- ಉಡೇವಾದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ತರೀಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ 10200 ಮನೆಗಳಿಗೆ ಇ-ಸ್ವತ್ತು ಇಲ್ಲದ ವಿಚಾರವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರಿಂದ ರಾಜ್ಯದ ಲಕ್ಷಾಂತರ ಮಂದಿಗೆ ಇ-ಖಾತಾ ದೊರೆಯಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಉಡೇವಾ ಗ್ರಾಮದಲ್ಲಿ ಎಸ್.ಇ.ಪಿ ಹಾಗೂ ಟಿಎಸ್.ಪಿ ಮತ್ತು ಸಾಮಾನ್ಯ ವರ್ಗದ ಯೋಜನೆಯ ₹60 ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ ಇ-ಸ್ವತ್ತು ಇಲ್ಲದ ಕಾರಣ ಫಲಾನುಭವಿಗಳ ತಂದೆ ತಾಯಿಯರ ಹೆಸರಿನಲ್ಲಿದ್ದ ಮನೆ ಮತ್ತು ಖಾಲಿ ನಿವೇಶನಗಳ ವರ್ಗಾವಣೆ, ಬ್ಯಾಂಕು ಮತ್ತು ಇತರೆಡೆಗಳಿಂದ ಸಾಲ ಸೌಲಭ್ಯ ಸಿಗದೆ ಹೊಸ ಮನೆಗಳ ನಿರ್ಮಾಣ, ಇನ್ನಿತರ ಗೃಹ ಕೃತ್ಯದ ಅಗತ್ಯ ಗಳಿಗಾಗಲೀ ತೊಂದರೆಯಾಗುತ್ತಿತ್ತು. ಕಂದಾಯ ಗ್ರಾಮಗಳನ್ನಾಗಲೀ, ಉಪ ಕಂದಾಯ ಗ್ರಾಮಗಳನ್ನಾಗಲಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯ ಅರಿತ ತಾವು ಇದನ್ನು ಪ್ರಸ್ತಾಪಿಸಿದ್ದೆವು ಎಂದರು.ಉಡೇವಾ ಗ್ರಾಪಂ ವ್ಯಾಪ್ತಿಯಲ್ಲಿ 8 ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆಯ ನೀರು ವ್ಯರ್ಥವಾಗಿ ಹೋಗದೇ ಭೂಮಿಯಲ್ಲಿ ಅಂತರ್ ಜಲ ಮಟ್ಟ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಿದೆ. ಉಡೇವಾ ಗ್ರಾಮದ ವ್ಯಾಪ್ತಿಯಲ್ಲಿ ₹ 3.80 ಕೋಟಿ ಅಂದಾಜು ವೆಚ್ಚದಲ್ಲಿ ನೀರು ಮರುಪೂರಣ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯ ನಡೆಯುತ್ತಿರುವ ಸಿಸಿ ಕಾಮಗಾರಿ ಪೂರ್ಣಗೊಂಡರೆ ಇಡೀ ಗ್ರಾಮದ ರಸ್ತೆಗಳೆಲ್ಲವೂ ಸಿಸ. ರಸ್ತೆಗಳಂತಾಗಲಿವೆ ಎಂದು ತಿಳಿಸಿದರು.
ಈ ಸಂದರ್ಭಧಲ್ಲಿ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷೆ ಲತಾ ತಮ್ಮಯ್ಯ, ಗ್ರಾಪಂ ಸದಸ್ಯರಾದ ಡಿ. ಶ್ರೀನಿವಾಸ್, ಜ್ಞಾನಮೂರ್ತಿ, ಆಂಡಿಗೌಡ, ತಾ.ಪಂ ಮಾಜಿ ಸದಸ್ಯ ಎಸ್.ಎ ಕೃಷ್ಣಪ್ಪ, ಸಿ. ರಾಜಕುಮಾರ್, ಅಬೂಬಕರ್ ಗ್ರಾಮಸ್ಥರಾದ ಈಶ್ವರಪ್ಪ, ಸಿದ್ದಪ್ಪ, ತಿಮ್ಮಯ್ಯ, ಭೂ ಸೇನಾ ನಿಗಮದ ಇಂಜಿನಿಯರ್ ಪುನೀತ್, ಪಿಡಿಒಬಿ ಮಂಜು, ಮುಂತಾದವರು ಹಾಜರಿದ್ದರು. -
ಉಡೇವಾ ಗ್ರಾಮದಲ್ಲಿ ₹60 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ , ತಮ್ಮಯ್ಯ, ಸಿ.ರಾಜಕುಮಾರ್, ರಚನಾ ಶ್ರೀನಿವಾಸ್, ಪುನೀತ್. ಬಿ ಮಂಜು, ಮುಂತಾದವರು ಶಂಕು ಸ್ಥಾಪನೆ ನೇರವೇರಿಸಿದರು.