್ಲಿ ತಾಯ್ನಾಡಿನ ಋಣ ತೀರಿಸಲು ಹಾಗೂ ಭಾರತವನ್ನು ಗಟ್ಟಿಗೊಳಿಸಲು ಸೈನಿಕ ವೃತ್ತಿ ಅತ್ಯಂತ ಶ್ರೇಷ್ಠ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಶನಿವಾರ ಏರ್ಪಡಿಸಿದ್ಧ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕಾಲಮಾನದಲ್ಲಿ ದೇಶ ಕಾಯುವ ಯೋಧರನ್ನು ಸಮಾಜಕ್ಕೆ ಸ್ಪೂರ್ತಿ ಹಾಗೂ ನಾಯಕರಾಗಿ ಕಾಣಬೇಕು. ಆದರೆ ಇಂದಿನ ಯುವಕರು ಸಿನಿಮಾ ನಟರನ್ನೇ ಬದುಕಿನ ನಾಯಕರಾಗಿ ರೂಪಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮಾದಕ ದ್ರವ್ಯಗಳಂತಹ ದುಶ್ಚಟಕ್ಕೆ ಬಲಿಯಾಗಿ ಅಮೂಲ್ಯ ಜೀವನದ ದಿಕ್ಕನ್ನು ತಪ್ಪುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಯುವ ಪೀಳಿಗೆಗೆ ಸಲೀಸಾಗಿ ಸಿಗುತ್ತಿರುವ ಮಾದಕ ವಸ್ತುಗಳಿಂದ ಭವಿಷ್ಯದ ಕನಸನ್ನು ಲೆಕ್ಕಿಸದೇ ಕೆಲವು ನಿಮಿಷಗಳ ಅಮಲಿಗಾಗಿ ಇಡೀ ಜೀವನ ಹಾಳು ಮಾಡಿಕೊಳ್ಳುತ್ತಿದೆ. ಈ ಚಟದಿಂದ ಹೊರತರಲು ಪಾಲಕರು ಹೆಚ್ಚು ಕಾಳಜಿ ವಹಿಸ ಬೇಕು. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಚಲನವಲನಗಳ ಬಗ್ಗೆ ಗಮಹರಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು.ಮಾಜಿ ಸೈನಿಕರು ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಇಂದು ವೀರ್ ಸಹಾಯಕ್ ಪರಿವಾರ್ ಯೋಜನೆ ಜಾರಿಗೊಳಿಸಿ ಉಚಿತ ಕಾನೂನು ನೆರವು ಒದಗಿಸಲು ಚಾಲನೆ ನೀಡಲಾಗಿದ್ದು. ಇದರಿಂದ ನಿವೃತ್ತ ಸೈನಿಕರ ಭೂ ಒತ್ತುವರಿ, ಕೌಟುಂಬಿಕ ಕಲಹಗಳನ್ನು ಬಗೆಹರಿಸಲು ಸಹಕಾರಿಯಾಗಲಿದೆ ಎಂದರು.

ಕೆಆರ್.ಎಸ್ಆ ಸ್ಪತ್ರೆಯ ಹೃದ್ರೋಗ ತಜ್ಞ ಡಾ. ಶ್ರೀಧರ್ ಮಾತನಾಡಿ, ಭವಿಷ್ಯದ ಭಾರತವನ್ನು ಕಾಪಾಡಲು ಅಂದಿನ ಯೋಧರು ವರ್ತಮಾನದ ಬದುಕನ್ನು ದೇಶಕ್ಕಾಗಿ ಹುತಾತ್ಮರಾದ ಕಾರಣ ಭಾರತದ ಅಸ್ಥಿತ್ವ ಉಳಿಸಿಕೊಂಡು ಯಶಸ್ವಿ ಯಾಗಿದ್ದು ಶತೃು ದೇಶದ ಅನೇಕ ಯುದ್ಧಗಳಲ್ಲಿ ಅತ್ಯಂತ ಕ್ಲಿಷ್ಟಕರ ಯುದ್ದವೇ ಕಾರ್ಗಿಲ್ ಆಗಿತ್ತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ವೀರ ಯೋಧರು ಹುತಾತ್ಮರಾದರು. ಸುಮಾರು 1369 ಕ್ಕೂ ಹೆಚ್ಚು ಯೋಧರು ಅಂಗಾಂ ಗ ವೈಫಲ್ಯದಿಂದ ತುತ್ತಾದರು. ಈ ಪೈಕಿ ವೀರ ಯೋಧರಾದ ನಾಲ್ಕು ಮಂದಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಹಿರಿಯ ವಕೀಲ ಲಕ್ಷ್ಮಣಗೌಡ, ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಸಿ.ಕೆ.ಗೋಪಾಲಕೃಷ್ಣ, ಸಹ ಕಾರ್ಯದರ್ಶಿ ರಾಜೇಗೌಡ, ಸದಸ್ಯರಾದ ಎಚ್.ಡಿ. ಸುರೇಶ್, ಸಿ.ಟಿ.ಗೋಪಾಲ್, ಪಿ.ಪ್ರಕಾಶ್, ಸುಶ್ಮಿತಾ ಉಪಸ್ಥಿತರಿದ್ದರು.

26 ಕೆಸಿಕೆಎಂ 4

ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಶನಿವಾರ ಏರ್ಪಡಿಸಿದ್ಧ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ನ್ಯಾ. ವಿ. ಹನುಮಂತಪ್ಪ ಉದ್ಘಾಟಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ