ಗಜೇಂದ್ರಗಡ: ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಿದ ಪಕ್ಷ ಬಿಜೆಪಿ. ಪಕ್ಷ ಕಟ್ಟಿದ ಹಿರಿಯರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ತಿಳಿಸಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಸೋಮವಾರ ಭಾರತಮಾತೆ, ಪಂಡಿತ ದೀನದಯಾಳ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ಚಿಂತನೆ ಮೂಲಕ ದೇಶವನ್ನು ಕಟ್ಟುವ ಕೆಲಸಕ್ಕೆ ಮುನ್ನುಡಿ ಬರೆದ ಪಕ್ಷದ ಹಿರಿಯರನ್ನು ಸ್ಮರಿಸಬೇಕಿದೆ. ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತಿರುವ ಕಾರ್ಯಕರ್ತರನ್ನು ಬಿಜೆಪಿ ಗುರುತಿಸುತ್ತಾ ಪಕ್ಷದ ಜವಾಬ್ದಾರಿ ನೀಡುತ್ತಾ ಬಂದಿದ್ದು, ಆ ಮೂಲಕ ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಜನಜನಿತವಾಗಿದೆ ಎಂದರು.
ಈ ವೇಳೆ ಶಿವಾನಂದ ಮಠದ, ಮುದಿಯಪ್ಪ ಕರಡಿ, ಅಶೋಕ ವನ್ನಾಲ, ರಾಜೇಂದ್ರ ಘೋರ್ಪಡೆ, ಬಾಳಾಜಿರಾವ್ ಭೋಸಲೆ, ರಮೇಶ ವಕ್ಕರ, ಯಮನಪ್ಪ ತಿರಕೋಜಿ, ಶಂಕರ ಇಂಜನಿ, ಮಾಂತೇಶ ಪೂಜಾರ, ಸೂಗುರೇಶ ಕಾಜಗಾರ ಇತರರು ಇದ್ದರು.ರಸಗೊಬ್ಬರ ಖರೀದಿಸಲು ರೈತರಿಗೆ ಎಫ್‌ಐಡಿ ಕಡ್ಡಾಯ
ಗದಗ: ಈ ಬಾರಿ ರಸಗೊಬ್ಬರ ಖರೀದಿಸಲು ರೈತರಿಗೆ ಎಫ್‌ಐಡಿಯನ್ನು ಕಡ್ಡಾಯ ಮಾಡಲಾಗಿದೆ.ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾವಸ್ತುಗಳ ಆಮದಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಂಭವವಿದೆ. ಇದರಿಂದ ರಸಗೊಬ್ಬರ ವಿತರೆಣೆಯ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ.ಈ ಕುರಿತು ರಾಜ್ಯ ಸರ್ಕಾರ ಕೃಷಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರಸಗೊಬ್ಬರ ಖರೀದಿಗೆ ರೈತರು ಕಡ್ಡಾಯವಾಗಿ ಎಫ್‌ಐಡಿ ಹೊಂದಿರಬೇಕು. ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುವುದು ಮತ್ತು ಜಿಲ್ಲೆಯ ರೈತರು ಸಹ ಮಿತವ್ಯವಯವಾಗಿ ರಸಗೊಬ್ಬರಗಳ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕೆ ಕೆ- ಕಿಸಾನ ತಂತ್ರಾಂಶದ ಮೂಲಕ ರಸಗೊಬ್ಬರಗಳ ವಿತರಣೆ ಮಾಡಲಾಗುತ್ತದೆ.