ಗೋಕರ್ಣ ಆತ್ಮಲಿಂಗಕ್ಕೆ ಸಚಿವ ಜೋಶಿ ಪೂಜೆ

KannadaprabhaNewsNetwork |  
Published : May 30, 2024, 12:45 AM IST
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೋಕರ್ಣದಲ್ಲಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಮಂದಿರದ ಪ್ರಧಾನ ಅರ್ಚಕ ವೇ. ಅಮೃತೇಶ ಹಿರೇ, ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ಮಹಾಬಲ ಉಪಾಧ್ಯಾ ಪೂಜಾ ಕೈಂಕರ್ಯ ನೆರವೇರಿಸಿದರು.

ಗೋಕರ್ಣ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಂಬ ಸಮೇತರಾಗಿ ಬುಧವಾರ ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಬಳಿಕ ಮಾತನಾಡಿದ ಸಚಿವರು, ಇದು ಖಾಸಗಿ ಭೇಟಿಯಾಗಿದ್ದು, ಲೋಕ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಿದ್ದೇನೆ. ಬಿಜೆಪಿ ಅತ್ಯಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಪುನಃ ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಹಾಗೂ ತಮಗೂ ಗೆಲುವಾಗಲು ಪ್ರಾರ್ಥಿಸಿದ್ದೇನೆ ಎಂದರಲ್ಲದೇ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂದಿರದ ಪ್ರಧಾನ ಅರ್ಚಕ ವೇ. ಅಮೃತೇಶ ಹಿರೇ, ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ಮಹಾಬಲ ಉಪಾಧ್ಯಾ ಪೂಜಾ ಕೈಂಕರ್ಯ ನೆರವೇರಿಸಿದರು.

ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ ಅವರ ಪತ್ನಿ ಜ್ಯೋತಿ ಜೋಶಿ, ಪುತ್ರಿಯರಾದ ಅರ್ಪಿತಾ ಜೋಶಿ, ಅನುಷಾ ಜೋಶಿ, ಅನನ್ಯಾ ಜೋಶಿ, ಅಳಿಯ ಅಭಿಷೇಕ, ಹೃಷಿಕೇಶ ಹಾಗೂ ಸಹೋದರ ಗೋವಿಂದ ಜೋಶಿ, ಅಭಯ ಜೋಶಿ, ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪಕ್ಷದ ಪ್ರಮುಖರಾದ ಕುಮಾರ ಮಾರ್ಕಾಂಡೆ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಂಜುನಾಥ ಜನ್ನು, ಗಣೇಶ ಪಂಡಿತ, ಮಾಜಿ ತಾಪಂ ಸದಸ್ಯ ಮಹೇಶ ಶೆಟ್ಟಿ, ಗಣೇಶ ಪಂಡಿತ, ಗ್ರಾಪಂ ಸದಸ್ಯರಾದ ಗಣಪತಿ ನಾಯ್ಕ, ಸತೀಶ ದೇಶಭಂಡಾರಿ, ಲಕ್ಷ್ಮೀಶ ಗೌಡ, ಕುಮಾರ ದೀವಟಗಿ, ನಾಗೇಶ ಸೂರಿ ಮತ್ತಿರ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಮಂದಿರದ ಕಾರ್ಯನಿರ್ವಾಹಕ ರಾಮಚಂದ್ರ ನಿರ್ವಾಣೇಶ್ವರ ಮಂದಿರದ ವತಿಯಿಂದ ಗೌರವಿಸಿ ಗೋಕರ್ಣದ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ರೀಕ್ಷೇತ್ರಕ್ಕೆ ಭೇಟಿ ಮಾಡಿಸುವಂತೆ ಕೋರಿದರು.

ಸಚಿವರಿಗೆ ಮನವಿ: ಇಲ್ಲಿನ ತದಡಿಯಿಂದ ಅಘನಾಶಿನಿ ತೆರಳಲು ಸೇತುವೆ ಮಂಜೂರಿ ಮಾಡುವ ಕುರಿತು ಬಿಜೆಪಿ ಪ್ರಮುಖ ಕುಮಾರ ಮಾರ್ಕಾಂಡೆ ಮನವಿ ಮಾಡಿದರು. ಸೇತುವೆ ನಿರ್ಮಾಣವಾದರೆ ಬಂದಿರನ ಮೀನಿನ ವಹಿವಾಟಿಗೆ ಹಾಗೂ ಪ್ರವಾಸಿ ತಾಣದಿಂದ ತಾಲೂಕು ಕೇಂದ್ರಕ್ಕೆ ತೆರಳಲು ಹತ್ತಿರವಾಗುವ ಮಾರ್ಗವಾಗಿದ್ದು, ಅನುಕೂಲವಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ