ಮಿರಿಯಾಣ ಗಣಿ ಕಾರ್ಮಿಕರಿಗೆ ಸಿಗುತ್ತಿಲ್ಲ ಸೌಲಭ್ಯ: ಅಬ್ದುಲ್

KannadaprabhaNewsNetwork |  
Published : Aug 27, 2024, 01:36 AM IST
ಮಿರಿಯಾಣ ಗ್ರಾಮದಲ್ಲಿ ಕಲ್ಲು ತುಂಬಿದ ಲಾರಿ ಪಲ್ಟಿಯಾಗಿ ಘಟನೆಯಲ್ಲಿ ಗಾಯಗೊಂಡು ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು. | Kannada Prabha

ಸಾರಾಂಶ

ಚಿಂಚೋಳಿ ತಾಲೂಕಿನ ಮಿರಿಯಾಣ, ಕಿಷ್ಟಾಪೂರ, ಕಲ್ಲೂರ, ಸೋಮಲಿಂಗದಳ್ಳಿ, ಬೈರಂಪಳ್ಳಿ ಕಲ್ಲುಗಣಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುವ ಗಣಿಕಾರ್ಮಿಕರು ಅಕಸ್ಮಿಕವಾಗಿ ನಡೆಯುವ ಘಟನೆಯಲ್ಲಿ ಗಾಯಗೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಮಿರಿಯಾಣ, ಕಿಷ್ಟಾಪೂರ, ಕಲ್ಲೂರ, ಸೋಮಲಿಂಗದಳ್ಳಿ, ಬೈರಂಪಳ್ಳಿ ಕಲ್ಲುಗಣಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುವ ಗಣಿಕಾರ್ಮಿಕರು ಅಕಸ್ಮಿಕವಾಗಿ ನಡೆಯುವ ಘಟನೆಯಲ್ಲಿ ಗಾಯಗೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ.

ಆದರೆ ಗಾಯಗೊಂಡವರಿಗೆ ಮತ್ತು ಮೃತಪಟ್ಟ ಕುಟುಂಬಕ್ಕೆ ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಯಾವುದೇ ಪರಿಹಾರ ಸಿಗುತ್ತಿಲ್ಲವೆಂದು ಮಿರಿಯಾಣ ಕಾರ್ಮಿಕ ಮುಖಂಡ ಅಬ್ದುಲ್ ರವೂಫ ಮಿರಿಯಾಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಿರಿಯಾಣ ಗ್ರಾಮದಲ್ಲಿ ಕಲ್ಲು ತುಂಬಿದ ಲಾರಿ ಪಲ್ಟಿಯಾಗಿ ಘಟನೆಯಲ್ಲಿ ಗಾಯಗೊಂಡು ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಿರಿಯಾಣ, ಕಿಷ್ಟಾಪೂರ, ಭೈರಂಪಳ್ಳಿ, ಕಲ್ಲೂರ, ಸೋಮಲಿಂಗದಳ್ಳಿ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ಮಹಿಳೆಯರು, ಪುರುಷ ಗಣಿಕಾರ್ಮಿಕರು ಗಣಿಗಳಲ್ಲಿ ಕಲ್ಲುಪರಸಿ ಒಡೆದು ತಮ್ಮ ಕುಟುಂಬ ಜೀವನ ಸಾಗಿಸುತ್ತಾರೆ. ಕಲ್ಲು ಒಡೆಯುವುದು, ಪರಸಿ ತುಂಬಿ ನಂತರ ಅವುಗಳನ್ನು ಲಾರಿಗಳಲ್ಲಿ ತುಂಬಿ ಇಳಿಸುವುದು ಕೆಲಸ ಮಾಡಿಕೊಂಡು ತಮ್ಮ ಬದುಕಿನ ಬಂಡಿ ಸಾಗಿಸುತ್ತಾರೆ.ಆದರೆ ಕಲ್ಲುಗಣಿಗಾರಿಕೆ ಕೆಲಸದಲ್ಲಿ ತೊಡಗಿದ್ದಾಗ ಅಕಸ್ಮೀಕವಾಗಿ ನಡೆದ ಘಟನೆಯಲ್ಲಿ ಗಾಯಗೊಂಡು ನಂತರ ಮೃತಪಟ್ಟ ಘಟನೆಗಳು ನಡೆಯುತ್ತಿರುವುದರಿಂದ ಬಡವರ ಕುಟುಂಬಗಳು ಅನಾಥವಾಗುತ್ತಿವೆ. ಗಣಿ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಾರ್ಮಿಕ ಕಾರ್ಡು, ಆರೋಗ್ಯ ವಿಮೆ, ಇಎಸ್‌ಐ, ಆಸ್ಪತ್ರೆಯಲ್ಲಿ ಚಿಕಿತ್ಸೆಸೌಲಭ್ಯಗಳು, ಶಿಕ್ಷಣ, ವಿದ್ಯಾರ್ಥಿ ವೇತನ, ವಸತಿ ನಿಲಯಗಳಿಗೆ ಸೇರ್ಪಡೆ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆಪಾದಿಸಿದರು.

ತಾಲೂಕಿನಲ್ಲಿ ಸವಳು ಗಣಿಗಳಲ್ಲಿ, ಸುಣ್ಣದ ಕಲ್ಲುಗಣಿಗಾರಿಕೆ ಮತ್ತು ಗ್ಯಾರೇಜ, ಕಟ್ಟಡ ಕಾರ್ಮಿಕರು, ಹೋಟೆಲ್, ಸಿಮೆಂಟ್‌ ಕಂಪನಿಗಳಲ್ಲಿ ಅನೇಕರು ದುಡಿದ ಜೀವನವನ್ನು ಸಾಗಿಸುತ್ತಾರೆ. ಆದರೆ ಕಾರ್ಮಿಕ ಕಲ್ಯಾಣ ಇಲಾಖೆ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ಕೊಡಿಸುತ್ತಿಲ್ಲ. ಸೇಡಂ, ಚಿಂಚೋಳಿ ಕಲಬುರಗಿ ಕಾರ್ಮಿಕ ಕಲ್ಯಾಣ ಇಲಾಖೆ ನಮ್ಮ ಮಿರಿಯಾಣ ಕಾರ್ಮಿಕರ ಬಗ್ಗೆ ನಿರ್ಲಕ್ಷತನ ವಹಿಸಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಸಚಿವ ಸಂತೋಷ ಲಾಡ ಅವರನ್ನು ಅತೀ ಶೀಘ್ರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿಸಲಾಗುವುದು ಎಂದು ಅಬ್ದುಲ್ ರವೂಫ ಮಿರಿಯಾಣ ಹೇಳಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ