ಸಚಿವ ಜೋಶಿ ಅನುದಾನದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಸಭಾಭವನ ಭೂಮಿಪೂಜೆ

KannadaprabhaNewsNetwork |  
Published : Sep 26, 2025, 01:00 AM IST
 25ಎಸ್‌ವಿಆರ್‌01 | Kannada Prabha

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಕ್ಷೇತ್ರದ ಬಗ್ಗೆ ಅಪಾರವಾದ ಕಾಳಜಿಯಿಂದಾಗಿ ಈಗಾಗಲೇ ಸಂಸದರ ಅನುದಾನದಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಸುಮಾರು 10 ಲಕ್ಷ ರು.ಗಳನ್ನು ನೀಡಿ ಸಭಾ ಭವನಕ್ಕೆ ಗುದ್ದಲಿಪೂಜೆ ನೆರವೇರಿಸುತ್ತಿರುವದು ಶ್ಲಾಘನೀಯವಾಗಿದೆ ಎಂದು ಬಿಜೆಪಿ ಮಂಡಳ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಹೇಳಿದರು.

ಸವಣೂರು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಕ್ಷೇತ್ರದ ಬಗ್ಗೆ ಅಪಾರವಾದ ಕಾಳಜಿಯಿಂದಾಗಿ ಈಗಾಗಲೇ ಸಂಸದರ ಅನುದಾನದಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಸುಮಾರು 10 ಲಕ್ಷ ರು.ಗಳನ್ನು ನೀಡಿ ಸಭಾ ಭವನಕ್ಕೆ ಗುದ್ದಲಿಪೂಜೆ ನೆರವೇರಿಸುತ್ತಿರುವದು ಶ್ಲಾಘನೀಯವಾಗಿದೆ ಎಂದು ಬಿಜೆಪಿ ಮಂಡಳ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಹೇಳಿದರು.ತಾಲೂಕಿನ ಮಂತ್ರೋಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸಭಾಭವನ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಸಹಿತ ಹತ್ತಾರು ಕೆಲಸದ ಒತ್ತಡಗಳ ಮಧ್ಯ ಕ್ಷೇತ್ರದ ಜನರ ಜೊತೆ ನಿತ್ಯ ಒಡನಾಟ ಇಟ್ಟುಕೊಂಡು ಬೀರಲಿಂಗೇಶ್ವರ ದೇವಸ್ಥಾನ ಸಭಾಭವನಕ್ಕೆ ಸುಮಾರು 10 ಲಕ್ಷ ನೀಡಿ ಗ್ರಾಮಗಳ ಅಭೀವೃದ್ಧಿಯ ಜೊತೆಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿರುವದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಮಂತ್ರೋಡಿ ಗ್ರಾಮಕ್ಕೆ ಬೀರಲಿಂಗೇಶ್ವರ ಸಭಾಭವನ ತರಲಿಕ್ಕೆ ಜೋಶಿ ಅವರ ಜೊತೆ ಕಳಲಕೊಂಡ ಅವರು ಸತತ ಸಂಪರ್ಕದಲ್ಲಿ ಇದ್ದು, ಸಂಸದರ ಅನುದಾನವನ್ನು ಬಳಕೆ ಮಾಡಿಕೊಂಡು ಇಂದು ಸಭಾಭವನ ಭೂಮಿಪೂಜೆ ನೇರವೇರಲು ಕಳಲಕೊಂಡ ಅವರ ಬದ್ಧತೆ ಮತ್ತು ಕಾಳಜಿಯೆ ಕಾರಣವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಂದ ಬೀರಲಿಂಗೇಶ್ವರ ಸಭಾಭವನ ಕಟ್ಟಡ ಉದ್ಘಾಟನೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ ಎಂದರು.ಸಾನಿಧ್ಯವನ್ನು ಬಂಕಾಪೂರ ಕೆಂಡದಮಠದ ಸಿದ್ದಯ್ಯಸ್ವಾಮೀಜಿ ಹಾಗೂ ಮಂತ್ರೋಡಿ ಹಿರೇಮಠದ ಸಿದ್ರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಂತ್ರೋಡಿ ಗ್ರಾಮಕ್ಕೆ ಬಹುದಿನಗಳ ಬೇಡಿಕೆಯಾಗಿದ್ದ ಬೀರಲಿಂಗೇಶ್ವರ ಸಭಾಭವನದ ಗುದ್ದಲಿ ಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ ಈ ಕುರುಬ ಸಮಾಜ ತೀರಾ ಬಡ ಸಮಾಜವಾದ್ದರಿಂದ ಜನಪ್ರತಿನಿಧಿಗಳು ಈ ಸಮಾಜದ ಬಗ್ಗೆ ಹೆಚ್ಚಿನ ಒಲವನ್ನು ತೋರಿ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಈ ಸಭಾಭವನ ಬಡವರ ಕಲ್ಯಾಣ ಕಾರ್ಯಕ್ಕೆ ಉಪಯೋಗವಾಗಲಿ. ತಾಲೂಕಿನಲ್ಲಿಯೆ ಸುಂದರ ಸಭಾಭವನ ನಿರ್ಮಾಣಕ್ಕೆ ಸಮಾಜದ ಬಂಧುಗಳು ಕಂಕಣ ಬದ್ಧರಾಗಬೇಕಿದೆ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಮಾಜಿ.ತಾಪಂ.ಅಧ್ಯಕ್ಷ ಮಾಲತೇಶ ಬಿಜ್ಜೂರ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೋಳಿವಾಡ, ಉಪಾಧ್ಯಕ್ಷ ಸುರೇಶ ಹೊನ್ನಿಕೊಪ್ಪ, ಸದಸ್ಯರಾದ ಮಲ್ಲೇಶಪ್ಪ ಭಂಡಾರಿ, ಬಾಪುಗೌಡ ಕೊಪ್ಪದ, ಬಿಜೆಪಿ ಮಂಡಳ ಕಾರ್ಯದರ್ಶಿ ಅಶೋಕ ಎಲಿಗಾರ, ಬಸನಗೌಡ ಕೊಪ್ಪದ, ಟಿ.ಬಿ. ಪಾಟೀಲ, ಬಸನಗೌಡ ಪಾಟೀಲ, ಕುರುಬ ಸಮಾಜದ ಮುಖಂಡರಾದ ಹನಮಂತಪ್ಪ ಬಂಕಾಪೂರ, ಯಲ್ಲಪ್ಪ ಆಡಿನ, ಹನಮಂತಪ್ಪ ನೆಲ್ಲೂರ, ನಿಂಗಪ್ಪ ಯಲವಿಗಿ, ನಿಂಗಪ್ಪ ನೆಲ್ಲೂರ, ಶಿವಪ್ಪ ಕಳಲಕೊಂಡ, ಸಿದ್ದಪ್ಪ ಬಡ್ನಿ, ಮಹಾಲಿಂಗಪ್ಪ ಪೂಜಾರ, ಯಲ್ಲಪ್ಪ ಕಾಳಪ್ಪನವರ, ಹನಮಂತಪ್ಪ ಹುಡೇದ, ಅಶೋಕ ನೆಲ್ಲೂರ, ತಿಪ್ಪಣ್ಣ ಪೂಜಾರ, ಶಿದ್ದಪ್ಪ ಕಳಲಕೊಂಡ, ಕರೆಯಪ್ಪ ಪೂಜಾರ, ಹುಲಗಪ್ಪ ಕಳ್ಳಿಮನಿ, ಮಾಲತೇಶ ಭಂಡಾರಿ, ಪರಶುರಾಮ ಹುಡೇದ, ಮೈಲಾರಪ್ಪ ಪೂಜಾರ, ಮಾದೇವಪ್ಪ ಕುರಿಗಾರ, ನೀಲಪ್ಪ ಹುಣಿಸಿಮರದ ಹಾಗೂ ಕುರುಬ ಸಮಾಜದವರು ಇದ್ದರು.

ಫಕ್ಕೀರೇಶ ನೆಲ್ಲೂರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ