ಹಾವೇರಿ-ಹಾನಗಲ್ಲ ರಸ್ತೆ ತಗ್ಗುಗಳನ್ನು ಮುಚ್ಚಲು ಸಚಿವ ಶಿವಾನಂದ ಪಾಟೀಲ ಸೂಚನೆ

KannadaprabhaNewsNetwork |  
Published : Apr 12, 2026, 02:15 AM IST
ಸಚಿವ ಶಿವಾನಂದ ಪಾಟೀಲ | Kannada Prabha

ಸಾರಾಂಶ

ಹಾವೇರಿ-ಅಕ್ಕಿಆಲೂರವರೆಗೆ ರಸ್ತೆ ತಗ್ಗುಗಳನ್ನು ಮುಚ್ಚುವ ಕಾಮಗಾರಿಯನ್ನು ಈ ತಿಂಗಳ ಅಂತ್ಯದೊಳಗೆ ಹಾಗೂ ನಾಲ್ಕರ ಕ್ರಾಸ್‌ನಿಂದ ಶಿರಸಿ ರಸ್ತೆಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.

ಹಾವೇರಿ: ಹಾವೇರಿ-ಅಕ್ಕಿಆಲೂರವರೆಗೆ ರಸ್ತೆ ತಗ್ಗುಗಳನ್ನು ಮುಚ್ಚುವ ಕಾಮಗಾರಿಯನ್ನು ಈ ತಿಂಗಳ ಅಂತ್ಯದೊಳಗೆ ಹಾಗೂ ನಾಲ್ಕರ ಕ್ರಾಸ್‌ನಿಂದ ಶಿರಸಿ ರಸ್ತೆಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಮುಂದುವರೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿ ಬಹಳ ವಿಳಂಬವಾಗಿದ್ದು, ಯಾವುದೇ ಕಾರಣ ಹೇಳದೇ ಕೆಲಸ ಪೂರ್ಣಗೊಳಿಸಬೇಕು. ಹಾವೇರಿಯಿಂದ ಅಕ್ಕಿಆಲೂರುವರೆಗೆ 80 ಗುಂಡಿಗಳಿವೆ ಎಂದು ಹೇಳಿದ್ದೀರಿ. ಅವನ್ನು ತಕ್ಷಣ ಮುಚ್ಚುವ ಕೆಲಸವಾಗಬೇಕು ಎಂದು ಖಡಕ್ ಸೂಚನೆ ನೀಡಿದರು. ಬಿಸಿಯೂಟ ಸಿಬ್ಬಂದಿ ಎಪ್ರಾನ್‌ ಖರೀದಿಯಲ್ಲಿ ಅಕ್ರಮಸವಣೂರು ತಾಲೂಕಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ಬಿಸಿಯೂಟ ತಯಾರಿಕರಿಗೆ ಖರೀದಿಸಲಾದ ಎಪ್ರಾನ್ ಹಾಗೂ ಸೀರೆ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಪರಿಶೀಲಿಸುವಂತೆ ಸಚಿವರು ಸೂಚನೆ ನೀಡಿದರು.ಅಂಗನವಾಡಿ ಯೂನಿಯನ್ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರು ಮಾತನಾಡಿ,

89 ಶಾಲೆಗಳ ಬಿಸಿಯೂಟ ತಯಾರಕರಿಗೆ ಎಪ್ರಾನ್, ತಲೆ ಗವಸು ಹಾಗೂ ಸಾರಿ ಬಹಳ ಕಳಪೆ ಇದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬರಿಂದ 2500 ರು. ಪಡೆಯಲಾಗಿದೆ. ಆದರೆ, ಅಷ್ಟು ಗುಣಮಟ್ಟದ್ದಿಲ್ಲ. ಹಾಲಿನಪುಡಿ ಪ್ರಕರಣದಲ್ಲಿ ಹಾನಗಲ್ಲ ಸಿಡಿಪಿಒ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ, ಅವರನ್ನು ಅಮಾನತು ಮಾಡುವುದನ್ನು ಬಿಟ್ಟು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಮಾರ್ಗಸೂಚಿ ಅನುಸಾರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಹಾನಗಲ್ ತಾಲೂಕಿನಲ್ಲಿ ಅಂಗನವಾಡಿಗೆ ಹಾಲಿಪುಡಿ ಖರೀದಿಸಿದ ವ್ಯವಹಾರದ ಪ್ರಕರಣ ಕುರಿತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯದರ್ಶಿಗಳ ಹಂತದಲ್ಲಿ ಪ್ರಕರಣ ತನಿಖೆಯಲ್ಲಿದೆ. ಅವ್ಯವಹಾರ ಸಾಬೀತಾದರೆ ಶಿಕ್ಷೆ ಆಗಲಿದೆ. ಹಾನಗಲ್ ತಾಲೂಕು ಇನಾಂಹೊಂಗಲ ಗ್ರಾಮದಲ್ಲಿ ಶಿಥಾಲವಸ್ಥೆಯಲ್ಲಿದೆ ಎಂದು ಹೇಳಲಾಗಿದೆ, ಕೂಡಲೇ ಬೇರೆ ಕಟ್ಟಡ ಬಾಡಿಗೆ ಪಡೆದು ಅಂಗನವಾಡಿ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಮಾತನಾಡಿ, ಎಸ್ಪಿ ಯಶೋಧಾ ವಂಟಗೋಡಿ, ಜಿಪಂ ಉಪ ಕಾರ್ಯದರ್ಶಿ ಡಾ.ಪುನಿತ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಕರ ವಿರೋಧದ ನಡುವೆ ಒಂದಾದ ಅಂತರ್‌ ಧರ್ಮೀಯ ಪ್ರೇಮಿಗಳು
ಮಂತ್ರಾಲಯ ಮಠಕ್ಕೂ ಯಲಬುರ್ಗಾ ಶ್ರೀಮಠಕ್ಕೂ ಅನನ್ಯ ಸಂಬಂಧ