ಕಾಂಗ್ರೆಸ್ ಪಕ್ಷದ ನಿವೇಶನ ಸ್ಥಳ ಪರಿಶೀಲಿಸಿದ ಸಚಿವ ಡಿ ಸುಧಾಕರ್

KannadaprabhaNewsNetwork |  
Published : Nov 18, 2024, 12:03 AM IST
ಚಿತ್ರ 2 | Kannada Prabha

ಸಾರಾಂಶ

Minister D Sudhakar inspected the venue of the Congress party

ಹಿರಿಯೂರು: ನಗರದ ಶ್ರೀಶೈಲ ವೃತ್ತದ ಬಳಿಯಿರುವ ಕಾಂಗ್ರೆಸ್ ಪಕ್ಷದ ನಿವೇಶನ ಸ್ಥಳಕ್ಕೆ ಸಚಿವ ಡಿ ಸುಧಾಕರ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಮತ್ತು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಅವರು ಸಚಿವರಿಗೆ ಸ್ಥಳದ ಬಗ್ಗೆ ವಿವರಣೆ ನೀಡಿ ಈ ಸ್ಥಳದಲ್ಲಿ ವಾಸ ಮಾಡುತ್ತಿದ್ದಂತ ಮೂರು ಕುಟುಂಬದವರಿಗೆ ತಲಾ ಒಂದು ಲಕ್ಷ ರು. ನೀಡಲಾಗಿದೆ. ಇದೀಗ ನಿರಾಶ್ರಿತರಾಗಿರುವ ಅವರಿಗೆ ಜಿ ಪ್ಲಸ್ ಟು ಮನೆಯನ್ನು ಮೂರೂ ಕುಟುಂಬದವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅತಿ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕರೆತಂದು ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿಸಿ, ಭವ್ಯ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಿಸಲಾಗುವುದು. ಈ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಸಾದತ್ ಉಲ್ಲಾ, ಜಗದೀಶ್, ಶಿವಣ್ಣ, ಗಿರೀಶ್ ನಾಯಕ, ಮಹಮದ್ ಫಕ್ರುದ್ದೀನ್, ವಕೀಲ ಶಿವಕುಮಾರ್, ಅಣ್ಣಪ್ಪ ಸ್ವಾಮಿ ಶಮ್ಮ, ಚಿದಾನಂದ, ರಘು,ಮಹೇಶ್, ದಾದಾಪೀರ್ ಮುಂತಾದವರು ಹಾಜರಿದ್ದರು.

-----

ಫೋಟೊ: ನಗರದ ಶ್ರೀ ಶೈಲ ವೃತ್ತದಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣದ ಸ್ಥಳಕ್ಕೆ ಸಚಿವ ಡಿ ಸುಧಾಕರ್ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!