ದಾವಣಗೆರೆ: ಹರಿಹರ ತಾಲೂಕಿನ ಹಾಲು ಉತ್ಪಾಕರ ಸಂಘಗಳ ಕಾರ್ಯದರ್ಶಿಗಳಿಗೆ ದಾವಣಗೆರೆ ತಾಲೂಕು ದೊಡ್ಡಬಾತಿಯ ಗ್ರಾಮದ ಹಾಲು ಶೀಥಲೀಕರಣ ಘಟಕದ ಡೇರಿಯಲ್ಲಿ ಬೆಂಗಳೂರಿನ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ, ಶಿದಾಚಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಶಿವಮೊಗ್ಗದಿಂದ ಒಂದು ದಿನದ ಜಿಲ್ಲಾ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರ, ಕಾರ್ಯಾಗಾರ ನಡೆಯಿತು.
ಸಹಕಾರ ಇಲಾಖೆ ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ, ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್. ಸಂತೋಷಕುಮಾರ, ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕ ಕೆ.ಎಂ.ಜಗದೀಶ, ದ್ವಿದಸ ಸಹಾಯಕ ವಿ.ರಂಗನಾಥ ಇತರರು ಇದ್ದರು.
- - -(** ಈ ಫೋಟೊ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)
-21ಕೆಡಿವಿಜಿ4:ದಾವಣಗೆರೆ ತಾಲೂಕಿನ ದೊಡ್ಡ ಬಾತಿ ಹಾಲು ಶೀಥಲೀಕರಣ ಘಟಕದ ಡೇರಿಯಲ್ಲಿ ಹರಿಹರ ತಾಲೂಕು ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಶಿಮುಲ್ ನಿರ್ದೇಶಕ ಜಗದೀಶಪ್ಪ ಬಣಕಾರ ಉದ್ಘಾಟಿಸಿದರು.