ರಟ್ಟೀಹಳ್ಳಿ: ದೇಶಕ್ಕೆ ಲಿಖಿತ ಸಂವಿಧಾನ ನೀಡಿದ ಅತ್ಯುನ್ನತ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದು ಶಾಸಕ ಯು.ಬಿ ಬಣಕಾರ ಹೇಳಿದರು.
ಮಾಜಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿರುವುದು ಮೂರ್ಖ ತನದ ಪರಮಾವಧಿಯಾಗಿದೆ. ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾದ ಸಂದರ್ಭದಲ್ಲಿ ದೇಶಕ್ಕೆ ಭದ್ರ ಬುನಾದಿ ಹಾಕಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿ ತುಳಿತಕ್ಕೊಳಗಾದ, ಹಿಂದುಳಿದ ಜನಾಂಗಕ್ಕೆ ಹಾಗೂ ಸಂವಿಧಾನ ನೀಡಿದಂತ ಸವಲತ್ತು ಪಡೆದು ಚುನಾಯಿತ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮಿತ್ ಶಾ ಅವರ ಹೇಳಿಕೆ ಅತ್ಯಂತ ಖಂಡನೀಯ. ದೇಶದ ಆಶಾಕಿರಣವನ್ನೇ ಬದಲಾಯಿಸುವ ಮಾತನಾಡುವ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಹಿಳೆಯರ ಸ್ಥಾನಮಾನ ಮರೆತು ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅಸಾಂವಿಧಾನಿಕ ಪದ ಬಳಿಸಿರುವುದು ಅಕ್ಷ್ಯಮ್ಮ ಅಪರಾಧ. ಪದ ಬಳಕೆಗೂ ಸಲ್ಲದ ಪದವನ್ನು ಬಳಸಿ ಇಡೀ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ವಿಧಾನಪರಿಷತ್ ಸದಸ್ಯರಾಗಿ. 4 ಭಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ಸಿ.ಟಿ. ರವಿ ಅಸಾಂವಿಧಾನಿಕ ಹೇಳಿಕೆ ಯಾರೂ ಕ್ಷಮಿಸಲಾರದ್ದು. ಮುಂಬರುವ ದಿನಗಳಲ್ಲಿ ಅವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವರು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಟ್ಟೀಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಹಿರೇಕೆರೂರು ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಸುನಿತಾ ದ್ಯಾವಕ್ಕಳವರ, ವಿಜಯ ಅಂಗಡಿ, ಬೀರೇಶ ಕರಡೆಣ್ಣನವರ, ಕಪೀಲ್ ಪೂಜಾರ, ಮಂಜು ಅಸ್ವಾಲಿ, ನಿಂಗಪ್ಪ ಕಡೂರ, ಮಂಜು ಮಾಸೂರ, ಶಿವಾನಂದ ಪೂಜಾರ ಮುಂತಾದವರು ಇದ್ದರು.