ಕನ್ನಡಪ್ರಭ ವಾರ್ತೆ ನವಲಗುಂದ
ಪಟ್ಟಣದ ವಿನಾಯಕಪೇಟ್, ಗಾಂಧಿ ಮಾರುಕಟ್ಟೆ, ತಿಪ್ಪಯ್ಯನ ಕೂಟ್, ಹುಗ್ಗಿ ಓಣಿ, ರಾಮಲಿಂಗ ಓಣಿ, ಗ್ರಾಮದೇವಿ ಕೂಟ್, ಚಾವಡಿ, ಕಳ್ಳಿಮಠ ಓಣಿ, ತೆಗ್ಗಿನಕೇರಿ ಓಣಿ, ಲಿಂಗರಾಜ ಸರ್ಕಲ್ ನಂತರ ಗಾಂಧಿ ಮಾರುಕಟ್ಟೆಗೆ ಬಂದು ರೋಡ್ ಶೋ ಮುಕ್ತಾಯಗೊಂಡಿತು.
ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಗ್ಗಲಿಗೆ, ಡೊಳ್ಳು ಪದಗಳ ಮೂಲಕ ಮೆರವಣಿಗೆಗೆ ಮೆರಗು ತಂದರು. ದಾರಿಯುದ್ದಕ್ಕೂ ಕಾಂಗ್ರೆಸ್ ಪರ ಘೋಷಣೆಗಳು ಕೇಳಿಬಂದವು.ರೋಡ್ ಶೋದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ವರ್ಧಮಾನಗೌಡ ಹಿರೇಗೌಡರ, ಮಂಜು ಮಾಯಣ್ಣವರ, ಮಾಂತೇಶ ಭೋವಿ, ಮಂಜು ಜಾಧವ, ಜೀವನ ಪವಾರ, ಸುರೇಶ ಮೇಟಿ, ಪಕ್ರಾಶ ಶಿಗ್ಲಿ, ವಿಜಯಪ್ಪಗೌಡ ಪಾಟೀಲ, ಡಿ.ಕೆ. ಹಳ್ಳದ, ಈರಣ್ಣ ಶಿಡಗಂಟಿ, ಹುಸೇನಬಿ ಧಾರವಾಡ, ಅನ್ನಪೂರ್ಣಾ ಸುಣಗಾರ, ಏಕನಾಥ ಜಾಧವ, ಲೋಕಾಪೂರಿ, ಹನಮಂತಪ್ಪ ಕುಕನೂರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಧಾರವಾಡಎಲ್ಲ ಸಮುದಾಯದವರನ್ನು ಸಮನಾಗಿ ತೆಗೆದುಕೊಂಡು ಹೋಗೋ ಪಕ್ಷ ಅಂದ್ರೆ ಕಾಂಗ್ರೆಸ್. ಚುನಾವಣೆಯಲ್ಲಿ ಒಂದೇ ಸಮುದಾಯದ ಮತಗಳು ಬಂದರೆ ಗೆಲ್ಲುತ್ತೇವೆ ಎನ್ನಲಾಗದು. ಗೆಲ್ಲುವ ಅಭ್ಯರ್ಥಿಗೆ ಎಲ್ಲ ಸಮುದಾಯದ ಮತಗಳು ಬರಬೇಕು. ನಾನಂತೂ ಎಲ್ಲ ಸಮುದಾಯಗಳ ಮನ ಗೆಲ್ಲುವಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.