ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರು ಮಳೆ ಗಾಳಿಯಿಂದಾಗಿ ರಾಗಿ ಬೆಳೆ ನೆಲ ಕಚ್ಚಿದ್ದು ಅಪಾರ ಪ್ರಮಾಣದ ಫಸಲು ನಷ್ಟದ ಹಾದಿಯಲ್ಲಿದೆ. ತೇವಾಂಶಕ್ಕೆ ರಾಗಿ ತೆನೆಗಳು ನೆಲದಲ್ಲೇ ಮೊಳಕೆ ಬರುತ್ತಿದ್ದು ಕೊಯ್ಲಿಗೆ ಬಂದ ರಾಗಿ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.
ಇದೇ ರೀತಿಯ ಮುಂದೆ ಮಳೆ ಮುಂದುವರಿದರೆ ರಾಗಿ ಬೆಳೆಗೆ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆಯಿದೆ. ಶೇ.30ಕ್ಕೂ ಹೆಚ್ಚು ಪ್ರಮಾಣದಲ್ಲಿ ಈಗಾಗಲೇ ರಾಗಿ ಫಸಲು ಕೈಗೆ ಬರುವಂತಾಗಿದ್ದು ಇನ್ನೂ ಶೇ.70ರಷ್ಟು ಫಸಲು ಅಂತಿಮ ಹಂತದಲ್ಲಿದೆ. ಈ ಹಂತದಲ್ಲಿ ಸತತ ಮಳೆಯಾದರೆ ರಾಗಿ ಫಸಲು ನಷ್ಟಕ್ಕೆ ಒಳಗಾಗಲಿದೆ. ನೆಲ ಕಚ್ಚಿರುವ ರಾಗಿ ಪೈರನ್ನು ಎತ್ತಿಕಟ್ಟುವ ಕಾರ್ಯವಾಗಬೇಕು. ಆದರೆ ಬೆಳೆಗಾರರು ಹೊಲಗಳ ಒಳಗೆ ಹೋಗಲಾರದಂತ ಸ್ಥಿತಿಯಲ್ಲಿ ಚಾಪೆ ರೀತಿಯಲ್ಲಿ ರಾಗಿ ಪೈರು ಮಲಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ದೇವರು ವರ ಕೊಟ್ಟರು ಪೂಜಾರಿ ವರ ಕೊಡುವುದಿಲ್ಲ ಎನ್ನುವ ಹಾಗೆ ಕೈಗೆ ಬಂದ ಬೆಳೆ ಇನ್ನೇನು ಬಾಯಿಗೆ ಬರುತ್ತದೆ ಎನ್ನುವಷ್ಟರಲ್ಲಿ ಮಳೆ ಬಂದು ಮಣ್ಣು ಪಾಲು ಮಾಡುತ್ತಿದ್ದು ಕಂಗಾಲಾಗಿರುವ ರೈತ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾನೆ.ಕೋಟ್......
-ಸಿದ್ದಲಿಂಗಯ್ಯ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ನೆಲಮಂಗಲ
ಮುಂಗಾರು ಮಳೆ ಚೆನ್ನಾಗಿ ಬಿದ್ದ ಪರಿಣಾಮ ರಾಗಿ ಬೆಳೆಯೂ ಚೆನ್ನಾಗಿ ಬಂದಿದೆ. ಉತ್ತಮವಾಗಿ ತೆನೆಯೂ ಕಟ್ಟುತ್ತಿದೆ. ಆದರೆ ಮಳೆ ಬಿದ್ದ ಪರಿಣಾಮ ತೆನೆಗಳು ನೆಲಕ್ಕೆ ಬಾಗಿದ್ದು, ಹುಲ್ಲು ಕೊಳೆಯುವ ಪರಿಸ್ಥಿತಿ ಬರಲಿದೆ. ಫಸಲು ಹಾಳಾಗುವ ಆತಂಕ ಎದುರಾಗಿದೆ.
ಪೋಟೋ 1 :