ಹಾಲಿನ ದರ ಹೆಚ್ಚಳ: ಸಿಪಿಐ ಪ್ರತಿಭಟನೆ

KannadaprabhaNewsNetwork |  
Published : Nov 04, 2026, 12:30 AM IST
3ಕೆಡಿವಿಜಿ11, 12-ದಾವಣಗೆರೆಯಲ್ಲಿ ಹಾಲಿನ ಬೆಲೆ ಏರಿಕೆ ವಿರೋಧಿಸಿ ಭಾರತ ಕಮ್ಯುನಿಷ್ಟ್ ಪಕ್ಷ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಹಾಲಿನ ದರ ಏಕಾಏಕಿ ಹೆಚ್ಚಿಸಿರುವ ಆದೇಶ ತಕ್ಷಣ ಹಿಂಪಡೆಯಲು ಒತ್ತಾಯಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ದಾವಣಗೆರೆ: ಹಾಲಿನ ದರ ಏಕಾಏಕಿ ಹೆಚ್ಚಿಸಿರುವ ಆದೇಶ ತಕ್ಷಣ ಹಿಂಪಡೆಯಲು ಒತ್ತಾಯಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಅಶೋಕ ರಸ್ತೆಯ ಸಿಪಿಐ ಜಿಲ್ಲಾ ಕಚೇರಿಯಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿದ ಪಕ್ಷದ ಮುಖಂಡರು, ಕಾರ್ಯಕರ್ತರು ನಂತರ ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮುಖಂಡ ಆವರಗೆರೆ ಚಂದ್ರು ಮಾತನಾಡಿ, ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ರೈತ ಮತ್ತು ಗ್ರಾಹಕ ಇಬ್ಬರಿಗೂ ಸರ್ಕಾರ ವಂಚನೆ ಮಾಡಿದೆ. ಅಲ್ಲದೇ, ಕೆಎಸ್ಸಾರ್ಟಿಸಿ ಬಸ್ಸು ಪ್ರಯಾಣ ದರವನ್ನೂ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂಬ ಮಾತುಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಬಸ್ಸು ಪ್ರಯಾಣ ದರ ಹೆಚ್ಚಿಸುವ ದುಸ್ಸಾಹಸ ಬೇಡ. ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಿಸಿರುವುದನ್ನು ಕೈ ಬಿಡಬೇಕು. ಬಸ್ಸು ಪ್ರಯಾಣ ದರವನ್ನೂ ಹೆಚ್ಚಿಸಬಾರದು ಎಂದು ಆಗ್ರಹಿಸಿದರು.

ಸಿಪಿಐ ಮುಖಂಡ ಪಿ,ಷಣ್ಮುಖ ಸ್ವಾಮಿ ಮಾತನಾಡಿ, ಹಾಲು ಉತ್ಪಾದಕರ ಹೆಸರಲ್ಲಿ ಜನ ಮತ್ತು ಗ್ರಾಹಕರ ಕಣ್ಣೊರೆಸುವ ತಂತ್ರ ಮಾಡಿರುವ ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಘೋಷಿಸಿದ ಹೆಚ್ಚಿನ ಬೆಲೆ ಕೈ ಸೇರುವುದಿಲ್ಲ. ಹಾಲು ಶೇಖರಣೆ ಮಾಡುವ ಸೊಸೈಟಿಗಳಲ್ಲಿ ಅನೇಕ ತಂತ್ರಗಳನ್ನು ಬಳಸುವುದರಿಂದ ಹಾಲು ಉತ್ಪಾದಕರು ಕೂಡ ಮೋಸಕ್ಕೆ ಒಳಗಾಗುತ್ತಿದ್ದಾರೆ. ಹಾಲು, ಮೊಸರಿನ ಬೆಲೆ ಏರಿಕೆಯಲ್ಲಿ ಸರ್ಕಾರ ಅಧಿಕೃತವಾಗಿ ಘೋಷಿಸಿರುವುದು ಲೀಟರ್ ಗೆ 8 ರು.ಗಳು. ಆದರೆ ಅದು ಗ್ರಾಹಕರ ಕೈಸೇರುವಾಗ 12ರಿಂದ 14 ರು. ಬೆಲೆ ಕೊಟ್ಟು, ಪಡೆಯುವ ಗ್ರಾಹಕರಿಗೆ ನೇರವಾಗಿ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ ಎಂದು ದೂರಿದರು.

ಪಕ್ಷದ ಮುಖಂಡರಾದ ಕೆರನಹಳ್ಳಿ ರಾಜು, ಐರಣಿ ಚಂದ್ರು, ರಮೇಶ ಸಿ.ದಾಸರ, ಎ.ತಿಪ್ಪೇಶ, ನರೇಗಾ ರಂಗನಾಥ, ಎ.ಸಿ.ಎಂ. ಜಯಣ್ಣ, ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ವಿ.ಲಕ್ಷ್ಮಣ, ಚಿನ್ನಪ್ಪ, ರೈಡರ್ ರಂಗಸ್ವಾಮಿ, ಸರೋಜಾ, ಪುಷ್ಪಾ, ಮರಿಯಪ್ಪ, ಗಂಗಾಧರ ಕೊಟಗಿ, ಕೆ.ಬಾನಪ್ಪ, ಶೇಖರ ನಾಯ್ಕ, ಯರಗುಂಟೆ ಸುರೇಶ, ಶಿವಕುಮಾರ ಶೆಟ್ಟರ್, ವೆಂಕಟೇಶ, ಕೃಷ್ಣಪ್ಪ ಇತರರು ಪ್ರತಿಭಟನೆಯಲ್ಲಿದ್ದರು.

- - -

-3ಕೆಡಿವಿಜಿ11: ಹಾಲಿನ ಬೆಲೆ ಏರಿಕೆ ವಿರೋಧಿಸಿ ದಾವಣಗೆರೆಯಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌