ಕನ್ನಡಪ್ರಭ ವಾರ್ತೆ ಸರಗೂರುಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕ ಅನಿಲ್ ಚಿಕ್ಕಮಾದು ಅವರು ಜಿಲ್ಲಾಡಳಿತದೊಂದಿಗೆ ತಾಲೂಕಿನ ಕೂಡಗಿ ಗ್ರಾಮಕ್ಕೆ ಭೇಟಿ ನೀಡಿ, ಜಮೀನಿನಲ್ಲಿ ದನಕಾಯುವಾಗ ಹುಲಿದಾಳಿಗೆ ಬಲಿಯಾದ ದೊಡ್ಡನಿಂಗಯ್ಯ ಅವರ ಮೃತದೇಹದ ಅಂತಿಮ ದರ್ಶನ ಪಡೆದರು.ನಂತರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಬರುವ ಸೌಲಭ್ಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.ನಂತರ ಮಾತನಾಡಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕಾಡುಪ್ರಾಣಿಗಳು-ಮಾನವ ಸಂಘರ್ಷಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಮನುಷ್ಯನ ಜೀವ ಹೋದರೆ ಮತ್ತೆ ಬರಲಾಗದು. ಜೀವಕ್ಕೆ ಬೆಲೆಕಟ್ಟಲಾಗದು. ಸಂತಾನೋತ್ಪತ್ತಿಗಾಗಿ ಕಾಡಿನಿಂದ ಹೊರಬರುವ ಕಾಡುಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಹಂಚಿನ ಗ್ರಾಮಗಳಲ್ಲಿ ಗಸ್ತು ತಿರುಗಬೇಕು ಎಂದರು.ರೈಲ್ವೆ ಕಂಬಿ ಅಳವಡಿಸಲು ಕ್ರಮವಹಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಅವರು ತಾಕೀತು ಮಾಡಿದರು.ರೈತರು, ಪ್ರಾಣಿಗಳ ಹಾವಳಿ ತಡೆಗೆ ನಾಳೆ (ನ. 2 ರಂದು) ಬಂಡೀಪುರದಲ್ಲಿ ತುರ್ತುಸಭೆ ಕರೆಯಲಾಗಿದ್ದು, ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಇಲಾಖಾಧಿಕಾರಿ ಇodojg.ಸಭೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಸಮಸ್ಯೆಗಳೇನು. ಕಂದಾಯ, ಅರಣ್ಯ ಇಲಾಖೆ ನಡುವಿನ ವ್ಯತ್ಯಾಸವೇನು, ಅಕ್ರಮ ರೆಸಾರ್ಟ್ ಗಳಿಂದಾಗುವ ಅನಾನುಕೂಲಗಳೇನು, ಸಫಾರಿಗೆ ಕಡಿವಾಣ ಹಾಕಬೇಕೆ? ರೈತರು, ಅರಣ್ಯದ ಸಮಸ್ಯೆಗಳು ಸೇರಿದಂತೆ ಇನ್ನಿತರ ವಿಷಯ ಕುರಿತು ಚರ್ಚಿಸಿ, ಸಾಧಕ, ಬಾಧಕಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.ಸಂಸದ ಸುನೀಲ್ ಬೋಸ್ ಮಾತನಾಡಿ, ಕುಟುಂಬಕ್ಕೆ ಆಧಾರವಾಗಿದ್ದ ದೊಡ್ಡ ನಿಂಗಯ್ಯ ಅವರ ಮೇಲೆ ಹುಲಿ ದಾಳಿ ನಡೆಸಿ, ಬಲಿಯಾಗಿರುವುದು ತುಂಬಾ ನೋವಾಗಿದೆ. ಇಂಥ ಘಟನೆ ಮರುಕಳಿಸದಂತೆ ಇಲಾಖೆ ಕ್ರಮವಹಿಸಬೇಕು. ಕುಟುಂಬದ ಸದಸ್ಯರಲ್ಲಿ ಇಬ್ಬರಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಬೇಕು. ಈ ಸಂಬಂO ಅರಣ್ಯ ಇಲಾಖಾಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಎಚ್ಚರಿಸಿದರು.ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಕಾಡಂಚಿನ ಗ್ರಾಮಗಳ ರೈತರು ಘಟನಾ ಸ್ಥಳದ ಸಮೀಪಕ್ಕೆ ಯಾರೂ ಹೋಗಬಾರದು. ತಾಲೂಕಿನಲ್ಲಿ ಮೂರು ಘಟನೆ ನಡೆದಿದೆ. ಇದಕ್ಕೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಯಾಗಬೇಕು. ಅರಣ್ಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮುಖ್ಯ. ಹಿರಿಯ ಅಧಿಕಾರಿಗಳು ಆದೇಶ ನೀಡಿದರೆ ಕಿರಿಯ ಅಧಿಕಾರಿಗಳು ಚಾಚು ತಪ್ಪದೇ ಮಾಡಬೇಕು. ಅರಣ್ಯ ಗಸ್ತು ಮಾಡಬೇಕು. ಇಂಥ ಘಟನೆಗೆ ಅಧಿಕಾರಿಗಳೇ ನೇರ ಹೊಣೆಯಾಗಬೇಕು. ಇಂಥ ಅಧಿಕಾರಿಗಳ ವಿರುದ್ಧ ಸಚಿವರು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಬಲಿ ಪಡೆದ ಹುಲಿ ಸೆರೆಗೆ ಕ್ರಮವಹಿಸಬೇಕು. ಅರಣ್ಯಾಧಿಕಾರಿಗಳು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ರೈತ ಸಂಪರ್ಕ ಸಭೆ ಮಾಡಿಲ್ಲ ಎಂದು ಹೇಳಿದರು.ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ರಾಕೇಶ್‌ಕುಮಾರ್, ಎಸ್ಪಿ ವಿಷ್ಣುವರ್ಧನ್, ಸಿಎಫ್ ರಮೇಶ್ ಕುಮಾರ್, ಎಸಿಎಫ್ ಕೆ. ಪರಮೇಶ್, ತಹಸೀಲ್ದಾರ್ ಮೋಹನಕುಮಾರಿ, ಇಒ ಪ್ರೇಮ್ ಕುಮಾರ್, ಸಿಪಿಐ ಪ್ರಸನ್ನಕುಮಾರ್, ಎಸ್‌ಐ ಕಿರಣ್, ಆರ್‌ಎಫ್‌ಒ ಅಮೃತಾ, ದಸಂಸ ಮುಖಂಡ ಬೆಟ್ಟಯ್ಯಕೋಟೆ, ಕೋಟೆ ಪುರಸಭೆ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ರೈತ ಸಂಘದ ಹೊಸಕೋಟೆ ಬಸವರಾಜು, ವಕೀಲ ಜವರಯ್ಯ, ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ, ಮಾಜಿ ಅಧ್ಯಕ್ಷ ಶಿವಣ್ಣ, ಗ್ಯಾರಂಟಿ ಯೋಜನೆ ಅಧ್ಯಕ್ಷ ಚೆನ್ನಿಪುರ ಚಲುವರಾಜು, ಹಾದನೂರು ಪ್ರಕಾಶ್, ಗ್ರಾಪಂ ಅಧ್ಯಕ್ಷ ದೇವದಾಸ್, ಜಿಪಂ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ನಿಂಗರಾಜು, ತಾಲೂಕಿನ ಕಾಂಗ್ರೆಸ್ ಮಹಿಳಾಧ್ಯಕ್ಷೆ ಸೌಮ್ಯಾ, ರೈತ ಸಂಘದ ಮುಖಂಡರು, ಎಸ್ಟಿ ಮೋರ್ಚಾ ಅಧ್ಯಕ್ಷ ಕುಂದೂರು ಮೂರ್ತಿ, ಶಿವಶಂಕರ್ ಸರಗೂರು, ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ, ಕೊಡಗಿ ಸ್ವಾಮಿ, ಚೆನ್ನಿಪುರ ಎಲ್ಐಸಿ ಮಲ್ಲೇಶ್, ತುಂಬಸೋಗೆ ನಾಗಣ್ಣ, ಚಿನ್ನಯ್ಯ, ಚೆನ್ನಿಪುರ ನಾಗರಾಜು, ಜೈ ಶಂಕರ, ಕೊಡಗಿ ಪ್ರಕಾಶ ಕಂದೇಗಾಲ ವಕೀಲ ಶಿವರಾಜು, ವನಸಿರಿ ಶಂಕರ್, ಸರಗೂರು ಸಣ್ಣಸ್ವಾಮಿ ಕಾಂಗ್ರೆಸ್ ಮುಖಂಡರು ಇದ್ದರು.