Minor girl becomes pregnant: POCSO case registered
ಚಿಕ್ಕಮಗಳೂರು: ಬಾಲ್ಯವಿವಾಹದ ಬಳಿಕ ಅಪ್ರಾಪ್ತೆ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧ ಬೀರೂರು ಠಾಣೆಯಲ್ಲಿ ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಬೆಟ್ಟದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನ.21ರಂದು ಗರ್ಭಿಣಿ ಬಾಲಕಿ ಸಚಿನ್ ಎಂಬಾತನೊಂದಿಗೆ ಬಂದಿದ್ದಳು. ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ರಕ್ತ ಪರೀಕ್ಷೆ ನಡೆಸಿ, ನ.23ರಂದು ಮತ್ತೆ ಬಂದು ಮೂತ್ರ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿದ್ದರು.
ನ.24ರಂದು ಬಾಲಕಿ ಹಾಗೂ ಸಚಿನ್ ಆರೋಗ್ಯ ಕೇಂದ್ರಕ್ಕೆ ಬಂದಾಗ ನಡೆಸಿದ ಮೂತ್ರ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿ ಯಾಗಿರುವುದು ದೃಢಪಟ್ಟಿದೆ. ಈ ವೇಳೆ ವಿಚಾರಿಸಿದಾಗ ಸಚಿನ್ನನ್ನು ಮದುವೆಯಾಗಿದ್ದು, ತನ್ನ ಗರ್ಭಧಾರಣೆಗೆ ಆತನೇ ಕಾರಣ ಎಂದು ಬಾಲಕಿ ತಿಳಿಸಿದ್ದಾಳೆ.ಬಾಲಕಿ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ಆಕೆ ಅಪ್ರಾಪ್ತ ವಯಸ್ಸಿನವಳೆಂದು ತಿಳಿದುಬಂದಿದೆ. ಸುಮಾರು ಆರರಿಂದ ಏಳು ತಿಂಗಳ ಗರ್ಭಿಣಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಆರೋಗ್ಯಾಧಿಕಾರಿ ನೀಡಿದ ದೂರಿನ ಮೇರೆಗೆ ಸಚಿನ್ ವಿರುದ್ಧ ಬೀರೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.