ಸಂಸದರ ಹೆಸರು ದುರ್ಬಳಕೆ: ಎ.ಜಿ. ನಾಯ್ಕ ವಿರುದ್ಧ ದೂರು

KannadaprabhaNewsNetwork |  
Published : May 07, 2024, 01:00 AM IST
ಅನಂತಕುಮಾರ ಹೆಗಡೆ ಹೆಸರಿನಲ್ಲಿ ಇರುವ ಪೋಸ್ಟರ್ | Kannada Prabha

ಸಾರಾಂಶ

ಸುಳ್ಳು ಸುದ್ದಿಯನ್ನು ಹಾಕಿ, ಸಂಸದರ ಹೆಸರನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಂಡು ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿರಸಿ: ಸಂಸದ ಅನಂತಕುಮಾರ ಹೆಗಡೆ ಅವರ ಹೆಸರು ದುರುಪಯೋಗಪಡಿಸಿಕೊಂಡು ಬಿಜೆಪಿ ಉತ್ತರ ಕನ್ನಡ ಲೋಕಸಭಾ 2024 ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನಿಸಿದ ಸಿದ್ದಾಪುರದ ಎ.ಜಿ. ನಾಯ್ಕ ಅವರ ವಿರುದ್ಧ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿದ್ದಾಪುರದ ಎ.ಜಿ. ನಾಯ್ಕ ಎಂಬವರು 9480898407 ಮೊಬೈಲ್ ಸಂಖ್ಯೆಯಿಂದ ಮೇ 6ರಂದು ಮಧ್ಯಾಹ್ನ 2.20 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ನನ್ನ ಬಂದು ಬಾಂಧವರೇ... ಮುನ್ನುಗಿ, ಮುನ್ನುಗಿ, ಯಾವುದಕ್ಕೂ ಹೆದರಬೇಡಿ, ಎಲ್ಲಿಯೂ ನಿಲ್ಲಬೇಡಿ, ದೇಶವನ್ನು ಉಳಿಸುವ ಹಾಗೂ ದೇಶದೊಂದಿಗೆ ನಿಲ್ಲುವ ಸದಾವಕಾಶ ನಮ್ಮೆಲ್ಲರಿಗೂ ಮತ್ತೊಮ್ಮೆ ಒದಗಿ ಬಂದಿದೆ. 2014 ಹಾಗೂ 2019ರಲ್ಲಿ ಹೇಗೆ ನಾವುಗಳೆಲ್ಲರೂ, ದೇಶ ವಿರೋಧಿ ಶಕ್ತಿಯ ವಿರುದ್ಧ ಸೆಟೆದು ನಿಂತೆವೋ ಅದೇ ರೀತಿಯಾಗಿ ಮತ್ತೊಮ್ಮೆ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವ ಕಾಲ ಬಂದಿದೆ. ನಾವೆಲ್ಲರೂ ಪ್ರಧಾನ ಸೇವಕ ನರೇಂದ್ರ ಮೋದಿ ಬೆನ್ನಿಗೆ ನಿಂತು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಲೇಬೇಕಾಗಿದೆ. ಇದು ನಮಗೋಸ್ಕರ ಅಲ್ಲವಾದರೂ ನಮ್ಮ ಭವಿಷ್ಯದ ನಾಳೆಗಾಗಿ ಭವಿಷ್ಯದ ಭಾರತಕ್ಕಾಗಿ ಇದೇ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜವನ್ನು ಹಾರಿಸಬೇಕಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಾಹುಗಳಿಗೆ ಶಕ್ತಿ ನೀಡುವ ಕೆಲಸವಾಗಬೇಕಿದೆ ಎಂದು ಬರೆದು, ಅದಕ್ಕೆ ಸಂಸದ ಅನಂತಕುಮಾರ ಹೆಗಡೆ ಭಾವಚಿತ್ರ ಅಳವಡಿಸಿ, ಅನಂತಕುಮಾರ ಹೆಗಡೆ ಅವರೇ ಹೇಳಿಕೆ ನೀಡಿದ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಹಾಕಿ, ಸಂಸದರ ಹೆಸರನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಂಡು ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ