ಆರತಿ ಉಕ್ಕಡ ಅಹಲ್ಯಾದೇವಿ ದರ್ಶನ ಪಡೆದ ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Sep 03, 2024, 01:35 AM IST
2ಕೆಎಂಎನ್ ಡಿ29  | Kannada Prabha

ಸಾರಾಂಶ

ದೇಗುಲಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗುವುದು. ದೇವಾಲಯಕ್ಕೆ ಸಹಸ್ರಾರು ಭಕ್ತರು ಆಗಮಿಸುವುದಿರಂದ ವಾಹನಗಳ ದಟ್ಟಣೆ ಹಾಗೂ ರಸ್ತೆಗಳು ಕಿರಿದಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಮೊದಲು ಇಲ್ಲಿನ ರಸ್ತೆ ಅಭಿವೃದ್ಧಿ ಕುರಿತಾಗಿ ನಕ್ಷೆ ತಯಾರಿಸಿ ಸಾಕಷ್ಟು ಅನುದಾನಗಳ ಬಿಡುಗಡೆಗೆ ಒತ್ತು ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಆದಿದೇವತೆ ಶ್ರೀಕ್ಷೇತ್ರ ಆರತಿ ಉಕ್ಕಡ ಅಹಲ್ಯಾ ದೇವಿ ದೇವಸ್ಥಾನಕ್ಕೆ ರಾಜ್ಯಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿ ದೇವಿ ದರ್ಶನ ಪಡೆದರು.

ಅಮಾವಾಸ್ಯೆ ಅಂಗವಾಗಿ ದೇವಿ ದರ್ಶನ ಪಡೆಯಲು ಖಾಸಗಿಯಾಗಿ ಆಗಮಿಸಿದ ಸಚಿವರು ದೇವಿ ದರ್ಶನ ಪಡೆದು ನಂತರ ಮಾತನಾಡಿ, ಆರತಿ ಉಕ್ಕುಡ ಮಾರಮ್ಮದೇವಿ ದೇಶಾದ್ಯಂತ ಪ್ರಸಿದ್ಧಿ ಹೊಂದಿದೆ. ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತರು ಬರುವುದರಿಂದ ದೇವಾಲಯದ ಅಭಿವೃದ್ಧಿಯಾಗಬೇಕಿದೆ ಎಂದರು.

ದೇಗುಲಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗುವುದು. ದೇವಾಲಯಕ್ಕೆ ಸಹಸ್ರಾರು ಭಕ್ತರು ಆಗಮಿಸುವುದಿರಂದ ವಾಹನಗಳ ದಟ್ಟಣೆ ಹಾಗೂ ರಸ್ತೆಗಳು ಕಿರಿದಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಮೊದಲು ಇಲ್ಲಿನ ರಸ್ತೆ ಅಭಿವೃದ್ಧಿ ಕುರಿತಾಗಿ ನಕ್ಷೆ ತಯಾರಿಸಿ ಸಾಕಷ್ಟು ಅನುದಾನಗಳ ಬಿಡುಗಡೆಗೆ ಒತ್ತು ನೀಡಲಾಗುವುದು ಎಂದರು.

ಜೊತೆಗೆ ಈ ದೇವಾಲಯದ ಅರ್ಚಕರು ವೇತನ ನೀಡಲು ಚರ್ಚೆಯಾಗಿದೆ. ಇದರ ಆಯಾವ್ಯಯಗಳ ಕುರಿತಾಗಿ ಚಿಂತನೆ ನಡೆಸಿ ಅರ್ಚಕರಿಗೂ ವೇತನ ನೀಡಲಾಗುತ್ತದೆ ಎಂದರು.

ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಆಗಮಿಸುತ್ತಿದಂತೆ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಸಚಿವರನ್ನು ಸ್ವಾಗತಿಸಿ ಅಭಿನಂದಿಸಿದರು. ಆರತಿ ಉಕ್ಕುಡ ಮಾರಮ್ಮ ದೇವಿ ದರ್ಶನ ಪಡೆದ ನಂತರ ಶ್ರೀನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದ ಆವರಣವನ್ನು ಪ್ರದಕ್ಷಿಣೆ ಮಾಡಿ ವೀಕ್ಷಣೆ ಮಾಡಿದರು.

ಈ ಹಿಂದಿನ ಅಭಿವೃದ್ಧಿಗಳ ಕುರಿತು ಮಾಹಿತಿ ಪಡೆದುಕೊಂಡ ಸಚಿವರು, ಪ್ರಸ್ತುತ ಆಗಬೇಕಿರುವ ಕಾಮಗಾರಿಗಳ ವಿವರಗಳನ್ನು ದೇವಾಲಯದ ಇಒ ಕೃಷ್ಣ ಅವರಿಂದ ಪಡೆದುಕೊಂಡರು. ಶಾಸಕರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಆಗಬೇಕಿರುವ ದೇವಾಲಯದ ಕಾಮಗಾರಿಗಳಿಗೂ ಚಾಲನೆ ನೀಡುವುದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ
ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ