ಬಳ್ಳಾರಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆಗಾರ ರೈತರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರು ರೈತರ ಸಂಕಷ್ಟಗಳನ್ನು ಆಲಿಸಿದರು.
ಕಾಲುವೆಗೆ ನೀರು ಹರಿಸಲು ಕಾರಣರಾದ ಸಚಿವರಿಗೆ ರೈತರು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಗೌಡ, ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ನೀರಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದರು. ಈ ಬಗ್ಗೆ ಸಚಿವರಲ್ಲಿ ಮನವಿ ಮಾಡಿದಾಗ ಬೆಳಗಾವಿಗೆ ಬರಲು ಹೇಳಿ, ಜಲಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ನೀರು ಬಿಡಿಸುವ ಮೂಲಕ ಅನುಕೂಲ ಮಾಡಿದ್ದಾರೆ ಎಂದರು.
ಪಕ್ಷದ ಮುಖಂಡರಾದ ಗೋವರ್ಧನರೆಡ್ಡಿ, ಇಬ್ರಾಹಿಂಪುರ ನಾಗರಾಜ್, ಮುಂಡ್ಲೂರು ಶ್ರೀಧರ್, ರಾಮ್ ಪ್ರಸಾದ್, ಮುಂಡ್ರಗಿ ನಾಗರಾಜ್, ಅಣ್ಣಾ ನಾಗರಾಜ್, ಯರಗುಡಿ ಮಲ್ಲಯ್ಯ, ಗೋನಾಳ್ ನಾಗಭೂಷಣಗೌಡ ಮತ್ತಿತರರಿದ್ದರು.