-ಮಹಾತ್ಮಗಾಂಧಿ ನಗರೋತ್ಥಾನ ಯೋಜನೆ 125 ಕೋಟಿ ಅನುದಾನ: ಸಚಿವ ಮಲ್ಲಿಕಾರ್ಜುನ್
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರು ನಗರವನ್ನು ಮೀರಿಸುವಂತಹ ಕಾಮಗಾರಿಗಳು ಜಿಲ್ಲೆಯಲ್ಲಾಗಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.ಪಾಲಿಕೆ ಆವರಣದಲ್ಲಿ ವಿವಿಧ ವಾರ್ಡ್ ಗಳಲ್ಲಿ ಕೈಗೊಳ್ಳಲಾದ ರು. 8.05 ಕೋಟಿ ಮೊತ್ತದ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ 500 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣೆ, ಘನತ್ಯಾಜ್ಯ ನಿರ್ವಹಣೆಗಾಗಿ 10 ಟ್ರ‍್ಯಾಕ್ಟರ್ ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಹೆಚ್ಚು ಅನುದಾನ ತರುವಂತಹ ಕಾರ್ಯಗಳನ್ನು ಪಾಲಿಕೆ ಸದಸ್ಯರು ಮಾಡಬೇಕು. ಬೆಂಗಳೂರ ನಗರದ ಮಾದರಿಯಲ್ಲಿ ದಾವಣಗೆರೆ ಪಾಲಿಕೆ ವ್ಯಾಪ್ತಿ ಕೆಲಸ ಕಾರ್ಯಗಳಾಗಬೇಕು. ನಮ್ಮ ಅಧಿಕಾರದಲ್ಲಿಯೇ ಪಾಲಿಕೆಯ ವ್ಯಾಪ್ತಿ ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದೇವೆ. ಅವುಗಳನ್ನು ನಿರ್ವಹಣೆ ಮಾಡಿಕೊಂಡು ಹೊದರೆ ರಸ್ತೆ ಸಮಸ್ಯೆಗಳು ತಪ್ಪುತ್ತವೆ. ಸಿಮೆಂಟ್ ರಸ್ತೆಗಳ ಪಕ್ಕದ ಸರ್ವಿಸ್, ಒಳ ರಸ್ತೆಗಳ ನಿರ್ಮಾಣ, ಯೂಜಿಡಿ ಲೈನ್ ಹಾಗೂ ಮೂಲ ಸೌಕರ್ಯವನ್ನು ಬಡ ಜನತೆಗೆ ನೀಡುವಲ್ಲಿ ಪಾಲಿಕೆ ಸದಸ್ಯರು ಮುಂದಾಗಬೇಕು ಎಂದರು.
...ಕೋಟ್....
-ಸಚಿವ ಎಸ್.ಎಸ್,ಮಲ್ಲಿಕಾರ್ಜುನ್
ಪಾಲಿಕೆಯ ಆಯುಕ್ತರಾದ ರೇಣುಕಾ, ಮೇಯರ್ ಕೆ.ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ಉಮೇಶ್, ಸವಿತಾ ಗಣೇಶ ಹುಲ್ಮನೆ, ಸುಧಾ ಇಟ್ಟಿಗುಡಿ ಮಂಜುನಾಥ್, ಪಾಲಿಕೆ ಸದಸ್ಯರಾದ ಗಡಿಗುಡಾಳು ಮಂಜುನಾಥ, ಎ.ನಾಗರಾಜ, ರಹೀಂ ಖಾನ್, ಉದಯ್ ಕುಮಾರ್, ಪಾಮೇನಹಳ್ಳಿ ನಾಗರಾಜ, ಎಲ್.ಡಿ ಗೋಣೆಪ್ಪ, ಕೆ.ಎನ್ ವೀರೇಶ್, ಜಾಕೀರ್ ಅಲಿ, ನಾಮನಿರ್ದೇಶನ ಸದಸ್ಯರಾದ ಎಲ್‌ಎಂಎಚ್ ಸಾಗರ್, ರುದ್ರೇಶ್ ಇತರರು ಉಪಸ್ಥಿತರಿದ್ದರು.
ಕ್ಯಾಪ್ಷನ7ಕೆಡಿವಿಜಿ46 ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ಯಾಪ್ಷನ7ಕೆಡಿವಿಜಿ47 ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಘನತ್ಯಾಜ್ಯ ನಿರ್ವಹಣೆಗಾಗಿ ಟ್ರ‍್ಯಾಕ್ಟರ್ ಗಳ ಲೋಕಾರ್ಪಣೆ ಮಾಡಿದರು.
........ಕ್ಯಾಪ್ಷನ7ಕೆಡಿವಿಜಿ48 ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿದರು.