ಗಜೇಂದ್ರಗಡ:ಶಾಸಕ ಜಿ.ಎಸ್. ಪಾಟೀಲ ಜನ್ಮ ದಿನಾಚರಣೆ ನಿಮಿತ್ತ ಗುರುವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಶಾಲಾ, ಕಾಲೇಜುಗಳಲ್ಲಿ ಸಸಿ ನೆಟ್ಟರು, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಣೆ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಸಿದರು.
ರೋಗಿಗಳಿಗೆ ಹಣ್ಣು ವಿತರಣೆ: ರೋಣ ಶಾಸಕ ಜಿ.ಎಸ್.ಪಾಟೀಲ ಜನ್ಮ ದಿನಚಾರಣೆ ಹಿನ್ನಲೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಮುಖಂಡರು ಪಟ್ಟಣದ ಸರ್ಕಾರಿ ಬಿಎಸ್‌ಎಸ್ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಜನ್ಮ ದಿನಾಚರಣೆ ಆಚರಿಸಿದರು. ರೋಣ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿದರು. ಇತ್ತ ಸ್ಥಳೀಯ ಜಗದ್ಗುರು ತೋಂಟದಾರ್ಯ ಶಾಲಾ ಆವರಣದಲ್ಲಿ ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡರು ಸಸಿ ನೆಟ್ಟರು. ಸ್ಥಳೀಯ ಕುಷ್ಟಗಿ ರಸ್ತೆಯಲ್ಲಿ ಜಮಾಲ್ ಶಾವಲಿ ದರ್ಗಾದಲ್ಲಿ ಶಾಸಕ ಜಿ.ಎಸ್.ಪಾಟೀಲ ಅವರ ಜನ್ಮ ದಿನದ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ನೇತೃತ್ವದಲ್ಲಿ ಹಾಲಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಸಸಿ ನೆಟ್ಟು ಪರಿಸರ ಜಾಗೃತಿ ಹಾಗೂ ಮಹತ್ವವನ್ನು ಸಾರಿದರು.ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಮುಖಂಡರಾದ ರಫೀಕ್ ತೋರಗಲ್, ಸಿದ್ದಣ್ಣ ಬಂಡಿ, ಮುತ್ತಣ್ಣ ಮ್ಯಾಗೇರಿ, ಶಿವರಾಜ ಘೋರ್ಪಡೆ, ಎಚ್.ಎಸ್.ಸೋಂಪುರ, ಶರಣಪ್ಪ ಚಳಗೇರಿ, ಸುಭಾನಸಾಬ ಆರಗಿದ್ದಿ, ಯಲ್ಲಪ್ಪ ಬಂಕದ, ಶ್ರೀಧರ ಬಿದರಳ್ಳಿ, ಅಪ್ಪು ಮತ್ತಿಕಟ್ಟಿ, ಶಿವು ಚವ್ಹಾಣ, ಹೂವಾಜಿ ಚಂದುಕರ, ಶಾರದಾ ರಾಠೋಡ, ಶರಣಪ್ಪ ಪೂಜಾರ, ಪ್ರಭು ಹುಡೇದ ಸೇರಿ ಅನೇಕರು ಇದ್ದರು.