ಅಭಿವೃದ್ಧಿಯ ಹರಿಕಾರ ಸಚಿವ ಪ್ರಿಯಾಂಕ್‌ ಖರ್ಗೆ: ಮಲ್ಲಪ್ಪ ಹೊಸ್ಮನಿ

KannadaprabhaNewsNetwork |  
Published : Nov 23, 2026, 01:15 AM IST
ಪೋಟೋ: ೨೨-೧೧ ಸಿಟಿಪಿಅರ್ ೧ಚಿತ್ತಾಪುರ ತಾಲೂಕಿನ ಇಂಗನಕಲ್ಲ್ ಗ್ರಾಮದಲ್ಲಿ ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ೪೮ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ನೊಟ್‌ಬುಕ್, ಪೆನ್ನು, ಕಂಪಾಸ್ ಪುಸ್ತಕ ವಿತರಿಸಿದರು. | Kannada Prabha

ಸಾರಾಂಶ

ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ನಾಯಕರಾಗಿರುವುದರ ಜತೆಗೆ ಅಭಿವೃದ್ದಿ ಹರಿಹಾರ, ಶಿಕ್ಷಣ ಪ್ರೇಮಿಗಳಾಗಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದರು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ನಾಯಕರಾಗಿರುವುದರ ಜತೆಗೆ ಅಭಿವೃದ್ದಿ ಹರಿಹಾರ, ಶಿಕ್ಷಣ ಪ್ರೇಮಿಗಳಾಗಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದರು.

ತಾಲೂಕಿನ ಇಂಗನಜಲ್ ಗ್ರಾಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪೆನ್ನು, ನೊಟ್‌ಬುಕ್, ಕಂಪಾಸ್ ಮತ್ತು ಪುಸ್ತಕ ವಿತರಿಸಿ ಮಾತನಾಡಿದ ಅವರು ಸಚಿವ ಪ್ರಿಯಾಂಕ್ ಖರ್ಗೆರವರು ಶೈಕ್ಷಣಿಕ ಹಾಗೂ ಆರೊಗ್ಯ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ ಎಂದರು.

ಚಿತ್ತಾಪುರ ಹಾಗೂ ವಾಡಿ ಪಟ್ಟಣದಲ್ಲಿ ಬೃಹತ್ ಶಿಕ್ಷಣ ಹಬ್ ನಿರ್ಮಿಸಿದ್ದಾರೆ ಬಡವರ ಪರ ಹಾಗೂ ಅಭಿವೃದ್ದಿ ಪರವಾಗಿದ್ದಾರೆ. ಇಂತಹ ಸಚಿವರನ್ನು ಈ ಕ್ಷೇತ್ರದ ಮತದಾರರು ಹ್ಯಾಟ್ರಿಕ್ ಗೆಲುವು ಸಾಧಿಸಲು ಅನುಕೂಲ ಮಾಡಿಕೊಟ್ಟಿದ್ದರಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಕೈಹಿಡಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಖರ್ಗೆರವರು ಸಿಂಹಸ್ವಪ್ನವಾಗಿದ್ದಾರೆ. ಹುಟ್ಟುಹಬ್ಬ ಆಡಂಬರ ಬೇಡ ಬಡವರಿಗೆ ಇತರರಿಗೆ ಪ್ರೇರಣೆಯಾಗಲಿ ಎಂಬ ದೃಷ್ಟಿಯಿಂದ ಬಡವರ ಬದುಕಿಗೆ ಅನುಕೂಲವಾಗಲಿ ಎಂಬ ಬಯಕೆಯಾಗಿದೆ. ಕೆಲವರು ರಾಜಕಾರಣದಲ್ಲಿ ಬಂದು ಗೆಲುವು ಸಾಧಿಸಿದ ಕೂಡಲೇ ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಕೆನ್ನುವ ಸ್ವಾರ್ಥ ರಾಜಕಾರಣ ಮಾಡುತ್ತಾರೆ. ಆದರೆ ಪ್ರಿಯಾಂಕ್ ಅವರು ಯಾವುದೇ ಸ್ವಾರ್ಥ ರಾಜಕಾರಣ ಮಾಡದೇ ಎಲ್ಲಾ ಜನಾಂಗದವರು ನಮ್ಮವರು, ಅವರ ಏಳಿಗೆಯೇ ನನ್ನ ಏಳಿಗೆ ಎಂದು ತಿಳಿದು ಹಿಂದುಳಿದ ಕ್ಷೇತ್ರ ಎನಿಸಿಕೊಂಡಿರುವ ಚಿತ್ತಾಪುರವನ್ನು ಅಭಿವೃದ್ದಿ ಪಥದತ್ತ ನಡೆಸಿದ್ದಾರೆ ಎಂದರು.

ಮುಖಂಡರಾದ ಅನಿಲಕುಮಾರ ಹುಣಚಿಕರ್, ನಾಗರಾಜ ಗಾಯಕವಾಡ, ಪ್ರಭುಲಿಂಗ ಮಂಗಲಗಿ ಮಾತನಾಡಿದರು. ಭೀಮಾಶಂಕರ ದಂಡೆ, ಸಿದ್ದಣ್ಣ ಮಗಿ, ನಾಗರಾಜ ಬಂಡಿವಡ್ಡರ್, ದೇವಾನಂದ ಮಂಗಲಗಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ಬೋರ್‌ವೆಲ್‌ ನೀರು ಬಿಕರಿ: ಚಿಕ್ಕಣ್ಣ
ಹೆಚ್ಚುವರಿ ಹಣ ಪಾವತಿಗೆ ಸೆಸ್ಕಾಂ ನೋಟಿಸ್‌