ಸಚಿವ ಶಿವರಾಜ ತಂಗಡಗಿ ಕ್ಷಮೆಗೆ ಆಗ್ರಹ

KannadaprabhaNewsNetwork |  
Published : Mar 30, 2024, 12:50 AM IST
ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟಣೆ.ಬಹಿರಂಗ ಕ್ಷಮಾಪಣೆಗೆ ಆಗ್ರಹ,  | Kannada Prabha

ಸಾರಾಂಶ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವ ಜನತೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ ತಂಗಡಗಿ ಅವರು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವ ಜನತೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ ತಂಗಡಗಿ ಅವರು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಸಚಿವ ಶಿವರಾಜ ತಂಗಡಗಿ ಅವರು ಪ್ರಧಾನಿ ಮೋದಿ ಹಾಗೂ ದೇಶದ ಯುವ ಸಮೂಹದ ವಿರುದ್ಧ ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆ ಹಾಗೂ ಅವರ ದುರ್ನಡತೆ ಖಂಡಿಸಿ ಬಿಜೆಪಿ ಯುವ ಮೋಚಾ ಜಿಲ್ಲಾ ಘಟಕದಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಇಡೀ ವಿಶ್ವವೇ ಗೌರವ ಕೊಡುತ್ತದೆ. ಆದರೆ, ಸಚಿವ ತಂಗಡಗಿ "ಮೋದಿ ಮೋದಿ ಎಂದು ಹೇಳುವುವರ ಕಪಾಳಕ್ಕೆ ಹೊಡೆಯಿರಿ " ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು. ದೇಶದ ಯುವ ಸಮೂಹ ಮೋದಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಕಪಾಳಮೋಕ್ಷ ಮಾಡುವ ಕಾಲ ಸನ್ನಿತವಾಗಿದೆ. ಮತದಾರರು ಈ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭುವನೇಶ್ವರ ಪೂಜಾರ ಮಾತನಾಡಿ, ಶಿವರಾಜ ತಂಗಡಗಿ ಹೇಳಿಕೆ ಖಂಡನೀಯ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ನೀವು ಬಾಗಲಕೋಟೆಗೆ ಬಂದಾಗ ನಿಮಗೆ ಕಪ್ಪು ಮಸಿ ಬಳೆಯುತ್ತೇವೆ. ಭಾರತ ಪರ ಇರುವುವರನ್ನು ಕಪಾಳೆಕ್ಕೆ ಹೊಡೆಯಿರಿ ಎಂದು ಹೇಳುವ ನಿಮಗೆ ತಾಕತ್ ಇದ್ದರೆ ಮೊನ್ನೆ ಪಾಕಿಸ್ತಾನ ಜಿಂದಾಬಾದ್‌ ಎಂದವರ ಕಪಾಳಕ್ಕೆ ಮೊದಲು ಹೊಡೆಯಿರಿ ಎಂದು ಸವಾಲು ಹಾಕಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಇಡೀ ದೇಶಕ್ಕೆ ಬೇಕಾಗಿದೆ. ಆದರೆ, ರಾಜ್ಯದಲ್ಲಿ ಕಾಂಗ್ರಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬರಿ ದೇಶದ್ರೋಹಿ ಹೇಳಿಕೆಗಳು ಹೆಚ್ಚುತ್ತಿವೆ. ಕಾಂಗ್ರೆಸ್‌ ಪಕ್ಷಕ್ಕೆ ಭಾರತದ ಮೇಲೆ ಪ್ರೇಮ, ದೇಶಭಕ್ತಿ ಇಲ್ಲವೆ ಎಂಬುದನ್ನು ಜನತೆಗೆ ತಿಳಿಸಿ. ಶಿವರಾಜ ತಂಗಡಗಿ ಅವರ ಉದ್ಧಟತನಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಟವಳಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ರೇಖಾ ಕಲಬುರಗಿ, ಶಶಿಕಲಾ ಮಜ್ಜಗಿ, ಶ್ರೀನಾಥ ಸಜ್ಜನ, ಅನಂತ ಕೊಟಗಿ, ಚಂದ್ರು ಸರೂರ, ಮಂಜುನಾಥ ಗೌಡರ, ಪಾಲಾಕ್ಷ್ಯ ಕಟ್ಟಿಮಠ, ಗಣೇಶ ಲಗಳಿ, ಬಸವರಾಜ ಅಂಬಿಗೇರ, ಮಂಜುನಾಥ ವಾಲ್ಮೀಕಿ, ರಾಜು ಕೋಟೆ, ಚಂದ್ರಶೇಖರ ಬುಡ್ಡರ, ಸುರೇಶ ಉಕ್ಕಲಿ, ಶಂಕರ ಗಲಗ, ಸುರೇಶ ಗಬ್ಬೂರ, ನಾಗರಾಜ ನಾರಾಯಣಕರ, ಶಿವಾನಂದ ರಾಥೋಡ, ಕೀರಣ ರಾಥೋಡ, ಸುರೇಶ ಲಮಾಣಿ, ಮಲ್ಲಿಕಾರ್ಜುನ ಗಬ್ಬೂರ, ಪ್ರದೀಪ ಗೌಡರ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು. --------

ಕೋಟ್..

ಲೋಕಸಭಾ ಚುನಾವಣೆ ಪ್ರಚಾರಕ್ಕೆ ನೀವು ಬಾಗಲಕೋಟೆಗೆ ಬಂದಾಗ ನಿಮಗೆ ಕಪ್ಪು ಮಸಿ ಬಳೆಯುತ್ತೇವೆ. ಭಾರತ ಪರ ಇರುವುವರನ್ನು ಕಪಾಳೆಕ್ಕೆ ಹೊಡೆಯಿರಿ ಎಂದು ಹೇಳುವ ನಿಮಗೆ ತಾಕತ್ ಇದ್ದರೆ ಮೊನ್ನೆ ಪಾಕಿಸ್ತಾನ ಜಿಂದಾಬಾದ್‌ ಎಂದವರ ಕಪಾಳಕ್ಕೆ ಮೊದಲು ಹೊಡೆಯಿರಿ.

ಭುವನೇಶ್ವರ ಪೂಜಾರ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ