ಸೋಲಾರ್ ಮೂಲಕ ನೀರಿನ ಟ್ಯಾಂಕ್ ಭರ್ತಿ ಯೋಜನೆ ಸಚಿವರ ಮೆಚ್ಚುಗೆ

KannadaprabhaNewsNetwork |  
Published : May 02, 2026, 02:00 AM IST
ಜೆಜೆಎಂ ಯೋಜನೆಯಡಿ ರೂಪಿಸಿರುವ ಸೋಲಾರ್ ಮೂಲಕ ಕುಡಿಯುವ ನೀರಿನ ಟ್ಯಾಂಕ್ ಭರ್ತಿ ಮಾಡುವ ಮೊಟ್ಟಮೊದಲ ಯೋಜನೆಯನ್ನು ಸಚಿವ ಕೃಷ್ಣಭೈರೇಗೌಡ ಮೆಚ್ಚುಗೆ | Kannada Prabha

ಸಾರಾಂಶ

೫೫೦ ವ್ಯಾಟ್ ವಿದ್ಯುತ್ ಇದ್ದರೂ ಮೋಟಾರು ಚಾಲನೆಗೊಳ್ಳಲಿದ್ದು ೭.೨ ಲಕ್ಷ ರೂ. ವೆಚ್ಚದಲ್ಲಿ ಈ ಘಟಕವನ್ನು ತಯಾರಿಸಲಾಗಿದೆ. ಇಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನೆಲ್ಗಳಿಂದ ನಿತ್ಯ ೭.೫ ಕಿ.ವ್ಯಾ. ವಿದ್ಯುತ್ ಉತ್ಪಾದನೆ ಯಾಗುತ್ತಿದ್ದು ಇದಕ್ಕೆ ೫.೬ ಕಿ.ವ್ಯಾ. ಮಾತ್ರ ಸಾಕಾಗುತ್ತದೆ. ಮುಂಬರುವ ದಿನಗಳಲ್ಲಿ ಹೆಚ್ಚುವರಿಯಾಗಿ ಉಳಿಯುವ ವಿದ್ಯುತ್ ಅನ್ನು ಗ್ರೀಡ್‌ಗೆ ನೀಡುವ ಬಗ್ಗೆಯೂ ಚಿಂತಿಸಲಾಗುವುದು. ಸಂಜೆವೇಳೆಗೆ ನೀರು ತುಂಬಿಸುವಂತಾಗುವುದನ್ನು ತಪ್ಪಿಸಿ ಬಿಸಿಲು ಇರುವಾಗಲೇ ಟ್ಯಾಂಕ್ ತುಂಬಿಸುವುದು ಸೂಕ್ತ ಎಂದು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಗೌಡಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ರೂಪಿಸಿರುವ ಸೋಲಾರ್ ಮೂಲಕ ಕುಡಿಯುವ ನೀರಿನ ಟ್ಯಾಂಕ್ ಭರ್ತಿ ಮಾಡುವ ಮೊಟ್ಟಮೊದಲ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಬೇಲೂರು ಮೂಲಕ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಗೌಡಗೆರೆ ಪಂಚಾಯಿತಿಯ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಅಧಿ ಕಾರಿಗಳಿಂದ ಮಾಹಿತಿ ಪಡೆದು ೨೫ ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮೂಲಕ ಗ್ರಾಮದ ೯೧ ಮನೆಗಳಿಗೆ ನೀರು ಸರಬರಾಜು ಮಾಡುತ್ತಿರುವ ಕುರಿತು ಮಾಹಿತಿ ಪಡೆದರು.ಸಚಿವರಿಗೆ ಯೋಜನೆ ಕುರಿತಂತೆ ಮಾಹಿತಿ ನೀಡಿದ ಜೆಇ ವೆಂಕಟೇಶ್, ಕಳೆದೊಂದು ವ?ದಿಂದಲೂ ಘಟಕ ಕಾರ್ ನಿರ್ವಹಿಸುತ್ತಿದ್ದು ಇದರಿಂದ ಪಂಚಾಯಿತಿಗೆ ವಿದ್ಯುತ್ ಶುಲ್ಕ ಸಂಪೂರ್ಣ ಉಳಿತಾಯ ವಾಗಿದೆ. ೩೪೦ ಅಡಿ ಆಳದಲ್ಲಿರುವ ಕೊಳವೆ ಬಾವಿಯಿಂದ ನೀರನ್ನು ಮೇಲಕ್ಕೆತ್ತಿ ಟ್ಯಾಂಕ್ ತುಂಬಿಸುವ ಕೆಲಸ ನಡೆಯುತ್ತಿದೆ. ಟ್ಯಾಂಕ್‌ನಲ್ಲಿ ಶೇ.೭೦ ನೀರು ಕಡಿಮೆಯಾದಾಗ ಮೋಟಾರು ಸ್ವಯಂಪ್ರೇರಿತವಾಗಿ ಚಾಲನೆಗೊಂಡು ನೀರು ತುಂಬಿಸಲಾಗುವುದು. ನೀರನ್ನು ಶುದ್ಧಮಾಡುವ ಘಟಕವನ್ನೂ ಜೋಡಿಸಲಾಗಿದೆ ಎಂದರು. "ಇದರೊಂದಿಗೆ ೫೫೦ ವ್ಯಾಟ್ ವಿದ್ಯುತ್ ಇದ್ದರೂ ಮೋಟಾರು ಚಾಲನೆಗೊಳ್ಳಲಿದ್ದು ೭.೨ ಲಕ್ಷ ರೂ. ವೆಚ್ಚದಲ್ಲಿ ಈ ಘಟಕವನ್ನು ತಯಾರಿಸಲಾಗಿದೆ. ಇಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನೆಲ್ಗಳಿಂದ ನಿತ್ಯ ೭.೫ ಕಿ.ವ್ಯಾ. ವಿದ್ಯುತ್ ಉತ್ಪಾದನೆ ಯಾಗುತ್ತಿದ್ದು ಇದಕ್ಕೆ ೫.೬ ಕಿ.ವ್ಯಾ. ಮಾತ್ರ ಸಾಕಾಗುತ್ತದೆ. ಮುಂಬರುವ ದಿನಗಳಲ್ಲಿ ಹೆಚ್ಚುವರಿಯಾಗಿ ಉಳಿಯುವ ವಿದ್ಯುತ್ ಅನ್ನು ಗ್ರೀಡ್‌ಗೆ ನೀಡುವ ಬಗ್ಗೆಯೂ ಚಿಂತಿಸಲಾಗುವುದು. ಸಂಜೆವೇಳೆಗೆ ನೀರು ತುಂಬಿಸುವಂತಾಗುವುದನ್ನು ತಪ್ಪಿಸಿ ಬಿಸಿಲು ಇರುವಾಗಲೇ ಟ್ಯಾಂಕ್ ತುಂಬಿಸುವುದು ಸೂಕ್ತ ಎಂದು ಸೂಚನೆ ನೀಡಿದರು.ಶಾಸಕ ಸಿ.ಎನ್.ಬಾಲಕೃಷ್ಣ , ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ತಹಸೀಲ್ದಾರ್‌ ಜಿ.ಎಸ್.ಶಂಕರಪ್ಪ, ತಾಲೂಕು ಪಂಚಾಯಿತಿ ಕಾಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಜೆಜೆಎಂ ಯೋಜನೆಯ ಇಇ ನವ್ಯಶ್ರೀ, ಎಇಇ ನಳಿನ, ವೃತ್ರನಿರೀಕ್ಷಕ ರಘುಪತಿ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಮರುಪಾವತಿ
ಕಾರ್ಮಿಕರ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವೆ ಶೋಭಾ ಕರಂದ್ಲಾಜೆ