)
ಬೆಂಗಳೂರು: ಮೆಟ್ರೋ ಪಿಂಕ್ ಮಾರ್ಗ ಶನಿವಾರದಿಂದ ಸಾರ್ವಜನಿಕರಿಗೆ ಮುಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಈ ಮಾರ್ಗದಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಮೊದಲ ದಿನ ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಬೇಕು ಎಂಬ ಉದ್ದೇಶದಿಂದ ಮೆಟ್ರೋ ಅಧಿಕಾರಿಗಳ ಜೊತೆ ಕಾಳೇನ ಅಗ್ರಹಾರದಿಂದ ಎಸ್ ಜಿ ಪಾಳ್ಯಕ್ಕೆ ಸಂಚಾರ ಮಾಡಿದೆ. ಜನರು ಕಾಳೇನ ಆಗ್ರಹಾರದಿಂದ ಸಂತೋಷದಿಂದ ಪ್ರಯಾಣಿಕರು ಬಂದಿದ್ದರು. ಅವರ ಸಂತಸ ನೋಡಿ ತಮಗೂ ಸಂತೋಷವಾಗಿದೆ. ಅವರಿಗೆ ಖುಷಿ ಆದರೆ ನಮಗೆ ಸಾರ್ಥಕತೆ ಬರುತ್ತದೆ ಎಂದರು. ಜನರು ಈ ಮಾರ್ಗವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಆದಷ್ಟು ಬೇಗ ಮಾರ್ಗ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.