ನೀರಾವರಿ ಇಲಾಖೆಯಲ್ಲಿ ಅನುದಾನ ದುರ್ಬಳಕೆ

KannadaprabhaNewsNetwork |  
Published : Jul 13, 2025, 01:18 AM IST
ಪೋಟೋಇದೆ : 12 ಕೆಜಿಎಲ್ 1 : ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ನೀರಾವರಿ ಇಲಾಖೆಯ ಅನುದಾನದಲ್ಲಿ ಕಾಲುವೆ ನಿರ್ಮಾಣ ಮಾಡುವ ಬದಲು ಬೇರೆ ಕಾಮಗಾರಿಗಳಿಗೆ ಹಣವನ್ನು ಬಳಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ಅಧ್ಯಕ್ಷ ಬಿಎನ್ ಜಗದೀಶ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ನೀರಾವರಿ ಇಲಾಖೆಯ ಅನುದಾನದಲ್ಲಿ ಕಾಲುವೆ ನಿರ್ಮಾಣ ಮಾಡುವ ಬದಲು ಬೇರೆ ಕಾಮಗಾರಿಗಳಿಗೆ ಹಣವನ್ನು ಬಳಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ಅಧ್ಯಕ್ಷ ಬಿಎನ್ ಜಗದೀಶ್ ಆರೋಪಿಸಿದ್ದಾರೆ.

ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕುಣಿಗಲ್ ಶಾಸಕ ಲಿಂಕ್ ಕೆನಾಲ್ ವಿಚಾರವಾಗಿ ಹಾಗೂ ಮಾಗಡಿಗೆ ನೀರು ಕೊಡುವ ಸಂಬಂಧ ಡಿ ನಾಗರಾಜಯ್ಯ ಅವರ ಹೆಸರನ್ನು ಬಳಕೆ ಮಾಡಿದ್ದಾರೆ. 2014ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು ಆಗ ಡಿ ನಾಗರಾಜಯ್ಯ ಶಾಸಕರಾಗಿದ್ದರು. ಅಂದು ಸರ್ಕಾರದ ನಿರ್ಣಯಗಳನ್ನು ಹಾಗೂ ಸಚಿವರಿಗೆ ಶಾಸಕರು ಪತ್ರ ಬರೆದಿದ್ದಾರೆ ಪತ್ರದಲ್ಲಿ ಕುಣಿಗಲ್ ಗೆ ಬರಬೇಕಾದ ಮೂರು ಟಿಎಂಸಿ ನೀರನ್ನು ನೇರವಾಗಿ ಪಡೆಯಲು ಮೇಲ್ ಕಾಲುವೆ ನಿರ್ಮಾಣ ಮಾಡಲು ಪ್ರಸ್ತಾವನೆ ಮಾಡಿದ್ದಾರೆ ಆದರೆ ಈಗಿನ ಶಾಸಕರಾದ ಡಾ.ರಂಗನಾಥ್ ಅದನ್ನು ಬಿಟ್ಟು ಮಾಗಡಿಯ ನೀರಿನ ವಿಚಾರ ಪ್ರಸ್ತಾಪ ಮಾಡುತ್ತಿರುವುದು ಎಷ್ಟು ಸರಿ ಎಂದರು. ಕುಣಿಗಲ್ ನೀರಾವರಿ ವಿಚಾರದಲ್ಲಿ ಕುಣಿಗಲ್ ನ ಹೋರಾಟ ಪ್ರಾರಂಭ ಆದಾಗ ಶಾಸಕರಿಗೆ ಕುಣಿಗಲ್ ತಾಲೂಕಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ನಂತರ ಬಂದ ಶಾಸಕರು ನೀರಾವರಿ ಹೋರಾಟದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲ ಆದರೆ ಅವರು ಇಚ್ಛೆ ಪಟ್ಟಲ್ಲಿ ಶಾಸಕರ ಮನೆಗೆ ನಾನು ದಾಖಲೆ ಸಮೇತ ಹಲವಾರು ಮಾಹಿತಿಗಳನ್ನು ನೀಡುತ್ತೇನೆ ಎಂದರು. ಕುಣಿಗಲ್ ಗೆ ಸಂಪೂರ್ಣ ನೀರಾವರಿ ಬಳಕೆ ಮಾಡಬೇಕಾದ d26 ಹಾಗೂ ಟಿ20 d27 ಕಾಲುವೆಗಳನ್ನು ನಿರ್ಮಾಣ ಮಾಡಿದ್ದು ಅಂದಿನ ಶಾಸಕರಾದ ಡಿ ನಾಗರಾಜಯ್ಯ ಅವರ ನೇತೃತ್ವದಲ್ಲಿ ಕೇವಲ ನೀರು ಹರಿಸಿರುವ ಶಾಸಕರು ನೀರಾವರಿ ಹರಿಕಾರ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ನಿಜವಾದ ನೀರಾವರಿ ಹೋರಾಟಗಾರರಾದ ವೈ ಕೆ ರಾಮಯ್ಯ ಹಾಗೂಹುಚ್ಚಮಾಸ್ತಿಗೌಡ ಹೆಸರುಗಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಅವರ ಹೆಸರಿನಲ್ಲಿ ನೀರಾವರಿ ಹೋರಾಟ ನಡೆಯಲಿ ಎಂದರು. ನೀರಾವರಿ ಸಂಬಂಧ ಹಲವಾರು ಮಾಹಿತಿಗಳನ್ನು ಹಾಗೂ ವಿಚಾರಗಳನ್ನು ಮನಬಂದಂತೆ ಹೇಳುತ್ತಿರುವ ಕುಣಿಗಲ್ ಶಾಸಕ ಡಾ. ರಂಗನಾಥ ಅವರು ಸಾರ್ವಜನಿಕವಾಗಿ ಚರ್ಚೆಗೆ ಬರಲಿ ನನ್ನ ಬಳಿ ಇರುವ ದಾಖಲಾತಿಗಳೊಂದಿಗೆ ನಾನು ಬರುತ್ತೇನೆ ಕೇವಲ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಜೆಡಿಎಸ್ ನ ಮಾಜಿ ಅಧ್ಯಕ್ಷ ಕೆಎಲ್ ಹರೀಶ್, ರಂಗಸ್ವಾಮಿ, ಸೇರಿದಂತೆ ಹಲವಾರು ಜೆಡಿಎಸ್ ಕಾರ್ಯಕರ್ತರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ