ಸದೃಢ ಬೆಳವಣಿಗೆಗೆ ರಾಗಿ ಮಾಲ್ಟ್ ಅಗತ್ಯ: ಮುಖ್ಯಾಧಿಕಾರಿ ನಾಗೇಶ

KannadaprabhaNewsNetwork |  
Published : Feb 23, 2024, 01:51 AM IST
೨೨ವೈಎಲ್‌ಬಿ೨:ಯಲಬುರ್ಗಾದ ನಂ,೧ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ರಾಗಿಮಾಲ್ಟ್ ವಿತರಿಸುವ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ರಾಗಿ ಮಾಲ್ಟ್ ಕುಡಿಯುವುದರಿಂದ ಮಕ್ಕಳಿಗೆ ರಾಗಿಯಲ್ಲಿ ಸಮೃದ್ಧವಾಗಿ ದೊರೆಯುವ ಕಬ್ಬಿಣಾಂಶ, ನಾರಿನಾಂಶ ಮತ್ತು ಕ್ಯಾಲ್ಸಿಯಂಗಳಿಂದ ದೇಹದ ಮೂಳೆಗಳು, ಹಲ್ಲು ಗಟ್ಟಿಯಾಗುವ ಜೊತೆಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ.

ಯಲಬುರ್ಗಾ: ರಾಗಿ ಮಾಲ್ಟ್‌ ನ್ನು ಎಲ್ಲ ಮಕ್ಕಳು ತಪ್ಪದೇ ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯ ಪಡೆಯಬೇಕು ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.ಪಟ್ಟಣದ ನಂ.೧ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿ ಆರೋಗ್ಯ ಹಿತದೃಷ್ಟಿಯಿಂದ ರಾಗಿ ಮಾಲ್ಟ್ ವಿತರಿಸುತ್ತಿದೆ. ಎಲ್ಲ ಶಾಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಮಾತನಾಡಿ, ಸರ್ಕಾರದ ಆದೇಶದನ್ವಯ ತಾಲೂಕಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ೧-೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಕ್ಷೀರಭಾಗ್ಯ ಯೋಜನೆಯ ಹಾಲಿನೊಂದಿಗೆ ರಾಗಿ ಪೌಡರ್ ಬೆರೆಸಿ ಮಾಲ್ಟ್ ತಯಾರಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಗಿ ಮಾಲ್ಟ್ ಕುಡಿಯುವುದರಿಂದ ಮಕ್ಕಳಿಗೆ ರಾಗಿಯಲ್ಲಿ ಸಮೃದ್ಧವಾಗಿ ದೊರೆಯುವ ಕಬ್ಬಿಣಾಂಶ, ನಾರಿನಾಂಶ ಮತ್ತು ಕ್ಯಾಲ್ಸಿಯಂಗಳಿಂದ ದೇಹದ ಮೂಳೆಗಳು, ಹಲ್ಲು ಗಟ್ಟಿಯಾಗುವ ಜೊತೆಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಿದರು. ಬಿಇಒ ಕೆ.ಟಿ.ನಿಂಗಪ್ಪ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಮಧ್ಯಾಹ್ನ ಉಪಹಾರ ಯೋಜನೆಯ ಬಿಸಿಹಾಲು, ಬಿಸಿಯೂಟ ಮತ್ತು ಪೂರಕ ಪೌಷ್ಟಿಕ ಆಹಾರಗಳನ್ನು ತಪ್ಪದೇ ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕೆಂದರು.ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿದರು.ಅತಿಥಿಗಳಾಗಿ ಪಪಂ ಸದಸ್ಯರಾದ ವಸಂತ ಭಾವಿಮನಿ, ರೇವಣಪ್ಪ ಹಿರೇಕುರುಬರ, ಎಸ್.ವಿ. ಧರಣಾ, ಅಶೋಕ್ ಮಾಲಿಪಾಟೀಲ, ಬಸವರಾಜ ಮೇಟಿ, ಬಸವರಾಜ ಮಾಸ್ತಿ, ವಿ.ಎಸ್. ಬೆಣಕಲ್, ಸೋಮಶೇಖರ ಹರ್ತಿ, ಸಿದ್ದಲಿಂಗಪ್ಪ ಶ್ಯಾಗೋಟಿ, ವೀರಭದ್ರಪ್ಪ ಅಂಗಡಿ, ರವಿ ಹಡಪದ, ಹೇಮಾವತಿ ಬಣಕಾರ, ಶಂಕ್ರಮ್ಮ, ಶಿವಪ್ಪ ಅಧಿಕಾರಿ, ಮುಖ್ಯೋಪಾಧ್ಯಾಯ ರುದ್ರಗೌಡ, ಶಿಕ್ಷಕರಾದ ಜಗದೀಶ್ಚಂದ್ರ, ಸಂಗಮ್ಮ, ಶಾರದಾದೇವಿ, ಸುಧಾ, ರಮಜಾನಬಿ, ಮುದಿಯಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ