ಆಷಾಢ ಶುಕ್ರವಾರ- ಭಕ್ತಾದಿಗಳಿಗೆ ಸಹಕರಿಸಿ

KannadaprabhaNewsNetwork |  
Published : Jul 16, 2026, 01:15 AM IST
5 | Kannada Prabha

ಸಾರಾಂಶ

ಮೊದಲ ಆದ್ಯತೆ ಸಾಮಾನ್ಯ ಭಕ್ತಾದಿಗಳಿಗೆ ಸುಲಭವಾಗಿ ದರ್ಶನ ಸಿಗುವಂತೆ ಮಾಡುವುದು

ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಆಷಾಢ ಶುಕ್ರವಾರದ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಪೂರ್ವ ಸಿದ್ಧತೆ ಪರಿಶೀಲಿಸಿದರು.ಈ ವೇಳೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.ಆಷಾಢ ಶುಕ್ರವಾರಗಳಂದು ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ತಡೆಯಲು ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.ಮೊದಲ ಆದ್ಯತೆ ಸಾಮಾನ್ಯ ಭಕ್ತಾದಿಗಳಿಗೆ ಸುಲಭವಾಗಿ ದರ್ಶನ ಸಿಗುವಂತೆ ಮಾಡುವುದು. ಆದ್ದರಿಂದ, ನಿಗದಿತ ಸಮಯದ ನಂತರ ಬರುವ ವಿಐಪಿಗಳು ಸಾಮಾನ್ಯ ಸಾಲಿನಲ್ಲೇ ಬರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಯಾವುದೇ ರೀತಿಯ ಪ್ರಭಾವಿ ವ್ಯಕ್ತಿಗಳ ಶಿಫಾರಸು ಪತ್ರಗಳನ್ನು ತಂದರೂ ಅವರಿಗೆ ವಿಶೇಷ ರಿಯಾಯಿತಿ ಅಥವಾ ದರ್ಶನ ಇರುವುದಿಲ್ಲ. ಆಷಾಢ ಶುಕ್ರವಾರ ಮತ್ತು ವರ್ಧಂತಿ ಉತ್ಸವದ ದಿನಗಳಂದು ಭಕ್ತಾದಿಗಳ ಖಾಸಗಿ ವಾಹನಗಳಿಗೆ ಬೆಟ್ಟದ ಮೇಲೆ ಹೋಗಲು ಅನುಮತಿ ಇರುವುದಿಲ್ಲ ಎಂದು ಅವರು ತಿಳಿಸಿದರು.ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಯಾರೇ ಆದರೂ ತಮ್ಮ ವಾಹನಗಳನ್ನು ಕೆಳಗಿನ ನಿಗದಿತ ಪಾರ್ಕಿಂಗ್ ಮೈದಾನದಲ್ಲಿ ಲಲಿತ ಮಹಲ್ ಮೈದಾನದಲ್ಲಿ ಪಾರ್ಕ್ ಮಾಡಿ, ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ನ ಉಚಿತ ಸೇವೆ ಮೂಲಕವೇ ಚಾಮುಂಡಿಬೆಟ್ಟಕ್ಕೆ ಬರಬೇಕಾಗುತ್ತದೆ ಎಂದರು.ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳ ಹಾಗೂ ಉಚಿತ ಬಾದಾಮಿ ಹಾಲು ಮತ್ತು ಬಿಸ್ಕೆಟ್ ವಿತರಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.ಕಂಬಳ ನಮ್ಮ ರಾಜ್ಯದ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಪರಿಸರಕ್ಕೆ ಮತ್ತು ಪ್ರಾಣಿಗಳಿಗೆ ಹಾನಿಯಾಗದಂತೆ ಇದನ್ನು ಆಯೋಜಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಡಿಸಿಪಿಗಳಾದ ಡಾ. ಹರ್ಷಾ ಪ್ರಿಯಂವದ, ಸುಂದರ್ ರಾಜ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ
ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ