ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ಸಚಿವ ಕುಮಾರಸ್ವಾಮಿ ವಾಗ್ದಾಳಿ

KannadaprabhaNewsNetwork |  
Published : Aug 23, 2026, 01:45 AM IST
22ಎಚ್ಎಸ್ಎನ್6ಎ : ಹೊಳೆನರಸೀಪುರ ತಾ. ಮಾವಿನಕೆರೆ ಬೆಟ್ಟದ ತಪ್ಪಲಿನ ಹರದನಹಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಶಾಸಕ ಎಚ್.ಡಿ.ರೇವಣ್ಣ ಇದ್ದರು. | Kannada Prabha

ಸಾರಾಂಶ

ಈ ಹಿಂದೆ ಇಂದಿನ ಮುಖ್ಯಮಂತ್ರಿಗಳು ಸತ್ಯ ಶೋಧನಾ ಸಮತಿ ಸದಸ್ಯರಿದ್ದರು. ಈ ಯೋಜನೆ ಬೇಕು ಅಂಥ ಏಕೆ ಜ್ಞಾನೋದಯ ಆಯ್ತು ಎಂದು ಪ್ರಶ್ನಿಸಿ, ಬಿಡದಿ ಟೌನ್‌ಶಿಪ್ ಮಾಡೇ ಮಾಡ್ತಿನಿ ಅಂತಿರಲ್ಲಾ ಭೂಮಿಗೆ ಪರಿಹಾರ ಕೊಡಲು ಎಷ್ಟು ಕೋಟಿ ಆಗುತ್ತೆ. ಇವರಿಗೆ ಲ್ಯಾಂಡ್ ವ್ಯಾಲ್ಯೂ ಗೊತ್ತಿಲ್ಲ. ನೀವೇ ದುಡ್ಡು ಮಾಡಲು ಹೊರಟಿದ್ದಿರೋ ಅಥವಾ ದುಡ್ಡು ಮಾಡುವವರಿಗೆ ಬೆಂಬಲ ಕೊಡಲು ಹೊರಟಿದ್ದೀರಾ ಎಂದು ಕಟುಕಿದರು. ರಾಜ್ಯದ ಸಚಿವ ಸಂಪುಟದ ಸಭೆಯಲ್ಲಿ ಈಗೀನ ಮುಖ್ಯಮಂತ್ರಿಗಳು ಬಿಡದಿಯ ಟೌನ್‌ಶಿಪ್ ಯೋಜನೆಗೆ ತಾಂತ್ರಿಕ ವರದಿ ಕೇಳುತ್ತಿದ್ದಾರೋ ಇಲ್ಲಾ ಅಲ್ಲಿಯ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಿ ಎಂದು ಸಮಿತಿ ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಮೂರು ತಿಂಗಳಿನಲ್ಲಿ ಯಾವತ್ತಾದರೂ ಒಂದು ದಿನ ಈ ಮುಖ್ಯಮಂತ್ರಿ ರೈತರ ಬಗ್ಗೆ ಚರ್ಚೆ ಮಾಡಿದ್ದು ಕೇಳಿದ್ದೀರಾ, ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದಾರಾ. ಅವರ ಜ್ಞಾನ ಇರೋದು ಫಲವತ್ತಾದ, ಬೆಲೆ ಬಾಳುವ ಭೂಮಿಗಳಲ್ಲಿ ಯಾವ ರೀತಿ ವ್ಯವಹಾರ ಮುಂದುವರೆಸಿಕೊಳ್ಳಬೇಕು ಎಂಬುದೇ ಅವರಲ್ಲಿ ಪ್ರಾಮುಖ್ಯತೆ ಪಡೆದಿರುವ ಅಂಶಗಳು, ಆದ್ದರಿಂದ ಬೆಂಗಳೂರು ಸುತ್ತಮುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಲೂಕಿನ ಮಾವಿನಕೆರೆಯಲ್ಲಿರುವ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಶನಿವಾರ ಪ್ರಯುಕ್ತ ಪೂಜಾ ಕೈಂಕರ್ಯ ನೆರವೇರಿಸಿ ಬಳಿಕ ಹರದನಹಳ್ಳಿಯಲ್ಲಿ ಮಾತನಾಡಿದರು. ರೈತರು ೫೩೦ ದಿನಗಳಿಂದ ಪ್ರತಿಭಟನೆ ಮಾಡ್ತಿದ್ದಾರೆ. ಈ ಹಿಂದೆ ಇಂದಿನ ಮುಖ್ಯಮಂತ್ರಿಗಳು ಸತ್ಯ ಶೋಧನಾ ಸಮತಿ ಸದಸ್ಯರಿದ್ದರು. ಈ ಯೋಜನೆ ಬೇಕು ಅಂಥ ಏಕೆ ಜ್ಞಾನೋದಯ ಆಯ್ತು ಎಂದು ಪ್ರಶ್ನಿಸಿ, ಬಿಡದಿ ಟೌನ್‌ಶಿಪ್ ಮಾಡೇ ಮಾಡ್ತಿನಿ ಅಂತಿರಲ್ಲಾ ಭೂಮಿಗೆ ಪರಿಹಾರ ಕೊಡಲು ಎಷ್ಟು ಕೋಟಿ ಆಗುತ್ತೆ. ಇವರಿಗೆ ಲ್ಯಾಂಡ್ ವ್ಯಾಲ್ಯೂ ಗೊತ್ತಿಲ್ಲ. ನೀವೇ ದುಡ್ಡು ಮಾಡಲು ಹೊರಟಿದ್ದಿರೋ ಅಥವಾ ದುಡ್ಡು ಮಾಡುವವರಿಗೆ ಬೆಂಬಲ ಕೊಡಲು ಹೊರಟಿದ್ದೀರಾ ಎಂದು ಕಟುಕಿದರು. ರಾಜ್ಯದ ಸಚಿವ ಸಂಪುಟದ ಸಭೆಯಲ್ಲಿ ಈಗೀನ ಮುಖ್ಯಮಂತ್ರಿಗಳು ಬಿಡದಿಯ ಟೌನ್‌ಶಿಪ್ ಯೋಜನೆಗೆ ತಾಂತ್ರಿಕ ವರದಿ ಕೇಳುತ್ತಿದ್ದಾರೋ ಇಲ್ಲಾ ಅಲ್ಲಿಯ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಿ ಎಂದು ಸಮಿತಿ ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ ಎಂದರು. ಮುಖ್ಯಮಂತ್ರಿಗಳು ಜನರ ದಾರಿ ತಪ್ಪಿಸುತ್ತಿದ್ದಾರೆ:

ಆಗ ಬಿಡದಿ ಆಸುಪಾಸಿನ ಸಮೀಪದಲ್ಲೇ ಹೊಸೂರು ಗ್ರಾಮಕ್ಕೆ ಹೊಂದಿಕೊಂಡಿರುವ ಈಗಲ್ ಟನ್ ಗಾಲ್ಫ್ ಕ್ಲಬ್ ಇದೆ. ಆಗಿನ ಸಚಿವ ಸಂಪುಟದಲ್ಲಿ ೭೦ ಎಕರೆ ಸರ್ಕಾರಿ ಕರಾಬ್ ಭೂಮಿಯನ್ನು ವಶಪಡಿಸಿಕೊಳ್ಳಬೇಕೆಂದು ರಾಜಕಾರಣ ನಡೆಯಿತು. ಅಲ್ಲಿ ನಡೆದಂತಹ ಘಟನೆಗಳಿಂದ ಜಿಲ್ಲಾದಿಕಾರಿ ಕರೆಸಿ ಎಕರೆಗೆ ೧೨ ಕೋಟಿ ರು. ಫಿಕ್ಸ್ ಮಾಡಿದ್ರು. ಒಟ್ಟು ೯೩೮ ಕೋಟಿ ಹಣ ಕಟ್ಟಬೇಕು ಎಂದು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದ್ರು. ಹೈಕೋರ್ಟ್ ಮುಂದೆ ಹೋದಾಗ ಈಗೀನ ನ್ಯಾಯಾಧೀಶರೇ ಸಚಿವ ಸಂಪುಟ ತೆಗೆದುಕೊಂಡ ತೀರ್ಪು ಸರಿ ಇದೆ ಎಂದು ಆದೇಶ ನೀಡಿದ್ದಾರೆ. ಅದೇ ನ್ಯಾಯಾಧೀಶರು ನಿವೃತ್ತರಾಗಿದ್ದಾರೆ, ಅವರನ್ನೇ ನೇಮಕ ಮಾಡಿಕೊಂಡಿದ್ದಾರೆ. ಆ ನ್ಯಾಯಾಧೀಶರನ್ನೇ ವರದಿ ಕೊಡಿ ಎಂದು ಕಮಿಟಿ ಮಾಡಿದ್ದಾರೆ. ಕ್ರೀಡಾಂಗಣ, ಆಸ್ಪತ್ರೆ, ಪಾರ್ಕ್‌ಗಳು ಎಐ ಸೆಂಟರ್, ದೊಡ್ಡ ರಸ್ತೆಗಳನ್ನು ಮಾಡುತ್ತೀನಿ ಎಂದು ಹೇಳುತ್ತಿದ್ದೀರಿ. ಭೂಮಿ ಬೇಕು ಎಂದು ಎಷ್ಟು ಜನ ಅರ್ಜಿ ಹಾಕಿದ್ದಾರೋ ಗೊತ್ತಿಲ್ಲ. ಭೂಮಿ ಕೊಡಿ ಎಂದು ಅರ್ಜಿ ಯಾರು ಹಾಕಿದ್ದಾರೆ ಎಂಬ ಮಾಹಿತಿ ಇಲ್ಲ. ಈಗ ರೈತರ ಒಂದು ಎಕರೆ ಭೂಮಿಗೆ ೨ ಕೋಟಿ ಅಂದರು, ಈಗ ೩ ಕೋಟಿ ಅನ್ನುತ್ತಿದ್ದಾರೆ. ಜನಕ್ಕೆ ಮುಖ್ಯಮಂತ್ರಿಗಳು ದಾರಿ ತಪ್ಪಿಸುತ್ತಿದ್ದಾರೆ. ಆ ಸಮಿತಿ ಮುಖ್ಯಸ್ಥರು ಅಲ್ಲಿ ಹೋಗಿ ಪರಿಶೀಲನೆ ಮಾಡಿ ಈಗ ರೈತರಿಗೆ ಎರಡು ಕೋಟಿ ಕೊಡುವುದು ಸೂಕ್ತನಾ ಎಂದು ಹೇಗೆ ಹೇಳ್ತಾರೆ. ಅವತ್ತು ಹನ್ನೆರಡು ಕೋಟಿ ಫಿಕ್ಸ್ ಮಾಡಿದವರು ಈಗ ಎರಡು ಕೋಟಿ ಕೊಡಿ ಎಂದು ಹೇಗೆ ನಿರ್ಧಾರ ಮಾಡ್ತಾರೆ. ಈಗ ಎಷ್ಟು ರೇಟ್ ಫಿಕ್ಸ್ ಮಾಡ್ತಿರಾ ಎಂದು ಆ ಸಮಿತಿ ಕೇಳಲು ಬಯಸುತ್ತೇನೆ. ರೈತರು ಹಣಕ್ಕಾಗಿ ಭೂಮಿ ಕೊಡಬೇಕು ಎನ್ನುವುದಿಲ್ಲ.ನೈಸ್ ರಸ್ತೆ ದೇವೇಗೌಡರ ಕೂಸು ದೇವೇಗೌಡರು ಇದ್ದ ಹದಿನೆಂಟು ತಿಂಗಳಿನಲ್ಲಿ ಎಂಒಯು ಸಹಿ ಹಾಕಿ ಹೋದ್ರು, ಆಮೇಲೆ ಬಂದ ಸರ್ಕಾರಗಳು, ಆ ಕಂಪನಿ ಮಾಲೀಕನಿಗೆ ರೆಡ್ ಕಾರ್ಪೆಟ್ ಹಾಕಿ, ಜೀ ಹುಸೂರ್ ಮಾಡ್ಕಂಡು, ಉತ್ತಮವಾದ ಯೋಜನೆಯನ್ನ ತರಬೇಕು ಅಂಥ ಇದ್ದಿದ್ದನ್ನಾ ಲೂಟಿ ಹೊಡೆಯುವ ಕೆಲಸಕ್ಕೆ ಪ್ರಮುಖವಾದ ಕಾರ್ಯಕರ್ತರು ನೀವೇ ಇದ್ದೀರಿ ಎಂದು ಟೀಕಿಸಿದರು. ಆ ಕಂಪನಿ ಕೆಲಸ ಮಾಡೋದು ಬಿಟ್ಟು ದಿನ ಕೋರ್ಟ್‌ನಲ್ಲಿ ಸರ್ಕಾರ ಎಳೆದು ಮುಖಭಂಗ ಮಾಡಲು ನೀವೆಲ್ಲಾ ಸೇರಿ ನಡೆಸಿದ್ದಾರೆ. ಸರ್ಕಾರ, ನಾಡಿನ ಜನತೆಗೆ ಗೌರವ ಉಳಿಸಲಿಲ್ಲ, ಅವರ ಜೊತೆ ಸೇರಿ ಏನೇನ್ ಮಾಡಿದ್ರಿ, ನೈಸ್ ಯೋಜನೆಯಲ್ಲಿ ಲೂಟಿ ಆಗಿದೆ, ಟೋಲ್‌ನ ನಿರ್ಮಾಣ ಮಾಡುವ ಹಾಗೇ ಇಲ್ಲ, ಫ್ರೇಮ್ ವರ್ಕ್ ಅಗ್ರಿಮೆಂಟ್ ಪ್ರಕಾರ, ಕಾನೂನುಬಾಹಿರವಾಗಿ ಟೋಲ್ ಕಲೆಕ್ಟ್ ಮಾಡಲು ಅವಕಾಶ ಕೊಟ್ಟಿದ್ದೀರಿ, ವ?ದಿಂದ ವರ್ಷಕ್ಕೆ ಇಷ್ಟ ಬಂದಂತೆ ಅವನು ರೇಟ್ ಹೆಚ್ಚಿಸಿದ್ದಾರೆ. ಸರ್ಕಾರದ ಅನುಮತಿ ತೆಗೆದುಕೊಳ್ಳಕಲಿಲ್ಲ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ವಾಹನ ಮಾಲೀಕರಿಂದ ಶುಲ್ಕ ವಸೂಲು ಮಾಡುತ್ತಿರುವುದು ತಪ್ಪುಸುಮಾರು ೨೦೦೦ ಕೋಟಿ ಕಲೆಕ್ಷನ್ ಮಾಡಿದ್ದಾರೆ. ೧೧೧ ಕಿಲೋಮೀಟರ್ ರಸ್ತೆಗೆ ಬರೀ ಐದು ಕಿಲೋಮೀಟರ್ ರಸ್ತೆ ಮಾಡಿದ್ದಾನೆ, ಅವನು ಟೋಲ್ ಕಲೆಕ್ಟ್ ಮಾಡುವ ಹಾಗೇ ಇಲ್ಲ, ಆದರೂ ಅನುಮತಿ ಕೊಟ್ಟಿದ್ದೀರಿ, ಕೋರ್ಟ್ ಹೆಸರಿನಲ್ಲಿ ಬಡ ಜನರ ಜೀವನ ಹಾಳು ಮಾಡಿದ್ದೀರಿ, ಕೋರ್ಟ್ ತೀರ್ಪಿನ ಆಧಾರದ ಮೇಲೆ ನಾನು ಆ ರಸ್ತೆಯಲ್ಲಿ ಓಡಾಡುವ ಜನರಿಗೆ ಟೋಲ್ ಕಟ್ಟಬೇಡಿ ಎಂದು ಹೇಳಿದ್ದೇನೆ. ಸರ್ಕಾರವೇ ನೈಸ್ ಮಾಲೀಕನ ಜೊತೆ ಶಾಮೀಲಾಗಿದ್ದಾರೆ, ಯಾರು ಅನ್ಯತಾ ಭಾವಿಸಬೇಕಿಲ್ಲ, ಅನ್ಯಾಯ ಆದಾಗ ಜನತೆ ಮುಂದೆ ತರಬೇಕಾದದ್ದು ನನ್ನ ಕರ್ತವ್ಯ. ಈ ವಿಷಯದಲ್ಲಿ ನಾನು ಹುಡುಗಾಟ ಮಾಡಿಲ್ಲ, ಸಾರ್ವಜನಿಕರಿಗೆ ತೊಂದರೆ ಕೊಡಲು ಹೇಳಿಲ್ಲ ಸಾರ್ವಜನಿಕರಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ ಅವರಿಗೆ ಬೆಂಬಲ ಕೊಡಬೇಡಿ ಎಂದು ಹೇಳಿದ್ದೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕು ಅಭಿವೃದ್ಧಿಗೆ ತಂದೆಯಕನಸು ಸಾಕಾರವೇ ನನ್ನ ಗುರಿ
ಇಂದು ಬಳಘಟ್ಟ ಗ್ರಾಮಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ: ಸಿ.ಎಸ್.ಪುಟ್ಟರಾಜು