ಕನಕಗಿರಿ:
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಅಲ್ಪಸಂಖ್ಯಾತ ಕಾಲನಿಗಳಲ್ಲಿನ ಸಿಸಿ ರಸ್ತೆ ನಿರ್ಮಾಣಕ್ಕೆ ₹ ೬೬ ಲಕ್ಷ, ಪಟ್ಟಣದ ೧೫ನೇ ವಾರ್ಡಿನಲ್ಲಿ ಭಗೀರಥ ಮಹರ್ಷಿ ಸಮುದಾಯ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ₹ ೩೦ ಲಕ್ಷ, ಮುಖ್ಯಮಂತ್ರಿ ವಿಶೇಷ ಅನುದಾನದಡಿ ಈಚನಾಳದಿಂದ ಬುನ್ನಟ್ಟಿ ವರೆಗಿನ ರಸ್ತೆ ಅಭಿವೃದ್ಧಿಗೆ ₹ ೨.೨೧ ಕೋಟಿ, ಕನಕಗಿರಿ-ಕೊಪ್ಪಳ ಮುಖ್ಯರಸ್ತೆಯಿಂದ ಹುಡೇಜಾಲಿ ವರೆಗೆ ರಸ್ತೆ ಅಭಿವೃದ್ಧಿಗೆ ₹ ೧.೧೯ ಕೋಟಿ ಬಿಡುಗೆಯಾಗಿದೆ. ಇನ್ನೂ ಕಲ್ಯಾಣ ಪಥ ಯೋಜನೆಯಡಿ ಚಿಕ್ಕಮಾದಿನಾಳ, ಹುಡೇಜಾಲಿಯಿಂದ ಮುಸಲಾಪುರ ವರೆಗಿನ ರಸ್ತೆ ಅಭಿವೃದ್ಧಿಗೆ ₹ ೫.೨೩ ಲಕ್ಷ, ಹುಲಿಹೈದರದಿಂದ ಗೌರಿಪುರ ವರೆಗೆ ₹ ೫.೬೪ ಕೋಟಿ ಹಾಗೂ ಕನಕಗಿರಿ-ತಾವರಗೇರಾ ಮುಖ್ಯರಸ್ತೆಯಿಂದ ಹನುಮನಾಳ ಗ್ರಾಮದ ವರೆಗಿನ ರಸ್ತೆ ಅಭಿವೃದ್ಧಿಗೆ ₹ ೧.೭೦ ಕೋಟಿ ಹಾಗೂ ಕನಕಗಿರಿ ಮುಖ್ಯರಸ್ತೆಯಿಂದ ಚಿರ್ಚನಗುಡ್ಡದ ವರೆಗಿನ ರಸ್ತೆ ಸುಧಾರಣೆಗೆ ₹ ೫.೧೭ ಕೋಟಿ ಮಂಜೂರಾಗಿದೆ, ಈ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಕ್ಷೇತ್ರದ ಇನ್ನಷ್ಟು ರಸ್ತೆ, ಕುಡಿಯುವ ನೀರು, ಶಾಲಾ-ಕಾಲೇಜು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುತ್ತಿದ್ದೇನೆ ಎಂದರು.
ಈ ವೇಳೆ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ರವಿ ಪಾಟೀಲ್, ಪರಸಪ್ಪ ಚೌಡ್ಕಿ, ನಾಗಲಿಂಗಪ್ಪ ಲಕ್ಕಂಪುರ, ನಾಗೇಶ ಉಪ್ಪಾರ, ಗಂಗಾಧರ ಚೌಡ್ಕಿ, ಟಿ.ಜೆ. ರಾಮಚಂದ್ರ, ಹೊನ್ನೂರುಸಾಬ್ ಉಪ್ಪು ಸೇರಿದಂತೆ ಇತರರಿದ್ದರು.