ಹಾಲು ಉತ್ಪಾದನೆ ಭಾರತದ ಆರ್ಥಿಕತೆಯ ಜೀವಾಳ; ಶಾಸಕ ಸಿದ್ದು ಸವದಿ

KannadaprabhaNewsNetwork |  
Published : Jan 03, 2026, 03:15 AM IST
02 MLP 02 ಪೋಟೋ | Kannada Prabha

ಸಾರಾಂಶ

ಗ್ರಾಮೀಣ ಜನತೆಗೆ ಬೆಳಕು ನೀಡಿದ್ದು ಕ್ಷೀರಕ್ರಾಂತಿ. ಜೊತೆಗೆ ಜೀವನಮಟ್ಟ ಸುಧಾರಣೆಗೆ ಕಾರಣವಾಗಿ ಭಾರತದ ಆರ್ಥಿಕತೆಯ ಒಂದು ಭಾಗವಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಗ್ರಾಮೀಣ ಜನತೆಗೆ ಬೆಳಕು ನೀಡಿದ್ದು ಕ್ಷೀರಕ್ರಾಂತಿ. ಜೊತೆಗೆ ಜೀವನಮಟ್ಟ ಸುಧಾರಣೆಗೆ ಕಾರಣವಾಗಿ ಭಾರತದ ಆರ್ಥಿಕತೆಯ ಒಂದು ಭಾಗವಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಸಮೀಪದ ಬುದ್ನಿ ಪಿ.ಡಿ ಮೇಟಿ ತೋಟದಲ್ಲಿರುವ ಲಕ್ಕಮ್ಮಾದೇವಿ ದೇವಸ್ಥಾನ ಆವರಣದಲ್ಲಿ ನೂತನವಾಗಿ ಆರಂಭವಾದ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದ ಡಾ.ವರ್ಗಿಸ್ ಕುರಿಯನ್ ಅಮೆರಿಕದಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಹಿಂತಿರುಗಿ ಗುಜರಾತಿನ ತಮ್ಮ ಕರ್ಮ ಭೂಮಿಯಲ್ಲಿ ಹೈನುಗಾರಿಕೆ ಆರಂಭಿಸಿದರು. ಹೀಗಾಗಿ ರೈತರು ಯಾವುದೇ ಕಲಬೆರಕೆ ಇಲ್ಲದೆ ಹಾಲು ಹಾಕಿ, ಸಂಘವನ್ನು ಲಾಭದಲ್ಲಿ ಮುನ್ನಡೆಸಲು ಸಾಕ್ಷಿಯಾದರು ಎಂದು ಹೇಳಿದರು.

ಜಮಖಂಡಿ ಸಹಾಯಕ ವ್ಯವಸ್ಥಾಪಕ ಎಸ್.ಎಸ್. ಅಥಣಿ, ಕೆಎಂಎಫ್ ನಿರ್ದೇಶಕ ಲಕ್ಕಪ್ಪ ಪಾಟೀಲ, ಮುಖಂಡರಾದ ಧರೆಪ್ಪ ಸಾಂಗ್ಲಿಕರ, ಕೆಎಂಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ, ಚಂದ್ರಶೇಖರ್ ಆದಬಸಪ್ಪಗೋಳ, ಮಹಾದೇವ ಮಾರಾಪುರ ಮಾತನಾಡಿದರು.

ಶಿರೂರಿನ ಚಿನ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸನ್ಮಾನ: ದೇವಿ ಟ್ರಸ್ಟ್‌ ಧನ ಸಹಾಯ ಮಾಡಿದ ಮಲ್ಲಪ್ಪ ಕಳ್ಯಾಗೋಳ, ರಾಮಣ್ಣ ಹುಣಶಿಕಟ್ಟಿ, ಅರ್ಜುನ್ ಮೇಟಿ, ದೇವಪ್ಪ ಮೇಟಿ, ಆರ್.ಎಸ್. ಪಾಟೀಲ, ನಾಗರ್ಜುನ ಮೇಟಿ, ತಿಪ್ಪಣ್ಣ ಹುಣಶೀಕಟ್ಟಿ, ಲಕ್ಕವ್ವ ಮೇಟಿ, ರಾಜು ಹುಚ್ಚಣ್ಣವರ, ಮಹಾನಂದಾ ಅಂಗಡಿ, ಶಿವಲಿಂಗ ದೇಸಾಯಿ, ಲಕ್ಕಪ್ಪ ದೇಸಾಯಿ, ಯಲ್ಲವ್ವ ದೇಸಾಯಿ ಸೇರಿದಂತೆ ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಲಲಿತಾ ಅರ್ಜುನ್ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಕೆಎಂಎಫ್ ಇಒ ಪರಮೇಶ ಜಾಧವ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮದಬಾವಿ ಗ್ರಾಪಂ ಅಧ್ಯಕ್ಷ ಬಸವರಾಜ ನಾಗನೂರ, ಸಂಗಪ್ಪ ಹಲ್ಲಿ, ಮಹಾಲಿಂಗಪ್ಪ ಜಕ್ಕಣ್ಣವರ, ಅರವಿಂದ ಮಾಲಬಸರಿ, ಚನ್ನಪ್ಪ ಪಟ್ಟಣಶೆಟ್ಟಿ, ವೀರೇಶ ಆಸಂಗಿ, ಚಂದ್ರಪ್ಪ ದೋಣಿ, ಶ್ರೀಶೈಲ ಕಳ್ಯಾಗೋಳ, ಕರೆಪ್ಪ ಮೇಟಿ, ಹಣಮಂತ ಜಮಾದಾರ, ಈಶ್ವರ ಮುರಗೋಡ ಶಿವಲಿಂಗ ಟಿರ್ಕಿ, ರಫೀಕ್ ಮಾಲದಾರ, ಸಿದ್ದು ಶಿರೋಳ, ಮಹಾಲಿಂಗ ಬಾಡಗಿ, ಪರಶು ಕೊಣ್ಣೂರ, ಜೊತೆಪ್ಪ ಕಪರಟ್ಟಿ, ಮಾಳಪ್ಪ ಕಪರಟ್ಟಿ, ನಿಂಗಪ್ಪ ಬಾಳಿಕಾಯಿ, ಶಿವಾನಂದ ಪಾಟೀಲ್, ಆನಂದ ಗಿರಡ್ಡಿ, ರಮೇಶ ಸಾಲವಾಡಗಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ