ಇಳಕಲ್ಲಿಗೆ ಬಂತು ಕನ್ನಡ ಬಂಡಾರದ ರಥ

KannadaprabhaNewsNetwork |  
Published : Nov 26, 2026, 03:00 AM IST
೨೪ ಇಳಕಲ್ಲ ೧ | Kannada Prabha

ಸಾರಾಂಶ

ಅನೇಕ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಅಕ್ಷರಗಳೇ ಮಾಯವಾಗುತ್ತಿರುವಾಗ ಹಿರೇಕೆರೂರ ಡಿಪೋದ ಬಸ್‌ ಚಾಲಕ ಮತ್ತು ನಿರ್ವಾಹಕ ತಾವು ನಿತ್ಯ ಓಡಿಸುವ ಹಿರೇಕೆರೂರ-ಗುಡ್ಡಾಪುರ ಬಸ್‌ನ್ನು ಸ್ವಂತ ಹಣ ಖರ್ಚು ಮಾಡಿ ಕನ್ನಡ ಸಾಹಿತ್ಯ ಬಂಡಾರ ಅಲಂಕಾರ ಹೊಂದಿದ ಬಸ್‌ ಈ ಭಾಗದ ಜನರ ಗಮನ ಸೆಳೆಯುತ್ತಿದೆ.ಇಳಕಲ್ಲ, ಕನ್ನಡ ಸಿಂಗಾರ, ಬಸ್‌ ಅಲಂಕಾರ, ಹಿರೇಕೆರೂರ ಡಿಪೋ

ಕನ್ನಡಪ್ರಭ ವಾರ್ತೆ ಇಳಕಲ್ಲ

ಅನೇಕ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಅಕ್ಷರಗಳೇ ಮಾಯವಾಗುತ್ತಿರುವಾಗ ಹಿರೇಕೆರೂರ ಡಿಪೋದ ಬಸ್‌ ಚಾಲಕ ಮತ್ತು ನಿರ್ವಾಹಕ ತಅವು ನಿತ್ಯ ಓಡಿಸುವ ಹಿರೇಕೆರೂರ-ಗುಡ್ಡಾಪುರ ಬಸ್‌ನ್ನು ಸ್ವಂತ ಹಣ ಖರ್ಚು ಮಾಡಿ ಕನ್ನಡ ಸಾಹಿತ್ಯ ಬಂಡಾರ ಅಲಂಕಾರ ಹೊಂದಿದ ಬಸ್‌ ಈ ಭಾಗದ ಜನರ ಗಮನ ಸೆಳೆಯುತ್ತಿದೆ.

ಮಂಗಳವಾರ ಇಳಕಲ್ಲ ಬಸ್ ನಿಲ್ದಾಣಕ್ಕೆದೀ ಬಸ್‌ ಬರುವ ಸುದ್ದಿ ತಿಳಿದ ಅನೇಕ ಜನ ಕನ್ನಡಾಭಿಮಾನಿಗಳು ಸ್ವಾಗತಿಸಲು ಇಳಕಲ್ಲ ಬಸ್ ನಿಲ್ದಾಣದಲ್ಲಿ ಕಾಯುತ್ತಾ ನಿಂತಿದ್ದರು. ನಂತರ ಬಂದ ಕನ್ನಡ ಸಾಹಿತ್ಯದಿಂದ ಅಲಂಕಾರಗೊಂಡಿದ್ದ ಬಸ್‌ ಗೆ ಪೂಜೆ ಸಲ್ಲಿಸಿ ಹಾಗೂ ಬಸ್‌ ಚಾಲಕ ಮಡಿವಾಳರ (ತುಂಬ), ನಿರ್ವಾಹಕ ಶಶಿಧರ ಬೋಸ್ಲೆ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಸರಳ ಸಮಾರಂಭದಲ್ಲಿ ಇಳಕಲ್ಲಿನ ಹಿರಿಯರಾದ ರಾಜಶೇಖರ ಸೂಡಿ, ದತ್ತಾತ್ರೆಯ ಮಲಾರಖಾನ, ಮಹಾಂತೇಶ ಕಂದಕೂರ, ತೆಲಕಟ್ಟಿನಮಠ ರಾಘವೇಂದ್ರ ಹುಬ್ಬಳ್ಳಿ, ನಿಲಕಂಠ ಕಾಳಗಿ ಹಾಗೂ ಕೆ.ಎಚ್.ಡಿ.ಸಿ ಕಾಲೋನಿ ನಿವಾಸಿಗಳು, ನಗರದ ನೂರಾರು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಿಣಿಯಾದ ಅಪ್ರಾಪ್ತೆ: ಪೋಕ್ಸೋ ಕೇಸ್‌ ದಾಖಲು
ಅಧಿವೇಶನ ಸಿದ್ಧತೆ ಹೆಸರಿನಲ್ಲಿ ಹಣ ದುರ್ಬಳಕೆ?