ಬೀದರ್‌ನಲ್ಲಿ ಪತಂಗ್‌ ಉತ್ಸವಕ್ಕೆ ಸಚಿವ ಖಂಡ್ರೆ ಚಾಲನೆ

KannadaprabhaNewsNetwork |  
Published : Oct 18, 2026, 02:30 AM IST
ಚಿತ್ರ 17ಬಿಡಿಆರ್‌11ಬೀದರ್‌ನ ಬಿವಿಬಿ ಮಹಾವಿದ್ಯಾಲಯದ ಮೈದಾನದಲ್ಲಿ ಬೀದರ್‌ ದಸರಾ ಪತಂಗ್‌ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 'ಪತಂಗ್‌ ಉತ್ಸವ'ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ದಸರಾ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಿವಿಬಿ ಮಹಾವಿದ್ಯಾಲಯದ ಮೈದಾನದಲ್ಲಿ ಬೀದರ್‌ ದಸರಾ ಪತಂಗ್‌ ಉತ್ಸವ ಸಮಿತಿ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ''''ಪತಂಗ್‌ ಉತ್ಸವ''''ಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ದಸರಾ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಿವಿಬಿ ಮಹಾವಿದ್ಯಾಲಯದ ಮೈದಾನದಲ್ಲಿ ಬೀದರ್‌ ದಸರಾ ಪತಂಗ್‌ ಉತ್ಸವ ಸಮಿತಿ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ''''''''ಪತಂಗ್‌ ಉತ್ಸವ''''''''ಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರಮುಖವಾಗಿವೆ. ವಿಜಯದ ಸಂಕೇತವಾದ ದಸರಾ ಹಬ್ಬದ ಸಂದರ್ಭದಲ್ಲಿ ಪೂರ್ವಜರ ಕಾಲದಿಂದಲೂ ಬಂದಿರುವ ಗಾಳಿಪಟ ಹಾರಿಸುವ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟು, ವಿಜ್ಞಾನ ಎಷ್ಟೇ ಮುಂದುವರಿದರೂ ಮನುಷ್ಯನಿಗೆ ಭಾವನೆಗಳು ಹಾಗೂ ತನ್ನತನ ಮುಖ್ಯ. ಇಲ್ಲದಿದ್ದರೆ ಜೀವನ ಯಾಂತ್ರಿಕವಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ರಹೀಮ್‌ ಖಾನ್‌ ಮಾತನಾಡಿ, ಪತಂಗ ಹಾರಾಟ ಒತ್ತಡದ ಬದುಕಿನಲ್ಲಿ ಮನಸ್ಸಿಗೆ ನೆಮ್ಮದಿ ಹಾಗೂ ಆನಂದ ನೀಡಲು ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಾವಶ್ಯಕವಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಉತ್ಸವದ ಆಯೋಜಕ ಬಾಬು ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೈದ್ರಾಬಾದ್‌ನಿಂದ ಆಗಮಿಸಿದ್ದ ಕೋಹಿನೂರ್‌ ಕೈಟ್‌ ಕ್ಲಬ್‌ ಹಾಗೂ ಇಂಡಿಯನ್‌ ಕೈಟ್‌ ಫ್ಲೈಯರ್‌ ಕ್ಲಬ್‌ ಸದಸ್ಯರು ಪ್ರದರ್ಶಿಸಿದ ಆಕರ್ಷಕ ಗಾಳಿಪಟಗಳು ಸಭಿಕರ ಮನಸೂರೆಗೊಂಡವು.

ಈ ಸಂದರ್ಭದಲ್ಲಿ ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಸೋಮಶೇಖರ್‌ ಪಾಟೀಲ್‌ ಗಾದಗಿ, ದೀಪಕ ವಾಲಿ, ಡಾ. ರಜನೀಶ ವಾಲಿ, ಕರ್ನಲ್‌ ಶರಣಪ್ಪ, ಪ್ರಕಾಶ ಟೊಣ್ಣೆ, ಡಾ. ರಾಜಶೇಖರ್‌ ಕೌಜಲಗಿ, ಜಯರಾಜ್‌ ಖಂಡ್ರೆ, ದಿಗಂಬರ್‌ ಮಡಿವಾಳ, ವಿಜಯಕುಮಾರ ಪಾಟೀಲ್‌ ಯರನಳ್ಳಿ, ಹಣಮಂತ, ಧನರಾಜ್‌ ಹಂಗರಗಿ, ರಮೇಶ ಬಿರಾದರ ಚಿಟ್ಟಾ, ಪ್ರಭು ಮಡಿವಾಳ, ಸಂತೋಷ ಬಾಲೋಡೆ, ದೀಪಾ ಬಾಲೋಡೆ, ಸುನೀಲ್‌ ದಳವೆ ಹಾಗೂ ಚೇತನ ಬಾವಿ ಉಪಸ್ಥಿತರಿದ್ದರು.

ಪತಂಗ್‌ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಮೂಲಗೆ ಸ್ವಾಗತಿಸಿ ಬಾಬು ದಾನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕದ ಶಿಕ್ಷಣವನ್ನು ಮಕ್ಕಳಿಗೆ ಪರಿಚಯಿಸಲು ಯೋಜನೆ ರೂಪಿಸಿದ್ದೇನೆ: ಸಿ.ಎಸ್.ಪುಟ್ಟರಾಜು
ಮದ್ದೂರು ತಾಪಂ ಕಚೇರಿ ನೂತನ ಕಟ್ಟಡ ಹೈಟೆಕ್ ಮಾದರಿ ನಿರ್ಮಾಣ: ಕೆ.ಎಂ.ಉದಯ್