
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜ್ಞಾನಯೋಗಾಶ್ರಮದಲ್ಲಿ ಜರುಗಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ 3ನೇ ವರ್ಷದ ಗುರುನಮನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೂಮಿ ಮೇಲೆ ಬದುಕಿದ ಪ್ರತಿಯೊಬ್ಬರೂ ಯಾವುದೇ ರಂಗದಲ್ಲಿ ಕೆಲಸ ಮಾಡಲಿ ಪ್ರತಿದಿನ ಕೆಲಸ ಪ್ರಾರಂಭ ಮಾಡುವ ಮುನ್ನ ಸಿದ್ದೇಶ್ವರ ಅಪ್ಪಾಜಿ ಅವರ ಮಾತುಗಳನ್ನು ಒಮ್ಮೆ ಕೇಳಿಸಿಕೊಂಡು ಕೆಲಸ ಪ್ರಾರಂಭ ಮಾಡಿದರೆ ನಮ್ಮ ಇಡೀ ಜೀವನದ ನಕ್ಷೆಯೇ ಬದಲಾಗುತ್ತದೆ ಎಂದರು.
12ನೇ ಶತಮಾನದಿಂದಲೇ ಇದೊಂದು ಪುಣ್ಯಭೂಮಿ ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ತಮ್ಮ ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ಜಗತ್ತಿನ ಚಿತ್ತವನ್ನು ಕರ್ಮದತ್ತ, ನಿಷ್ಠೆಯತ್ತ, ಧರ್ಮದತ್ತ ಸೆಳೆದವರು ಅದರಂತೆ ಈಗ ನಾವು ನೀವು ಬದುಕಿದ ಕಾಲಮಾನ 20ನೇ ಶತಮಾನದ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಅಪ್ಪನವರು ಈ ಭೂಮಿಗೆ ದೊರೆತ ಮತ್ತೊಂದು ನಕ್ಷತ್ರ ಅವರು ಹಾಕಿ ಕೊಟ್ಟ ದಾರಿ, ಸರಳ ಬದುಕಿನ ಸೂತ್ರ, ಶಿಸ್ತು, ನಿಷ್ಠೆ ನಮ್ಮೆಲ್ಲರ ಬದುಕನ್ನು ಹಸನುಗೊಳಿಸಿವೆ. ಅವರ ಜೊತೆಗೆ ಬದುಕಿ ಅವರನ್ನು ಅತ್ಯಂತ ಸಮೀಪದಿಂದ ನೋಡಿದ ನಮ್ಮ ಕಣ್ಣುಗಳು ಪಾವನ ಜಗತ್ತಿನಲ್ಲಿ ನಮಗಿಂತ ಪುಣ್ಯವಂತರು ಮತ್ಯಾರು ಇರಲು ಸಾಧ್ಯವಿಲ್ಲ ಎಂದರು.ಹಂಚಿನಾಳ ಭಕ್ತಿಯೋಗಾಶ್ರಮದ ಪೂಜ್ಯ ಸಂಗಮೇಶ್ವರ ಶ್ರೀಗಳು ಮಾತನಾಡಿ, ನಾವೆಲ್ಲರೂ ಕಲಿಯುಗದಲ್ಲಿ ಹುಟ್ಟಿಲ್ಲ ನಾವು ಶ್ರೀ ಸಿದ್ದೇಶ್ವರ ಶ್ರೀಗಳು ಬದುಕಿದ ಧರ್ಮಯುಗದಲ್ಲಿ ಹುಟ್ಟಿದ್ದೇವೆ ಎಂದು ಹೆಮ್ಮೆ ಪಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಚಿತ್ತರಗಿ-ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿಗಳು ಮಾತನಾಡಿ, ಶ್ರೀ ಸಿದ್ದೇಶ್ವರ ಅಪ್ಪನವರು ತಮ್ಮ ಬದುಕಿನೂದ್ದಕ್ಕೂ ನಮ್ಮ ಮನಸ್ಸುಗಳನ್ನು ಉತ್ತಮವನ್ನಾಗಿ, ನಮ್ಮಲ್ಲಿ ನಿಸ್ವಾರ್ಥತೆಯನ್ನು ತುಂಬಲು, ನಮ್ಮ ಮನಸ್ಸನ್ನು ಶುದ್ಧ ಮಾಡಲು ಪ್ರಯತ್ನಿಸಿದಂತವರು. ಸತತ 70 ವರ್ಷಗಳ ಕಾಲ ನಿರಂತರವಾಗಿ ಜನರ ಮನಶುದ್ಧಿ ಮಾಡುವಂತಹ ಕಾರ್ಯವನ್ನು ಶ್ರೀಗಳು ಮಾಡುತ್ತಾ ಬಂದರು ಎಂದರು.
ಸಿಂದಗಿ ಸಾರಂಗ ಮಠದ ಪ್ರಭುಸಾರಂಗ ಮಹಸ್ವಾಮೀಜಿಗಳು ಮಾತನಾಡಿ, ಕಳೆದ 43 ವರ್ಷಗಳಿಂದ ಬುದ್ಧೀಜಿಯವರ ಸಂಪರ್ಕಕ್ಕೆ ನಾನು ಬಂದು ಅವರನ್ನು ಅರಿತುಕೊಂಡವನು ನನ್ನ ಇಡೀ ಜೀವನದ ಪೂರ್ತಿ ಅವರಿಗೆ ನುಡಿನಮನ ಸಲ್ಲಿಸಿದರೂ ಕಡಿಮೆಯೇ ಅಂತಹ ವ್ಯಕ್ತಿತ್ವ ಶ್ರೀಗಳದ್ದು. ಪ್ರತಿದಿನ ಅವರೊಂದು ಮಾತಿ ಹೇಳುತ್ತಿದ್ದರು ಎಷ್ಟು ಪ್ರತಿನಿತ್ಯ ನಾವು ಎಷ್ಟು ಮನಸ್ಸನ್ನು ಸ್ವಚ್ಛಗೊಳಿಸುತ್ತೆವೆಯೋ ಅಷ್ಟು ನಮ್ಮ ಜೀವನ ಸ್ವಚ್ಛವಾಗುತ್ತದೆ ಮತ್ತು ಸುಂದರವಾಗುತ್ತದೆ ಎಂದು ಹೇಳುತ್ತಿದ್ದರು ಎಂದರು. ಗದಗದ ಜಗದ್ಗುರು ಶಿವಾನಂದ ಬೃಹ್ಮನ್ಮಠದ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಅಪ್ಪನವರು ಪ್ರವಚನ, ಪಾಠ ಮಾಡುವ ಮೂಲಕ ಪ್ರತಿಯೊಬ್ಬರ ಬದುಕಿನಲ್ಲಿ ಜ್ಞಾನ ಬಿತ್ತನೆಯನ್ನು ಮಾಡಿ ಸಂತಸ ಪಡುತ್ತಿದ್ದರು. ತಮ್ಮ ಜೀವನದೂದ್ದಕ್ಕೂ ಜ್ಞಾನದಾಸೋಹಕ್ಕಿಂತಹ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ನಂಬಿದವರು ಶ್ರೀಗಳು ಎಂದರು.ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬರೆದ ಮರುಮುದ್ರಣದ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಬಾಲಗಾಂವನ ಶ್ರೀ ಗುರುದೇವಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿ ಪ್ರಸ್ತಾವಿಕ ನಡಿಗಳನ್ನಾಡಿದರು, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಾಹಪುರ ಸ್ವಾಗತಿಸಿದರು, ಪೂಜ್ಯ ಹರ್ಷಾನಂದ ಸ್ವಾಮೀಜಿ ನಿರೂಪಿಸಿದರು.