ಐಐಟಿ ಪಿಎಎಲ್‌ಎಸ್‌ ವಾರ್ಷಿಕ ಸಮ್ಮೇಳನದಲ್ಲಿ ಎಂಐಟಿ ಗೆ ಪ್ರಶಸ್ತಿ

KannadaprabhaNewsNetwork |  
Published : Jun 27, 2025, 12:49 AM IST
80 | Kannada Prabha

ಸಾರಾಂಶ

ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ತಾಂಡವಪುರ ಕಾಲೇಜು ಮಹಾರಾಜ ಎಜುಕೇಷನ್ ಟ್ರಸ್ಟ್ ನ ಎರಡನೇ ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಮೂಲಕ ದೇಶದ ತಾಂತ್ರಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವುದು, ನಮ್ಮ ಕಾಲೇಜಿನ ಮುಖ್ಯ ಧೈಯ ಎಂದು ಕಾಲೇಜು ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಐಐಟಿ ಮದ್ರಾಸ್ ನಲ್ಲಿ ನಡೆದ ಪಿಎಎಲ್‌ಎಸ್‌ 2025 ವಾರ್ಷಿಕ ಸಮ್ಮೇಳನದ್ದಲ್ಲಿ ಎಂಐಟಿ ತಾಂಡವಪುರ ಕಾಲೇಜಿಗೆ ಅತ್ಯುತ್ತಮ ಪ್ರದರ್ಶನಕಾರ ಪ್ರಶಸ್ತಿ ಲಭಿಸಿದೆ.

ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ತಾಂಡವಪುರ ಕಾಲೇಜು ಮಹಾರಾಜ ಎಜುಕೇಷನ್ ಟ್ರಸ್ಟ್ ನ ಎರಡನೇ ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಮೂಲಕ ದೇಶದ ತಾಂತ್ರಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವುದು, ನಮ್ಮ ಕಾಲೇಜಿನ ಮುಖ್ಯ ಧೈಯ ಎಂದು ಕಾಲೇಜು ತಿಳಿಸಿದೆ.

ಇಂತಹ ಧ್ಯೇಯವಿರುವ ಕಾಲೇಜಿಗೆ ಜೂ. 20 ರಂದು ಐಐಟಿ ಮದ್ರಾಸ್‌ ನಲ್ಲಿ ನಡೆದ ಪಿಎಎಲ್‌ಎಸ್‌ ವಾರ್ಷಿಕ ಸಮ್ಮೇಳನದಲ್ಲಿ ಕರ್ನಾಟಕ ಪ್ರದೇಶದ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿ ಎಂಐಟಿ ತಾಂಡವಪುರ ಕಾಲೇಜನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ.

ಐಐಟಿ ತಿರುಪತಿಯ ನಿರ್ದೇಶಕ ಪ್ರೊ. ಕಾಳಿದಿಂಡಿ ಎನ್. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಎಂಇಟಿ ಟ್ರಸ್ಟ್ (ರಿ)ಮೈಸೂರಿನ ಜಂಟಿ ಕಾರ್ಯದರ್ಶಿ ಡಾ.ಎಚ್.ಕೆ. ಚೇತನ್ ಹಾಗೂ ಪಿಎಎಲ್‌ಎಸ್‌ ಇಸಿ ಸದಸ್ಯೆ ಡಾ.ಕೆ.ಎನ್‌. ರಂಜಿತ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ವೇಳೆ ಪಿಎಎಲ್‌ಎಸ್‌ ನ ಸಹ- ಅಧ್ಯಕ್ಷೆ ವಿಜಯಲಕ್ಷ್ಮಿ ಶಂಕರ್ ಮತ್ತು ಪಿಎಎಲ್‌ಎಸ್‌ ಚಾಂಪಿಯನ್ ನ ಕಿರಣ್ ಎಂ. ಮೂರ್ತಿ ಇದ್ದರು.

2024-2025ರ ಶೈಕ್ಷಣಿಕ ವರ್ಷದಲ್ಲಿ ನಡೆದ ಈ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳಲ್ಲಿ ಎಂಐಟಿ ತಾಂಡವಪುರದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

ಎನ್ಎಸ್ ಪಿಯಲ್ಲಿ ಒನ್ ಟೈಮ್ ನೋಂದಣಿ ಸಂಖ್ಯೆ ಸೃಜಿಸಿ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಎಚ್.ಡಿ. ಕೋಟೆ ತಾಲೂಕಿನ 2025- 26ನೇ ಸಾಲಿನಿಂದ ಮೆಟ್ರಿಕ್ ಪೂರ್ವ (9 ಮತ್ತು 10ನೇ ತರಗತಿ) ಹಾಗೂ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಭಾರತ ಸರ್ಕಾರದ ಅಭಿವೃಧ್ದಿ ಪಡಿಸಿರುವ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ http//scholarships.gov.in/ ವೆಬ್ ಸೈಟ್ ನಲ್ಲಿ ಒನ್ ಟೈಮ್ ನೋಂದಣಿ ಸಂಖ್ಯೆ ಸೃಜಿಸಿಕೊಂಡು ತದ ನಂತರ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮುಖಾಂತರ ಮೆಟ್ರಿಕ್ ಪೂರ್ವ (9 ಮತ್ತು 10ನೇ ತರಗತಿ) ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 96119 70505 ಸಂಪರ್ಕಿಸಬಹುದು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ