ಕನ್ನಡಪ್ರಭ ವಾರ್ತೆ ಯಾದಗಿರಿ
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಕಲಬುರಗಿಯಿಂದ ನಿರ್ಗಮಿಸಿ ಮಧ್ಯಾಹ್ನ 10.30ಕ್ಕೆ ಆಗಮಿಸಿ ಶಹಾಪುರ ನಗರದ ಕನ್ನಡ ಸಾಹಿತ್ಯ ಪರಿಷತ್ತು ಆವರಣ, ದೇಶಮುಖ ಬಡಾವಣೆದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ಇವರು ಆಯೋಜಿಸಿರುವ ಅಭಿನಂದನಾ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 12ಕ್ಕೆ ಶಹಾಪುರ ನಗರದಲ್ಲಿ ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಆಲಿಸುವರು ತದನಂತರ ಸಂಜೆ 5.30ಕ್ಕೆ ಕಲಬುರಗಿ ಪ್ರಯಾಣ ಬೆಳೆಸುವರು.
ಅ.2ರಂದು ಬೆಳಿಗ್ಗೆ 8ಕ್ಕೆ ಕಲಬುರಗಿಯಿಂದ ನಿರ್ಗಮಿಸಿ ಬೆಳಿಗ್ಗೆ 9.30ಕ್ಕೆ ಆಗಮಿಸಿ ಯಾದಗಿರಿ ನಗರದಲ್ಲಿ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 12ಕ್ಕೆ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ತದನಂತರ ಸಂಜೆ 5.30 ಗಂಟೆಗೆ ಕಲಬುರಗಿ ಪ್ರಯಾಣ ಬೆಳೆಸುವರು.-----
30ವೈಡಿಆರ್8 : ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವರು, ಯಾದಗಿರಿ.